Karnataka news paper

ಮೇಕೆದಾಟು ಯೋಜನೆ ಜಾರಿಗೆ ಕರ್ನಾಟಕ- ತಮಿಳು ನಾಡು ಮಧ್ಯೆ ಒಮ್ಮತ ಮೂಡಿಸಬೇಕು: ಕೇಂದ್ರ ಜಲ ಶಕ್ತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್


The New Indian Express

ಪುದುಚೆರಿ: ಮೇಕೆದಾಟು ಯೋಜನೆಗೆ ಅನುಮೋದನೆ ನೀಡುವ ಮೊದಲು ಕೇಂದ್ರ ಸರ್ಕಾರ ತಮಿಳು ನಾಡು ಮತ್ತು ಕರ್ನಾಟಕ ಮಧ್ಯೆ ಸಹಮತ ತರಲಿದೆ ಎಂದು ಕೇಂದ್ರ ಆಹಾರ ಸಂಸ್ಕರಣೆ ಮತ್ತು ಜಲ ಶಕ್ತಿ ಇಲಾಖೆ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಹೇಳಿದ್ದಾರೆ.

ನಿನ್ನೆ ಪಕ್ಷದ ಕಚೇರಿಯಲ್ಲಿ ಸಮ್ಮೇಳನವೊಂದರಲ್ಲಿ ಮಾತನಾಡಿದ ಅವರು, ಮಧ್ಯವರ್ತಿ ದಾರಿಯ ಮೂಲಕ ಎರಡೂ ರಾಜ್ಯಗಳ ನಡುವಣ ಭಿನ್ನಾಭಿಪ್ರಾಯವನ್ನು ಬಗೆಹರಿಸಲಾಗುತ್ತದೆ. ಎರಡೂ ರಾಜ್ಯಗಳ ಮಧ್ಯೆ ನೀರು ಹಂಚಿಕೆ ಮಾಡುವ ಮೂಲಕ ರಾಜ್ಯಗಳ ಮಧ್ಯೆ ಸಮತೋಲನ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಕೇಂದ್ರ ಸರ್ಕಾರ ಈಗಾಗಲೇ ಬಜೆಟ್ ನಲ್ಲಿ ಗೋದಾವರಿ-ಕೃಷ್ಣ, ಕೃಷ್ಣ-ಪೆನ್ನಾರ್, ಪೆನ್ನಾರ್-ಕಾವೇರಿ, ದಮಂಗಂಗ-ಪಿಂಜಲ್ ಮತ್ತು ಪರ್ -ತಾಪಿ-ನರ್ಮದ ನದಿಗಳನ್ನು ಜೋಡಣೆ ಮಾಡುವುದಾಗಿ ಹೇಳಿದೆ.

ಇದಕ್ಕೆ ಸಂಬಂಧಪಟ್ಟಂತೆ ವಿಸ್ತೃತ ಯೋಜನಾ ವರದಿ(DPR)ಯನ್ನು ತಯಾರಿಸಲಾಗಿದ್ದು ಕೆಲಸ ಆರಂಭಿಸಲು ಕೇಂದ್ರದ ನೆರವನ್ನು ಒದಗಿಸುವ ಕೆಲಸ ಸದ್ಯದಲ್ಲಿಯೇ ಆರಂಭವಾಗಲಿದೆ. ಕೆನ್-ಬೆಟ್ವ ನದಿ ತೀರ ಮತ್ತು ಉಪನದಿಗಳ ತೀರದಲ್ಲಿ ಕೆಲಸ ಆರಂಭವಾಗಿದೆ. ಶಂಕರಬರಣಿ, ತೆನ್ ಪೆನ್ನಿಯಾರ್ ಮತ್ತು ಮತ್ತಲರ್ ನದಿಗಳ ಜೋಡಣೆ ಕುರಿತು ಆಶಾವಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೇಕೆದಾಟು ಯೋಜನೆಯು ರಾಜ್ಯದ ಬರಪೀಡಿತ ಪ್ರದೇಶಗಳಿಗೆ ಸಹಾಯ ಮಾಡುತ್ತದೆ: ತಜ್ಞರು

ಪ್ರತಿ ಮನೆಗೂ ಕುಡಿಯುವ ನೀರು ಒದಗಿಸಲು 60 ಸಾವಿರ ಕೋಟಿ ರೂಪಾಯಿಗಳನ್ನು ಬಜೆಟ್ ನಲ್ಲಿ ಮೀಸಲಿರಿಸಲಾಗಿದ್ದು ರಾಜ್ಯಗಳಿಗೆ ನೀಡುವ ಅನುದಾನದಲ್ಲಿ ಕಡಿತವಾಗುವುದಿಲ್ಲ. ಪ್ರತಿ ರಾಜ್ಯಗಳು ಬಯಸಿದ ಅನುದಾನವನ್ನು ನೀಡಲಾಗುತ್ತದೆ. ಈ ವರ್ಷ 38 ಕೋಟಿ ಮನೆಗಳಿಗೆ ನೀರು ಒದಗಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದರು.

2023 ಅನ್ನು ಕಚ್ಚಾ ಧಾನ್ಯಗಳ ವರ್ಷ ಮತ್ತು ಭಾರತದ ವರ್ಷವೆಂದು ಘೋಷಿಸುವುದರೊಂದಿಗೆ, ಧಾನ್ಯಗಳ ಸಾಂಪ್ರದಾಯಿಕ ಉತ್ಪಾದಕರು ಜಾಗತಿಕ ಬೇಡಿಕೆಗಳನ್ನು ಪೂರೈಸಬಹುದು. ನಬಾರ್ಡ್ ಮೂಲಕ ಕೃಷಿಗೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ಗಳ ಸ್ಥಾಪನೆಗೆ ಹಣಕಾಸಿನ ನೆರವು ನೀಡಲಾಗುವುದು ಎಂದು ಕೂಡ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ತಿಳಿಸಿದರು.



Read more

[wpas_products keywords=”deal of the day”]