Karnataka news paper

ಉತ್ತರ ಪ್ರದೇಶ ಮೊದಲ ಹಂತ ಎಲೆಕ್ಷನ್‌ ಶಾಂತಿಯುತ: 58 ವಿಧಾನಸಭೆ ಕ್ಷೇತ್ರಗಳಲ್ಲಿ ಫಸ್ಟ್‌ ಕ್ಲಾಸ್‌ ಮತದಾನ


ಲಖನೌ: ಚುನಾವಣಾನಿರತ ಪಂಚ ರಾಜ್ಯಗಳ ಪೈಕಿ ಮೊದಲನೇ ಹಂತದ ಮತದಾನ ಉತ್ತರ ಪ್ರದೇಶದ 11 ಜಿಲ್ಲೆಗಳಲ್ಲಿಗುರುವಾರ ಶಾಂತಯುತವಾಗಿ ನಡೆದಿದ್ದು, ಒಟ್ಟಾರೆ ಶೇ.60.17 ರಷ್ಟು ವೋಟಿಂಗ್‌ ಆಗಿದೆ.

”ಕೆಲವೇ ಕೆಲವು ಮತಗಟ್ಟೆಗಳಲ್ಲಿಇವಿಎಂ ಸಾಧನಗಳನ್ನು ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಬಳಿಕ ರಿಪೇರಿ ಮಾಡಲಾಗಿದೆ. ಕೆಲವೆಡೆ , ಪರ್ಯಾಯ ಇವಿಎಂ ವ್ಯವಸ್ಥೆ ಮಾಡಲಾಗಿದೆ” ಎಂದು ಹೆಚ್ಚುವರಿ ಚುನಾವಣಾ ಅಧಿಕಾರಿ ಬಿ.ಡಿ. ರಾಮ್‌ ತಿವಾರಿ ಅವರು ತಿಳಿಸಿದ್ದಾರೆ.

ಉತ್ತರ ಪ್ರದೇಶವು ಕೇರಳವಾಗಿ ಬದಲಾದರೆ…!: ಯೋಗಿ ಹೇಳಿಕೆಗೆ ಪಿಣರಾಯಿ ಕೊಟ್ಟ ತಿರುಗೇಟು ಹೇಗಿದೆ ನೋಡಿ!

ಪಶ್ಚಿಮ ಉತ್ತರ ಪ್ರದೇಶ 11 ಜಿಲ್ಲೆಗಳ 58 ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದೆ. ಈ ಪೈಕಿ ಮುಜಾಫರ ನಗರ ಜಿಲ್ಲೆಯಲ್ಲಿ ಅತಿ ಹೆಚ್ಚು, ಅಂದರೆ ಶೇ.62.14 ಹಾಗೂ ಶಾಮ್ಲಿ ಜಿಲ್ಲೆಯಲ್ಲಿ ಶೇ.61.78 ಮತದಾನ ನಡೆದಿದೆ. ಇದೇ ವೇಳೆ, ಉಳಿದ ಹಂತದ ಎಲೆಕ್ಷನ್‌ ಸಂಬಂಧ ಉತ್ತರ ಪ್ರದೇಶ, ಪಂಜಾಬ್‌, ಉತ್ತರಾಖಂಡ, ಗೋವಾ ಹಾಗೂ ಮಣಿಪುರ ರಾಜ್ಯದಲ್ಲಿ ಚುನಾವಣಾ ಪ್ರಚಾರ ಜೋರಾಗಿದೆ.

ಪ್ರಮುಖ ಅಂಶಗಳು

– ಮತದಾನ ಮುನ್ನ ಪ್ರಧಾನಿ ಸಂದರ್ಶನಕ್ಕೆ ಅವಕಾಶ: ಚು.ಆಯೋಗದ ವಿರುದ್ಧ ಆಕ್ರೋಶ
– ಬಿಜೆಪಿಯಿಂದ ಗೂಂಡಾಗಿರಿ, ಪಾತಕ ಮುಕ್ತ ಯುಪಿ ನಿರ್ಮಾಣ: ನರೇಂದ್ರ ಮೋದಿ
– ಉದ್ಯೋಗಾವಕಾಶಗಳು ಏಕೆ ಹೆಚ್ಚುತ್ತಿಲ್ಲ: ಯೋಗಿಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ
– ಕಮಲ ಹಿಡಿದ ಡಬ್ಲುಡಬ್ಲುಇ ಕುಸ್ತಿಪಟು ‘ದಿ ಗ್ರೇಟ್‌ ಖಲಿ’
– ಕಾಶ್ಮೀರದ ಸೌಂದರ್ಯ, ಬಂಗಾಳದ ಸಂಸ್ಕೃತಿ, ಕೇರಳದ ಶಿಕ್ಷಣ ಸೇರಿಸಿ ಯೋಗಿಗೆ ತರೂರ್‌ ಟಾಂಗ್‌

ವಂಶಪಾರಂಪರ್ಯವೇ ಪ್ರಜಾಪ್ರಭುತ್ವದ ಶತ್ರು

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಿಂದ ಆರಂಭಗೊಂಡು ಹರಿಯಾಣ, ಉತ್ತರ ಪ್ರದೇಶ, ಜಾರ್ಖಂಡ್‌ ಹಾಗೂ ತಮಿಳುನಾಡಿನವರೆಗೂ ದೇಶದಲ್ಲಿ ಕೌಟುಂಬಿಕ ರಾಜಕಾರಣ ಪ್ರಬಲವಾಗಿದೆ. ಒಂದು ಕುಟುಂಬ ಮಾತ್ರವೇ ರಾಜಕೀಯ ಪಕ್ಷವೊಂದನ್ನು ಮುನ್ನಡೆಸುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ಧಕ್ಕೆ. ಕುಟುಂಬ ರಕ್ಷಣೆಯೊಂದೇ ಅವರಿಗೆ ಮುಖ್ಯ, ರಾಷ್ಟ್ರದ ಹಿತಾಸಕ್ತಿ ಕಡೆಗಣಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಈ ಮೂಲಕ ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌, ಎನ್‌ಸಿ ಮುಖ್ಯಸ್ಥ ಉಮರ್‌ ಅಬ್ದುಲ್ಲಾ, ಡಿಎಂಕೆ ನಾಯಕ ಸ್ಟಾಲಿನ್‌ ಸೇರಿದಂತೆ ಹಲವು ಪ್ರತಿಪಕ್ಷಗಳ ನಾಯಕರಿಗೆ ಪರೋಕ್ಷವಾಗಿ ಕುಟುಕಿದ್ದಾರೆ.

ಉತ್ತರ ಪ್ರದೇಶವು ಕೇರಳವಾಗಿ ಬದಲಾದರೆ…!: ಯೋಗಿ ಹೇಳಿಕೆಗೆ ಪಿಣರಾಯಿ ಕೊಟ್ಟ ತಿರುಗೇಟು ಹೇಗಿದೆ ನೋಡಿ!

‘‘ಉತ್ತರ ಪ್ರದೇಶದ ರಾಜಕಾರಣದಲ್ಲಿ 45 ಮಂದಿ ಒಂದೇ ಕುಟುಂಬಸ್ಥರು ಪ್ರಮುಖ ಅಧಿಕಾರಗಳನ್ನು ಭದ್ರವಾಗಿ ಹಿಡಿದುಕೊಂಡಿದ್ದಾರೆ ಎಂದು ಕೇಳಿಪಟ್ಟಿದ್ದೇನೆ. ಸಮಾಜವಾದಿಗಳು ಪರಿವಾರವಾದಿಗಳಾಗಿದ್ದಾರೆ. ಲೋಹಿಯಾ, ಜಾಜ್‌ರ್‍ ಫರ್ನಾಂಡಿಸ್‌ , ನಿತೀಶ್‌ ಕುಮಾರ್‌ ಅವರಂತಹ ಸಮಾಜವಾದಿಗಳು ಮಾತ್ರವೇ ಸಿದ್ಧಾಂತ ಪಾಲಿಸಿದ್ದಾರೆ. ಆದರೆ, ಬಿಜೆಪಿಯಲ್ಲಿ ಜನಸಂಘದ ದಿನಗಳಿಂದಲೂ ನಮ್ಮ ಸಿದ್ಧಾಂತವು ಹೆಚ್ಚೆಚ್ಚು ಜನಸಾಮಾನ್ಯರಿಗೆ ನೆರವಾಗುವಂತಹ ಪೂರಕ ಸರಕಾರಿ ನೀತಿಗಳನ್ನು ರಚಿಸುವುದಾಗಿದೆ. ನಮ್ಮ ಸರಕಾರವು ಅದನ್ನೇ ಮಾಡಿಕೊಂಡು ಬಂದಿದೆ ’’ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.



Read more

[wpas_products keywords=”deal of the day sale today offer all”]