ಕೆಪಿಸಿಸಿ ಕಚೇರಿಯಲ್ಲಿ ನಡೆದ ಯುವ ಪ್ರತಿಜ್ಞಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ದೇಶ ಬಿಕ್ಕಟ್ಟು ಎದುರಿಸುತ್ತಿದೆ, ಸವಾಲು ಎದುರಿಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಡವರು ದಲಿತ, ಹಿಂದುಳಿದ ಅಲ್ಪಸಂಖ್ಯಾತರು ಸಂಕಷ್ಟ ಎದುರಿಸುವಂತಾಗಿದೆ. ಕಾಂಗ್ರೆಸ್ ಮುಂದೆ ದೇಶ ಉಳಿಸುವ ಹಾಗೂ ಸಂವಿಧಾನ ರಕ್ಷಣೆ ಮಾಡುವ ದೊಡ್ಡ ಸವಾಲು ಇದೆ ಎಂದರು. ದೇಶ ಆರ್ಥಿಕವಾಗಿ ದಿವಾಳಿ ಆಗುತ್ತಿದೆ. ಇದನ್ನು ತಡೆಗಟ್ಟುವುದು ನಮ್ಮ ಜವಾಬ್ದಾರಿ. ಇಂತಹ ಸಂದರ್ಭಗಳಲ್ಲಿ ಯುವಕರ ಜವಾಬ್ದಾರಿ ಕೂಡಾ ಹೆಚ್ಚಿದೆ ಎಂದು ಕಿವಿಮಾತು ಹೇಳಿದರು.
ಬಿಜೆಪಿ ಏಳೆಂಟು ವರ್ಷದಲ್ಲಿ ಜನಪರ ಕೆಲಸ ಮಾಡಿಲ್ಲ. ನುಡಿದಂತೆ ನಡೆದಿಲ್ಲ. ಬದಲಾಗಿ ಭಾವನಾತ್ಮಕ ವಿಚಾರವಾಗಿ ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡಿದೆ. ರಾಜ್ಯ ಸರ್ಕಾರ ಕಳೆದ ಎರಡು ವರ್ಷದಲ್ಲಿ ಏನೂ ಮಾಡಿಲ್ಲ ಅಭಿವೃದ್ಧಿ ನಿಂತೋಗಿದೆ ಹಾಗೂ ಭ್ರಷ್ಟಾಚಾರ ಹೆಚ್ಚಾಗಿದೆ. ಇದನ್ನು ಮುಚ್ಚಿಕೊಳ್ಳಲು ಭಾವನಾತ್ಮಕ ವಿಚಾರ ಜನರ ಮುಂದಿಟ್ಟು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ ಎಂದು ಆರೋಪಿಸಿದರು.
ಹಿಜಾಬ್ ನಾನ್ ಇಶ್ಯೂ. ಬಹಳ ವರ್ಷಗಳಿಂದ ಮುಸ್ಲಿಂ ಯುವತಿಯರು ಧರಿಸುತ್ತಿದ್ದಾರೆ. ಇದ್ದಕ್ಕಿದ್ದಂತೆ ಅದನ್ನು ಇಶ್ಯೂ ಮಾಡಿದರು. ಅವರ ತಪ್ಪು ಮುಚ್ಚಿಕೊಳ್ಳಲು ಹಿಂದುತ್ವ ಗಟ್ಟಿ ಮಾಡಲು ಹಾಗೂ ಮತಕ್ಕಾಗಿ ಇಂತಹ ದುಷ್ಟ ಪ್ರಯತ್ನ ನಡೆದಿದೆ ಎಂದರು. ಉಡುಪಿಯಲ್ಲಿ ಆರಂಭವಾದ ವಿವಾದ ಕುಂದಾಪುರ ಇದೀಗ ರಾಜ್ಯದ ಅನೇಕ ಕಡೆಯಲ್ಲಿ ಪ್ರಾರಂಭವಾಗಿದೆ. ಕೇಸರಿ ಶಾಲು ಹಾಕೊಂಡು ಶಾಲೆಗೆ ಬಂದಿದ್ದು ನಾನು ನೋಡಿಲ್ಲ. ಸಂಘಪರಿವಾರ ಖರೀದಿ ಮಾಡಿ ಬಲಾತ್ಕಾರವಾಗಿ ಕೇಸರಿ ಶಾಲು ಹಾಕಿ ಕಾಲೇಜಿಗೆ ಕಳಿಸ್ತಿದ್ದಾರೆ. ಇದನ್ನು ಹುಟ್ಟುಹಾಕಿದವರು ಆರ್ ಎಸ್ ಎಸ್ ಸಂಘಪರಿವಾರ. ಬೆಂಕಿ ಹಚ್ಚಿದ್ದಾರೆ ಅದನ್ನು ನಂದಿಸುವುದು ಕಷ್ಟದ ಕೆಲಸ ಎಂದು ಹೇಳಿದರು.
ಇವರೇ ಹುಟ್ಟುಹಾಕಿ ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಕೇಸರಿ ಶಾಲು ಹಾಕಿಸಿದವರು ಯಾರು ಅದನ್ನು ತನಿಖೆ ಮಾಡಿ ಎಂದ ಅವರು, ಕುರಾನಿನಲ್ಲಿ ಸ್ಕಾರ್ಫ್ ಬಗ್ಗೆ ಉಲ್ಲೇಖವಿದೆ, ಧರ್ಮದ ಪ್ರಕಾರವಾಗಿ ಅವರು ನಡೆದುಕೊಂಡಿದ್ದಾರೆ. ಹಿಜಾಬ್ ಧರಿಸಿದರೆ ಯಾರಿಗಾದರೂ ತೊಂದರೆ ಆಗುತ್ತಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಹೆಣ್ಣುಮಕ್ಕಳಿಗೆ ಹಿಜಾಬ್ ಧರಿಸಿದ ಕಾರಣಕ್ಕಾಗಿ ಪ್ರಾಂಶುಪಾಲ ಒಳಗಡೆ ಬಿಡಲಿಲ್ಲ. ಇದು ಅಮಾನವೀಯ. ಮಾನ ಮರ್ಯಾದೆ ಇದ್ದಿದ್ದರೆ ಅವರನ್ನು ಅಮಾನತು ಮಾಡಬೇಕಿತ್ತು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಇನ್ನು ಮಕ್ಕಳಲ್ಲಿ ಧರ್ಮ ಜಾತಿ ತುಂಬಿ ಹಾಳು ಮಾಡುವ ಕೆಲಸ ಸಂಘ ಪರಿವಾರ ಮಾಡುತ್ತಿದೆ ಎಂದ ಸಿದ್ದರಾಮಯ್ಯ, ದೇಶದಲ್ಲಿ ಏನು ಅಪಾಯ ಆಗುತ್ತಿದೆ ಎಂದು ಊಹಿಸಲ್ಲ ಇವರು. ರಾಷ್ಟ್ರ ಧ್ವಜ ಇಳಿಸಿ ಕೇಸರಿ ಧ್ವಜ ಹಾಕಿಸಿದ್ದಾರೆ. ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜಹಾರಿಸುತ್ತೇವೆ ಎಂದು ಹೇಳುತ್ತಾರೆ.ಅವರು ಮಂತ್ರಿ ಆಗಲು ನಾಲಾಯಕ್ , ಇವರು ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯಕ್ .ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕೆ.ಎಸ್ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
Read more
[wpas_products keywords=”deal of the day sale today offer all”]