Karnataka news paper

ರಾಜ್ಯದ ಶೇ.90ರಷ್ಟು ಜನರಿಗೆ ಎರಡೂ ಡೋಸ್ ಲಸಿಕೆ ಪೂರ್ಣ: ಸಚಿವ ಡಾ. ಕೆ.ಸುಧಾಕರ್


The New Indian Express

ಬೆಂಗಳೂರು: ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಲ್ಲಿ ಶೇ.90ರಷ್ಟು ಜನರು ಎರಡೂ ಡೋಸ್ ಕೊರೋನಾ ಲಸಿಕೆ ಪಡೆದುಕೊಂಡಿದ್ದು, ಬೆಂಗಳೂರು ಗ್ರಾಮಾಂತರ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಈಗಾಗಲೇ ಶೇ.100ರಷ್ಟು ಜನರು ಎರಡೂ ಡೋಸ್ ಪೂರ್ಣಗೊಂಡಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.
 
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಶೇ.90ರಷ್ಟು ಜನರು ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ವಿಜಯಪುರ ಎರಡನೇ ಡೋಸ್ ವಿತರಣೆಯಲ್ಲಿ ಸೇ.100 ಗುರಿ ಸಾಧನೆ ಮಾಡಿವೆ. ಈ ಸಾಧನೆ ಮಾಡಿರುವ ಜಿಲ್ಲಾಡಳಿತ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಸತತ 3ನೇ ದಿನವೂ ಲಕ್ಷಕ್ಕಿಂತ ಕಡಿಮೆ ಕೇಸ್ ಪತ್ತೆ: ಸೋಂಕಿನ ಪ್ರಮಾಣ ಭಾರೀ ಇಳಿಕೆ

ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಮಟ್ಟದ ಲಸಿಕೆ ಅಭಿಯಾನ ಉತ್ತಮ ಕ್ರಮವಾಗಿದೆ. ಡೆಲ್ಟಾ ರೂಪಾಂತರಿ ವೈರಸ್ ನಿಂಡಾಗಿ ಎರಡನೇ ಅಲೆ ಹಾಗೂ ಓಮಿಕ್ರಾನ್ ನಿಂದಾಗಿ 3ನೇ ಅಲೆ ಎದುರಾಗಿದ್ದು, ಈ ನಡುವಲ್ಲೇ ಜನರು ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದು ಜನರಲ್ಲಿ ರೋಗ ನಿರೋಧ ಶಕ್ತಿಯನ್ನು ಹೆಚಿಸಿ, ಸೋಂಕು ಇಳಿಕೆಯಾಗುವಂತೆ ಮಾಡಲಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಚಂದ್ರಕಾಂತ ಲಹರಿ ಅವರು ಹೇಳಿದ್ದಾರೆ. 

ಈಗಾಗಲೇ ಮೂರು ಅಲೆಗಳು ಎದುರಾಗಿದ್ದು, ಲಸಿಕೆಯು ಕೆಲವು ಮಟ್ಟದವರೆಗೆ ಮಾತ್ರ ರಕ್ಷಣೆಯನ್ನು ನೀಡಲಿದೆ ಎಂಬುದನ್ನು ಓಮಿಕ್ರಾನ್ ತಿಳಿಸಿಕೊಂಡಿದೆ ಎಂದು ಇನ್ನೂ ಕೆಲ ತಜ್ಞರು ಹೇಳಿದ್ದಾರೆ. 

ಇದನ್ನೂ ಓದಿ: ರಾಜ್ಯದಲ್ಲಿ ಇಂದು ಕೊರೋನಾಗೆ 51 ಬಲಿ, ಬೆಂಗಳೂರಿನಲ್ಲಿ 2139 ಸೇರಿ 4452 ಮಂದಿಗೆ ಪಾಸಿಟಿವ್

ಹೆಚ್’ಸಿಜಿ ಕ್ಯಾನ್ಸರ್ ಆಸ್ಪತ್ರೆಯ ವೈದ್ಯ ಡಾ.ವಿಶಾಲ್ ರಾವ್ ಅವರು ಮಾತನಾಡಿ, ವಯಸ್ಕರಿಗೆ ಬೂಸ್ಟರ್ ಡೋಸ್ ಅಗತ್ಯ ಎಂದು ಹಲವು ದೇಶಗಳ ಸಂಶೋಧನೆ ಮತ್ತು ಪುರಾವೆಗಳು ತಿಳಿಸಿವೆ ಎಂದು ಹೇಳಿದ್ದಾರೆ.

ಮಾರುಕಟ್ಟೆಗಳಲ್ಲಿ ಇದೀಗ ಬರುತ್ತಿರುವ ಹೊಸ ಲಸಿಕೆಗಳು ಕೇವಲ ರಕ್ಷಣೆ ಮಾತ್ರವಲ್ಲದೆ, ಕೋವಿಡ್ -19 ತಡೆಗಟ್ಟುವ ಕೆಲಸವನ್ನು ಮಾಡುತ್ತಿವೆ. ರಾಜ್ಯದಲ್ಲಿನ ಈ ಬೆಳವಣಿಗೆ ಗಮನಾರ್ಹವಾಗಿದೆ. ಇದೀಗ ಅರ್ಹ ಜನರಿಗೆ ಬೂಸ್ಟರ್ ಲಸಿಕೆ ನೀಡುವತ್ತ ರಾಜ್ಯ ಸರ್ಕಾರ ಗಮನ ಹರಿಸಬೇಕಿದೆ ಎಂದು ತಿಳಿಸಿದ್ದಾರೆ. 



Read more

[wpas_products keywords=”deal of the day”]