
ಹೌದು, ಪ್ರತಿ ವರ್ಷದಂತೆ 2022ರಲ್ಲಿಯೂ ಹಲವು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಗೆ ಸಿದ್ಧತೆ ನಡೆಸಿವೆ. ಈಗಾಗಲೇ ಅನೇಕ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ದಿನಾಂಕವನ್ನು ಘೊಷಣೆ ಮಾಡಿದ್ದು, ಸ್ಮಾರ್ಟ್‌ಫೋನ್ ಪ್ರಿಯರ ಕುತೂಹಲವನ್ನು ಕೆರಳಿಸಿವೆ. ಅದರಲ್ಲೂ ಇತ್ತೀಚಿಗೆ ಬಿಡುಗಡೆಯಾದ ಹೊಸ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 1 ಒಳಗೊಂಡ ಸ್ಮಾರ್ಟ್‌ಫೋನ್‌ಗಳು 2022 ರಲ್ಲಿ ಬಿಡುಗಡೆ ಆಗಲಿವೆ ಎನ್ನಲಾಗಿದೆ. ಹಾಗಾದ್ರೆ 2022ರಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S22
ಸ್ಮಾರ್ಟ್‌ಫೋನ್ ದೈತ್ಯ ಸ್ಯಾಮ್‌ಸಂಗ್ ಕಂಪೆನಿ ತನ್ನ ಗ್ಯಾಲಕ್ಸಿ ಎಸ್-ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ದತೆ ನಡೆಸಿದೆ. ಇದರಲ್ಲಿ ಗ್ಯಾಲಕ್ಸಿ S22 ಸ್ಮಾರ್ಟ್‌ಫೋನ್ ಮುಂದಿನ ವರ್ಷ ಬಿಡುಗಡೆ ಆಗುವ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಮುಂದಿನ ವರ್ಷ ಜನವರಿ ಅಂತ್ಯದಲ್ಲಿ ಅಥವಾ ಫೆಬ್ರವರಿ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್ ಸರಣಿ ಗ್ಯಾಲಕ್ಸಿ S22, S22 Plus ಮತ್ತು Uಅಲ್ಟ್ರಾ ರೂಪಾಂತರಗಳೊಂದಿಗೆ ಬರುವ ಸಾಧ್ಯತೆ ಇದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ 120hz ರಿಪ್ರೇಶ್ ರೇಟ್ ಬೆಂಬಲಿಸುವ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಅಲ್ಲದೆ ಕ್ವಾಡ್-ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ ಎನ್ನಲಾಗಿದೆ.

ಮೊಟೊರೊಲಾ ಎಡ್ಜ್ 30 ಅಲ್ಟ್ರಾ
ಮೊಟೊರೊಲಾ ಎಡ್ಜ್ 30 ಅಲ್ಟ್ರಾ ಸ್ಮಾರ್ಟ್‌ಫೋನ್ ಮುಂದಿನ ವರ್ಷ ಬಿಡುಗಡೆ ಆಗಲಿರುವ ಬಹು ನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಸರಣಿಯ ಅತ್ಯುನ್ನತ ರೂಪಾಂತರವಾಗಿದೆ ಎಂದು ನಿರೀಕ್ಷಿಸಲಾಗಿದೆ. ಇದು ಸ್ನಾಪ್‌ಡ್ರಾಗನ್ 8 Gen 1 ಚಿಪ್‌ನಿಂದ ಚಾಲಿತವಾಗಲಿದೆ ಎಂದು ಹೇಳಲಾಗಿದೆ. ಇದಲ್ಲದೆ ಈ ಫೋನ್ ಪಂಚ್-ಹೋಲ್ ಫ್ರಂಟ್ ಕ್ಯಾಮೆರಾ, ಸೇರಿದಂತೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಕೂಡ ಪಡೆದಿದೆ. ಇದು 144Hz ರಿಫ್ರೆಶ್ ರೇಟ್ ಬೆಂಬಲಿಸುವ 6.6-ಇಂಚಿನ OLED ಡಿಸ್‌ಪ್ಲೇ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಒನ್‌ಪ್ಲಸ್ 10
ಒನ್‌ಪ್ಲಸ್ 10 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆ ಸೃಷ್ಟಿಸಿದೆ. ಈ ಫೋನ್ ಕೂಡ ಸ್ನಾಪ್‌ಡ್ರಾಗನ್ 8 ಜನ್ 1 ಚಿಪ್ ಹೊಂದಿರುವ ಸಾದ್ಯತೆ ಇದೆ. ಇನ್ನು ಈ ಫೋನ್ OnePlus ನ OxygenOS ಸ್ಕಿನ್‌ಗಳನ್ನು ಏಕೀಕರಿಸುವ ಮೊದಲ ಫೋನ್ ಎಂದು ಹೊಂದಿಸಲಾಗಿದೆ. ಹೊಸ ಸ್ಕಿನ್ ನಂತರ ಇನ್ನೂ ಅಪ್‌ಡೇಟ್ ವೇಳಾಪಟ್ಟಿಯಲ್ಲಿರುವ ಎಲ್ಲಾ ಇತರ OnePlus ಫೋನ್‌ಗಳಿಗೆ ಬರುತ್ತದೆ ಎನ್ನಲಾಗಿದೆ.

ಶಿಯೋಮಿ 12
ಶಿಯೋಮಿ ಕಂಪೆನಿ ಮುಂದಿನ ವರ್ಷ ಶಿಯೋಮಿ 12 ಹೊಸ ಸ್ನಾಪ್‌ಡ್ರಾಗನ್ 8 Gen 1 ಪ್ರೊಸೆಸರ್ ಹೊಂದಿರುವ ಮೊದಲ ಫೋನ್‌ಗಳಲ್ಲಿ ಒಂದಾಗಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಸರಣಿಯು ಬಹು ಶೇಖರಣಾ ರೂಪಾಂತರಗಳನ್ನು ಒಳಗೊಂಡಿರುತ್ತದೆ. ಇದು ಬಿಗ್ ಬ್ಯಾಟರಿ ಸಾಮರ್ಥ್ಯ ಪಡೆದಿದ್ದು, 100W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ ಎನ್ನಲಾಗಿದೆ. ಈ ಫೋನ್ ಕ್ವಾಡ್-ರಿಯರ್ ಕ್ಯಾಮೆರಾ ಮತ್ತು ಅಂಡರ್-ಡಿಸ್ಪ್ಲೇ ಫ್ರಂಟ್ ಕ್ಯಾಮೆರಾ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

iQOO 9
ಇನ್ನು ಮುಂದಿನ ವರ್ಷ ಬಿಡುಗಡೆ ಆಗುವ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಲ್ಲಿ iQOO 9 ಕೂಡ ಸೇರಿದೆ. ಈ ಸ್ಮಾರ್ಟ್‌ಫೋನ್ ಸರಣಿಯು ಉನ್ನತ-ಮಟ್ಟದ ಪ್ರೊ ರೂಪಾಂತರವನ್ನು ಒಳಗೊಂಡಂತೆ ಎರಡು ರೂಪಾಂತರಗಳಲ್ಲಿ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಸಾಮರ್ಥ್ಯದ ಡಿಸ್‌ಪ್ಲೇ, ಹೊಸ ಶಾಖ ಪ್ರಸರಣ ವ್ಯವಸ್ಥೆ, ಮೈಕ್ರೋ-ಹೆಡ್ ಗಿಂಬಲ್ ಸ್ಟೆಬಿಲೈಸೇಶನ್ ಸಿಸ್ಟಮ್ ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ ಡ್ಯುಯಲ್ ಸ್ಪೀಕರ್‌ಗಳು ಮತ್ತು ಸ್ಪರ್ಧಾತ್ಮಕ ಗೇಮಿಂಗ್‌ಗಾಗಿ ಪ್ರೆಶರ್ ಸೆನ್ಸಿಟಿವ್ ಶೋಲ್ಡರ್ ಬಟನ್‌ಗಳನ್ನು ಕೂಡ ಹೊಂದಿರುವ ಸಾದ್ಯತೆ ಇದೆ.