ಇತ್ತೀಚೆಗೆ ನಟ ಅಕ್ಷಯ್ ಕುಮಾರ್ ಅವರು ಕಪಿಲ್ ಶರ್ಮಾ ಜೊತೆಗೆ ಮನಸ್ತಾಪ ಮಾಡಿಕೊಂಡಿದ್ದರು. ಆಮೇಲೆ ನಮ್ಮ ನಡುವಿನ ಸಮಸ್ಯೆ ಬಗೆಹರಿದಿದೆ ಎಂದು ಕಪಿಲ್ ಶರ್ಮಾ ಟ್ವೀಟ್ ಮಾಡಿದ್ದರು. ಇದಕ್ಕೂ ಮುನ್ನ ನಟ ಮುಖೇಶ್ ಖನ್ನಾ, ಎಂ ಎಸ್ ಧೋನಿ, ಅಜಯ್ ದೇವಗನ್ ಇನ್ನುಳಿದ ಸೆಲೆಬ್ರಿಟಿಗಳು ‘ದಿ ಕಪಿಲ್ ಶರ್ಮಾ ಶೋ’ನಲ್ಲಿ ಭಾಗವಹಿಸಲು ತಿರಸ್ಕರಿಸಿದ್ದರು.
ಸ್ಮೃತಿ ಇರಾನಿ
ಕಳೆದ ವರ್ಷ ನವೆಂಬರ್ನಲ್ಲಿ ನಟಿ, ಸಂಸದೆ ಸ್ಮೃತಿ ಇರಾನಿ ಅವರು ಶೋ ಸೆಟ್ವೊಳಗೆ ಎಂಟ್ರಿ ನೀಡುವಾಗ ಸೆಕ್ಯುರಿಟಿ ಗಾರ್ಡ್ ಅವರನ್ನು ಮಿನಿಸ್ಟರ್ ಎಂದು ಗುರುತಿಸದೆ ಸೆಟ್ ಒಳಗೆ ಎಂಟ್ರಿಯೇ ನೀಡಿರಲಿಲ್ಲ. ಆಮೇಲೆ ಶೋನ ಆಯೋಜಕರು ಇದನ್ನು ಗಮನಿಸಿದಾಗ ಅವರು ಮುಜುಗರಪಟ್ಟುಕೊಳ್ಳುವಂತಾಯ್ತು. ಕಪಿಲ್ ಶರ್ಮಾ ಅವರು ಮಂತ್ರಿ ಹಾಗೂ ಮಾಜಿ ಕಿರುತೆರೆ ನಟಿ ಸ್ಮೃತಿ ಇರಾನಿಯ ಕ್ಷಮೆ ಕೇಳಿದ್ದರು.
ಕಪಿಲ್ ಶರ್ಮಾ ಶೋಗೆ ಹೋಗದಿರಲು ಅಕ್ಷಯ್ ಕುಮಾರ್ ನಿರ್ಧಾರ; ಇದರ ಹಿಂದಿದೆ ನಂಬಿಕೆ ದ್ರೋಹದ ಕಥೆ!
ನಟ ಮುಖೇಶ್ ಖನ್ನಾ
ಕಳೆದ ವರ್ಷ ಮಹಾಭಾರತ ತಂಡ ‘ದಿ ಕಪಿಲ್ ಶರ್ಮಾ ಶೋ’ಗೆ ಹೋದಾಗ ತಾನು ಯಾಕೆ ಭಾಗವಹಿಸಲಿಲ್ಲ ಎಂದು ಮುಖೇಶ್ ಖನ್ನಾ ಅವರು ತಿಳಿಸಿದ್ದರು. “ಇಡೀ ದೇಶದಲ್ಲಿ ಕಪಿಲ್ ಶರ್ಮಾದಷ್ಟು ಕೆಟ್ಟ ಶೋ ಇದೆ ಎಂದು ನಾನು ಭಾವಿಸಲಾರೆ. ಈ ಶೋನಲ್ಲಿ ಡಬಲ್ ಮೀನಿಂಗ್ ಶಬ್ದಗಳು, ಪ್ರತಿ ಕ್ಷಣದಲ್ಲಿಯೂ ಗಲೀಜಿನಿಂದ ಕೂಡಿದ ಮಾತುಗಳು ಇರುತ್ತವೆ. ಗಂಡಸರು ಹೆಂಗಸರ ಉಡುಪು ಹಾಕಿಕೊಳ್ತಾರೆ, ಅವರ ಕಾಮಿಡಿಗೆ ಜನರು ಹೊಟ್ಟೆ ಹಿಡಿದುಕೊಂಡು ನಗುತ್ತಾರೆ” ಎಂದು ಮುಖೇಶ್ ಖನ್ನಾ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದರು.
ನಟ ಅಜಯ್ ದೇವಗನ್
2017ರಲ್ಲಿ ಅಜಯ್ ಹಾಗೂ ಬಾದ್ಷಾ ಟೀಂ ‘ದಿ ಕಪಿಲ್ ಶರ್ಮಾ ಶೋ’ ಸೆಟ್ಗೆ ಆಗಮಿಸಿತ್ತು. ಆದರೆ ಸಕಾಲಕ್ಕೆ ಕಪಿಲ್ ಶರ್ಮಾ ಸೆಟ್ಗೆ ಬಂದಿರಲಿಲ್ಲ. ಅಜಯ್ ದೇವಗನ್ ಅವರು 15 ನಿಮಿಷ ಕಾದು ಸೆಟ್ನಿಂದ ಹೊರಗೆ ನಿರ್ಗಮಿಸಿದರು. ಆಮೇಲೆ ಅಜಯ್ ಅವರು ಕೋಪದಿಂದ ಸೆಟ್ನಿಂದ ಹೊರಬಂದಿರಲಿಲ್ಲ, ಅನಾರೋಗ್ಯವಾಗಿತ್ತು ಎಂದಿದ್ದರು.
ಹೃದಯದ ಸರ್ಜರಿಗೊಳಪಟ್ಟ ‘ದಿ ಕಪಿಲ್ ಶರ್ಮಾ ಶೋ’ ಖ್ಯಾತಿಯ ಹಾಸ್ಯ ನಟ ಸುನೀಲ್ ಗ್ರೋವರ್
ಎಂ ಎಸ್ ಧೋನಿ
ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಕಪಿಲ್ ದೇವ್ ಮುಂತಾದವರು ಈ ಶೋಗೆ ಆಗಮಿಸಿದ್ದರು. ಆದರೆ ಮಹೇಂದ್ರ ಸಿಂಗ್ ಧೋನಿ ಅವರು ಈ ಶೋಗೆ ಆಗಮಿಸಲು ತಿರಸ್ಕರಿಸಿದ್ದರು. ಬ್ಯುಸಿ ಶೆಡ್ಯೂಲ್ ಇರೋದರಿಂದ ಧೋನಿ ಈ ಶೋನಲ್ಲಿ ಭಾಗಿಯಾಗಲಿಲ್ಲ ಎಂದು ಮೇಲ್ನೋಟಕ್ಕೆ ಹೇಳಲಾಗಿದೆ.
Read more
[wpas_products keywords=”deal of the day sale today offer all”]