ಹಿಜಾಬ್-ಕೇಸರಿ ಸಂಘರ್ಷ: ಸೋಮವಾರದಿಂದ ಎರಡು ಹಂತದಲ್ಲಿ ಶಾಲಾ-ಕಾಲೇಜು ಆರಂಭ
ಗೊಂದಲವಾದರೆ ಕೂಡಲೇ ಮಾಹಿತಿ ನೀಡಿ
”ಹಿಜಾಬ್ ಮತ್ತು ಕೇಸರಿ ಶಾಲು ಧರಿಸುವ ಕುರಿತ ಗದ್ದಲ ವಿಚಾರದಲ್ಲಿ ಯಾರೂ ಗೊಂದಲಕ್ಕೀಡಾಗುವುದು ಬೇಡ. ಸುಳ್ಳು ಸುದ್ದಿ ಅಥವಾ ವದಂತಿಗಳಿಗೆ ಕಿವಿಗೊಡಬೇಡಿ. ಜತೆಗೆ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್‌ಬುಕ್, ಟ್ವಿಟರ್ ಹಾಗೂ ಇತರೆಡೆ ಹರಿದಾಡುವ ಸುದ್ದಿಗಳು ಹಾಗೂ ಗೊಂದಲಗಳಿದ್ದರೂ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ. ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬೇಡಿ. ಪ್ರತಿಯೊಬ್ಬರೂ ಶಾಂತಿ, ಸಹಬಾಳ್ವೆಯಿಂದ ವರ್ತಿಸಬೇಕು. ಯಾವುದೇ ಸಮಸ್ಯೆ ಉದ್ಭವವಾದರೂ ಪೊಲೀಸರು ನೆರವು ನೀಡಲಿದ್ದಾರೆ” ಎಂದು ಧೈರ್ಯ ತುಂಬಿದರು.
ಇನ್ನು, ಶಾಲಾ-ಕಾಲೇಜು ಆಡಳಿತ ಮಂಡಳಿಯ ಸದಸ್ಯರ ಜತೆಯೂ ಚರ್ಚಿಸಿರುವ ಪೊಲೀಸರು, ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಗೆ ಶಾಲಾ-ಕಾಲೇಜಿನ ಆವರಣಕ್ಕೆ ಪ್ರವೇಶ ನೀಡಬಾರದು. ವಿದ್ಯಾರ್ಥಿಗಳ ವರ್ತನೆಯಲ್ಲಿ ಯಾವುದಾದರೂ ಬದಲಾವಣೆ ಕಂಡುಬಂದರೆ ಕೂಡಲೇ 112 ಪೊಲೀಸ್ ಸಹಾಯವಾಣಿ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಸಲಹೆ ನೀಡಿದ್ದಾರೆ.
ಪೊಲೀಸ್ ಗಸ್ತು ಹೆಚ್ಚಳ
ಈ ಮಧ್ಯೆ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಫೆ.22ರವರೆಗೆ ನಗರದ ಎಲ್ಲ ಶಾಲಾ- ಕಾಲೇಜುಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಆರು ಮಕ್ಕಳು ಮಾಡಿದ ವಿಷಯ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿದೆ: ಬಿಸಿ ನಾಗೇಶ್
ಹೀಗಾಗಿ ಸಮೀಪದಲ್ಲಿ ಯಾರೂ ಗುಂಪು ಸೇರಬಾರದು. ಜತೆಗೆ ಆಯಾ ಠಾಣೆ ವ್ಯಾಪ್ತಿಯ ಚೀತಾ, ಹೊಯ್ಸಳ ವಾಹನಗಳ ಸಿಬ್ಬಂದಿ ಶಾಲಾ-ಕಾಲೇಜು ವ್ಯಾಪ್ತಿಯಲ್ಲಿ ಹೆಚ್ಚು ಗಸ್ತು ತಿರುಗಬೇಕು. ಯಾವುದೇ ಸುಳಿವು ಸಿಕ್ಕರೂ ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
Read more
[wpas_products keywords=”deal of the day sale today offer all”]