Karnataka news paper

‘ಕಾಶ್ಮೀರ ಒಗ್ಗಟ್ಟು ದಿನ’ ಸೋಷಿಯಲ್ ಮೀಡಿಯಾ ಪೋಸ್ಟ್: ಭಾರತೀಯರ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕೆ ವಿಷಾದವಿದೆ ಎಂದ ಸುಜುಕಿ ಮೋಟಾರ್ಸ್


PTI

ನವದೆಹಲಿ: ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುವ ತನ್ನ ಪಾಕಿಸ್ತಾನಿ ಡೀಲರ್‌ಗಳು ಮತ್ತು ವ್ಯಾಪಾರ ಪಾಲುದಾರರ ಅನಧಿಕೃತ ಸೋಷಿಯಲ್ ಮೀಡಿಯಾ ಪೋಸ್ಟ್ ನಿಂದ ಭಾರತೀಯರ ಭಾವನೆಗಳಿಗೆ ಧಕ್ಕೆಯುಂಟಾಗಿರುವುದಕ್ಕೆ ಜಪಾನಿನ ವಾಹನ ತಯಾರಕ ಕಂಪೆನಿ ಸುಜುಕಿ ಮೋಟಾರ್ ವಿಷಾದ ವ್ಯಕ್ತಪಡಿಸಿದೆ.

ಮಾರುತಿ ಸುಜುಕಿ ಭಾರತದಲ್ಲಿ ಅತಿದೊಡ್ಡ ಕಾರು ತಯಾರಿಕಾ ಮತ್ತು ಮಾರಾಟ ಕಂಪೆನಿಯಾಗಿದ್ದು, ಪ್ರಪಂಚದ ಯಾವುದೇ ಭಾಗದಲ್ಲಿ ಯಾವುದೇ ರಾಜಕೀಯ ಅಥವಾ ಧಾರ್ಮಿಕ ನಿಲುವುಗಳಲ್ಲಿ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.

ಮಾರುತಿ ಸುಜುಕಿ ಇಂಡಿಯಾ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಹೇಳಿಕೆ ನೀಡಿರುವ ಮಾತೃ ಸಂಸ್ಥೆ ಸುಜುಕಿ ಮೋಟರ್ ಕಾರ್ಪೊರೇಷನ್, “ಉತ್ಪನ್ನಗಳು, ಸೇವೆಗಳು, ನೈತಿಕ ವ್ಯಾಪಾರ ನಡವಳಿಕೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ ಕಡೆಗೆ ಸಾಮಾಜಿಕ ಜವಾಬ್ದಾರಿಯ ಪ್ರಯತ್ನಗಳ ಮೂಲಕ ವಿಶ್ವದಾದ್ಯಂತ ಎಲ್ಲರೂ ನಂಬಿಕೆಯಿಡುವ ಕಂಪೆನಿಯಾಗಿ ಬೆಳೆಸುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದೆ. 

ಸಂವೇದನಾರಹಿತ ಮಾತುಗಳಿಂದ ಭಾರತೀಯರ ಭಾವನೆಗಳಿಗೆ ನೋವಾಗಿದ್ದರೆ ನಾವು ತೀವ್ರವಾಗಿ ವಿಷಾದಿಸುತ್ತೇವೆ. 
ಈ ನಿಟ್ಟಿನಲ್ಲಿ ನಮ್ಮ ಕಂಪನಿಯ ನೀತಿಯನ್ನು ಕಟ್ಟುನಿಟ್ಟಾಗಿ ಅನುಸರಿಸಲು ನಮ್ಮ ವ್ಯಾಪಾರ ಸಹವರ್ತಿಗಳಿಗೆ ಸಲಹೆ ನೀಡುವುದು ನಮ್ಮ ನಿರಂತರ ಪ್ರಯತ್ನವಾಗಿದೆ ಎಂದು ಕಂಪೆನಿ ಹೇಳಿದೆ.

ಇದನ್ನೂ ಓದಿ: ಕಾಶ್ಮೀರ ಕುರಿತು ಪೋಸ್ಟ್‌: ಹ್ಯುಂಡೈ, ಕಿಯಾ, ಕೆಎಫ್‌ಸಿ, ಪಿಜ್ಜಾ ಹಟ್ ವಿರುದ್ಧ ಎಂಸಿಎಗೆ ದೂರು

ಪ್ರಪಂಚದ ಯಾವುದೇ ಭಾಗದಲ್ಲಿ ನಾವು ಯಾವುದೇ ರಾಜಕೀಯ ಅಥವಾ ಧಾರ್ಮಿಕ ಒಲವುಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಈ ಕುರಿತು ನಮ್ಮ ವಿತರಕರು ಅಥವಾ ವ್ಯಾಪಾರ ಸಹವರ್ತಿಗಳು ಯಾರೂ ಪ್ರತಿನಿಧಿಸುವುದಿಲ್ಲ ಎಂದು ಮಾತೃ ಸಂಸ್ಥೆ ಸುಜುಕಿ ಮೋಟಾರ್ ಕಾರ್ಪೊರೇಷನ್ ಹೇಳಿದೆ.

ಪಾಕಿಸ್ತಾನದಲ್ಲಿರುವ ಸುಜುಕಿಯ ಡೀಲರ್ಸ್ ಮತ್ತು ವ್ಯಾಪಾರ ಸಹಭಾಗಿತ್ವ ಸೋಷಿಯಲ್ ಮೀಡಿಯಾದಲ್ಲಿ ಕಾಶ್ಮೀರ್ ಸಾಲಿಡಾರಿಟಿ ಡೇ(ಕಾಶ್ಮೀರ ಒಗ್ಗಟ್ಟಿನ ದಿನ) ಎಂದು ಪೋಸ್ಟ್ ಹಾಕಿತ್ತು. 





Read more…

[wpas_products keywords=”deal of the day”]