Online Desk
ನೊಯ್ಡಾ: ಉತ್ತರ ಪ್ರದೇಶ ರಾಜ್ಯದಲ್ಲಿ ಗುರುವಾರ ಬೆಳಿಗ್ಗೆ 6.30ರಿಂದಲೇ ಮೊದಲ ಹಂತದ ಮತದಾನ ಶುರುವಾಗಿದ್ದು, ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಶೇ.35.03ರಷ್ಟು ಮತದಾನವಾಗಿದೆ.
ಬೆಳಗ್ಗೆಯಿಂದ ಅತೀವ್ರ ಚಳಿಯಿದ್ದರೂ ಕೂಡ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡುತ್ತಿರುವುದು ಕಂಡು ಬಂದಿದೆ.
ಚುನಾವಣಾ ಆಯೋಗದ ಪ್ರಕಾರ, ಶಮ್ಲಿಯಲ್ಲಿ ಶೇ.41.16ರಷ್ಟು ಮತದಾನ, ಮುಜಾಫರ್ ನಗರ ಶೇ.35.73, ಮೀರುತ್ ಶೇ.34.51, ಬಾಘಪತ್ ಶೇ.38.01, ಘಾಜಿಯಾಬಾದ್ ಶೇ.33.40, ಹಾಪುರ್ ಶೇ.39.97, ಗೌತಮಬುದ್ಧ ನಗರ ಶೇ.30.53, ಬುಲಂದ್ ಶೆಹರ್ ಶೇ.37.03, ಅಲಿಗಢ ಶೇ.32.7, ಮಥುರಾ ಶೇ.36.26, ಆಗ್ರಾ ಶೇ.36.93ರಷ್ಟು ಮತದಾನವಾಗಿದ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ 2022: ರಾಜ್ಯದ 58 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ, 623 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ದೇಶದಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಪ್ರತಿಷ್ಠೆಯ ಕಣವಾಗಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯುತ್ತಿದ್ದು, ಆಗ್ರಾ, ಮಥುರಾ, ಅಲಿಗಢ, ಬಾಘಪತ್, ಗೌತಮಬುದ್ಧ ನಗರ ಸೇರಿ 11 ಜಿಲ್ಲೆಗಳ 58 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.
58 ಕ್ಷೇತ್ರಗಳಲ್ಲಿ 623 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, 2.27 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತದಾನ ಪ್ರಕ್ರಿಯೆ ಬೆಳಿಗ್ಗೆ 6.30ಕ್ಕೆ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ.
ಇದರಲ್ಲಿ ಶ್ರೀಕಾಂತ್ ಶರ್ಮಾ, ಸಂದೀಪ್ ಸಿಂಗ್, ಕಪಿಲ್ ದೇವ್ ಅಗರ್ವಾಲ್, ಅತುಲ್ ಗಾರ್ಗ್, ಚೌದರಿ ಲಕ್ಷ್ಮೀ ನಾರಾಯಣ್ ಮುಂತಾದ ಪ್ರಮುಖ ನಾಯಕರ ಭವಿಷ್ಯ ನಿರ್ಧಾರವಾಗಲಿದೆ. ಅಲ್ಲದೆ, ಮೊದಲ ಹಂತದ ಮತದಾನಕ್ಕೆ ಒಳಪಟ್ಟಿರುವ ಕ್ಷೇತ್ರಗಳು ಜಾಟರು ಪ್ರಧಾನವಾಗಿರುವ ಪಶ್ಚಿಮ ಉತ್ತರಪ್ರದೇಶವನ್ನು ಒಳಗೊಂಡಿದೆ.
Read more
[wpas_products keywords=”deal of the day”]