ಹೊಸಪೇಟೆ: ದಿವಂಗತ ಪುನೀತ್ ರಾಜಕುಮಾರ್ ನಟನೆಯ ‘ಜೇಮ್ಸ್’ ಚಿತ್ರದ ಟೀಸರ್ ಶುಕ್ರವಾರ (ಫೆ.11) ಬಿಡುಗಡೆಯಾಗಲಿದ್ದು, ಚಿತ್ರದ ಯಶಸ್ವಿಗೆ ಪುನೀತ್ ಅಭಿಮಾನಿ ಬಳಗ, ಫ್ರೆಂಡ್ಸ್ ಗ್ರುಪ್‌ನವರು ಗುರುವಾರ ಹಂಪಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಹಂಪಿ ರಥಬೀದಿಯಲ್ಲಿ ಪುನೀತ್ ರಾಜಕುಮಾರ್ ಅವರ ಬೃಹತ್ ಫ್ಲೆಕ್ಸ್ ಹಾಕಿ, ಅದಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿದರು. ಹಾಲಿನ ಅಭಿಷೇಕ್ ಮಾಡಿದರು. 51 ತೆಂಗಿನಕಾಯಿ ಒಡೆದರು.
ಬಳಗದ ಹುಲುಗಪ್ಪ ಮಾತನಾಡಿ, ‘ಪುನೀತ್ ಅವರ ಅಗಲಿಕೆಯಿಂದ ಅನೇಕರಿಗೆ ನೋವಾಗಿದೆ. ಅವರು ಮಾಡಿರುವ ಉತ್ತಮ ಕೆಲಸಗಳಿಂದ ಜನಮಾನಸದಲ್ಲಿ ಇದ್ದಾರೆ. ಅವರ ಚಿತ್ರದ ಟೀಸರ್, ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಸಿನಿಮಾ ದೊಡ್ಡ ಯಶಸ್ಸು ಕಾಣಲಿ. ಅವರ ಅಭಿಮಾನಿಗಳು ಚಿತ್ರ ನೋಡಿ ಯಶಸ್ವಿಗೊಳಿಸಬೇಕು ಎಂದರು.
ಹಂಪಿ ರವಿ, ಬಾಬಾ ರಾಮನಗೌಡ, ಬಸವರಾಜಗೌಡ, ಸ್ವಾತಿ ಸಿಂಗ್, ಎಚ್ ಬಸವರಾಜ, ಬಿ.ಎನ್. ನಂಜುಂಡಿ, ಜೋಳದ ನಾಗರಾಜ, ಶ್ರೀನಿವಾಸ್, ಸ್ಥಳೀಯ ಸಂಚಾರ ಠಾಣೆಯ ಪೊಲೀಸರು ಇದ್ದರು.
Read More…Source link
[wpas_products keywords=”deal of the day party wear for men wedding shirt”]