Karnataka news paper

ಹಿಜಾಬ್ ವಿವಾದ ಹಿಂದೆ ಕಾಂಗ್ರೆಸ್ ಷಡ್ಯಂತ್ರ, ಕಾಲೇಜು ಫೀಸ್ ಕಟ್ಟಲು ಆಗದವರು ಕೋರ್ಟ್ ಮೆಟ್ಟಿಲೇರುವುದು ಹೇಗೆ?: ಬಿಜೆಪಿ ಸಚಿವರ ಆರೋಪ


Online Desk

ಬೆಂಗಳೂರು: ಸರ್ಕಾರಿ ಶಾಲೆಗೆ ಫೀಸ್ ಕಟ್ಟಲು ಆಗದವರಿಗೆ ಕೋರ್ಟ್ ಮೆಟ್ಟಿಲು ಹತ್ತುವುದಕ್ಕೆ ಯಾರು ಬೆಂಬಲ ಕೊಟ್ಟಿದ್ದಾರೆ, ಕೋರ್ಟ್, ವ್ಯಾಜ್ಯಗಳಿಗೆ ನೀಡಲು ಎಲ್ಲಿಂದ ಹಣ ಬರುತ್ತಿದೆ ಎಂದು ಸಚಿವ ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಪಿಎಫ್ಐ, ಎಸ್ ಡಿಪಿಐ ಜೊತೆ ಒಳ ಒಪ್ಪಂದ ಮಾಡಿಕೊಂಡವರು ಕಾಂಗ್ರೆಸ್ ನವರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಡೀ ರಾಜ್ಯದ ಜನರಿಗೆ ಹಿಜಾಬ್ ಹಾಕಿಸುತ್ತಾರೆ ಎಂದರು.

ತಿಲಕ ಇಟ್ಟುಕೊಂಡು ಬಂದವರನ್ನು ಕಾಂಗ್ರೆಸ್ ನವರು ವಿರೋಧಿಸುತ್ತಾರೆ. ಕರ್ನಾಟಕವನ್ನು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನವರು ಏನು ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ದ್ವೇಷವನ್ನು ಹಚ್ಚುವ ಕೆಲಸ ಮಾಡುತ್ತಿದೆ. ದೇಶ ವಿಭಜನೆಗೆ ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ಆರೋಪಿದರು.

ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಎಲ್ಲರೂ ಒಂದೇ ಭಾವನೆ ಮೂಡಿಸಲು ಇರುವದ್ದು, ಅದನ್ನು ಎಲ್ಲರೂ ಪಾಲಿಸಬೇಕು. ಕಾಲೇಜಿನಲ್ಲಿ ಈ ರೀತಿಯ ಭಾವನೆ ಸೃಷ್ಟಿ ಮಾಡುವುದಕ್ಕೆ ಯಾರು ಕಾರಣ, ಪ್ರತ್ಯೇಕವಾದವನ್ನು ಕೇಳುವವರಿಗೆ ಯಾರು ಬೆಂಬಲಿಸುತ್ತಾರೆ, ಇದೊಂದು ವ್ಯವಸ್ಥಿತ ಪಿತೂರಿ ಎಂದು ಆಪಾದಿಸಿದರು.

ಹಿಜಾಬ್ ಗಲಾಟೆ ಕಾಂಗ್ರೆಸ್ ಷಡ್ಯಂತ್ರ: ರಾಜ್ಯಾದ್ಯಂತ ಕಿಚ್ಚು ಹಚ್ಚಿರುವ ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ ನ ಒಂದು ವರ್ಗದ ಷಡ್ಯಂತ್ರವಿದೆ. ಕಾಂಗ್ರೆಸ್ ನ ಒಂದು ವರ್ಗ ಪ್ರೇರಣೆ ಮಾಡುತ್ತಿದ್ದು, ಮತ್ತೊಂದು ವರ್ಗ ಬ್ಯಾಲೆನ್ಸ್ ಮಾಡುತ್ತಿದೆ, ಹಿಜಾಬ್ ಹಾಕಿದ್ದಾರೆ ಎಂದು ಕೇಸರಿ ಶಾಲು ಹಾಕಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ಆರೋಪಿಸಿದ್ದಾರೆ. 

ಕೇಸರಿ ಶಾಲು ಹಿಜಾಬ್ ಹಾಕುವುದು ಎರಡೂ ತಪ್ಪು.ಸರ್ಕಾರದ ನೀತಿ ನಿಯಮ ಏನು ಎಂದು ಸರ್ಕಾರ ತಿಳಿಸಿದೆ. ಸರ್ಕಾರ ಆದೇಶ ಧಿಕ್ಕರಿಸಿ ಈ ರೀತಿ ಮಾಡುವುದು, ಅದಕ್ಕೆ ಕಾಂಗ್ರೆಸ್ ಪ್ರಚೋದನೆ ಕೊಡುವುದು ಒಳ್ಳೆಯದಲ್ಲ ಎಂದರು.

ಇದನ್ನೂ ಓದಿ: ಬಾಹ್ಯ ಶಕ್ತಿಗಳ ಪ್ರಚೋದನೆಯಿಂದ ಕ್ಯಾಂಪಸ್ ನಲ್ಲಿ ತೀವ್ರ ಗದ್ದಲ: ಎಂಜಿಎಂ ಕಾಲೇಜು ಅಧಿಕಾರಿಗಳು

ಹಿಜಾಬ್ ವಿಚಾರವಾಗಿ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಹಿಜಾಬ್ ಹಾಗೂ ಕೇಸರಿ ಶಾಲು ಎರಡು ಕೂಡಾ ಕ್ಯಾಂಪಸ್ ಗೆ ಬರಬಾರದು. ಹಿಜಾಬ್ ವಿವಾದದ ಬಗ್ಗೆ ನ್ಯಾಯಾಲಯದಲ್ಲಿ ಹಲವು ಅರ್ಜಿಗಳು ಬಂದಿವೆ. ಬೇರೆ ಬೇರೆ ರಾಜ್ಯದ ಕೋರ್ಟ್ ನಿರ್ದೇಶನಗಳನ್ನು ಮುಂದಿಟ್ಟು ಅಡ್ವಕೇಟ್ ಜನರಲ್ ವಾದ ಮಾಡ್ತಾರೆ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದರು.

ಸರ್ಕಾರ ಘಟನೆಗಳನ್ನು ನಿಭಾಯಿಸುವಲ್ಲಿ ವಿಫಲವಾಗಿಲ್ಲ. ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ಶಾಲಾ ಕಾಲೇಜುಗಳಿಗೆ ರಜಾ ಘೋಷಣೆ ಮಾಡಲಾಗಿದೆ. ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಸಿಎಂ ಕೂಡಾ ವಿನಂತಿ ಮಾಡಿದ್ದಾರೆ ಎಂದರು.

ಧ್ವಜ ಸ್ತಂಭದಲ್ಲಿ ಕೇಸರಿ ಬಾವುಟ ಹಾರಿಸಿದ್ದು ತಪ್ಪು. ಧ್ವಜ ಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಿದ ಘಟ‌ನೆ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದು ಸತ್ಯವಲ್ಲ . ಕಾಂಗ್ರೆಸ್ ಗೆ ಹೇಗೆ ಬೇಕೋ ಆ‌ ರೀತಿ ಹೇಳಿಕೆ ಕೊಟ್ಟಿದ್ದಾರೆ.‌ ಡಿಸಿ, ಎಸ್ ಪಿ ಏ‌ನು ಹೇಳಿದ್ದಾರೆ ಅದು‌ ಅಧಿಕೃತ ಎಂದರು.

ಶಿವಮೊಗ್ಗದ ಕಾಲೇಜೊಂದರಲ್ಲಿ ಪ್ರತಿಭಟನೆ ವೇಳೆ ರಾಷ್ಟ್ರಧ್ವಜ ಹಾರಿಸುವ ಧ್ವಜ ಸ್ತಂಭದಲ್ಲಿ ಕೇಸರಿ ಧ್ವಜವನ್ನು ವಿದ್ಯಾರ್ಥಿಗಳು ಹಾರಿಸಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಧ್ವಜ ಸ್ತಂಭದಲ್ಲಿ ತ್ರಿವರ್ಣ ಧ್ವಜ ಇರಲಿಲ್ಲ ಎಂದು ತಿಳಿದುಬಂದಿದೆ. ಆದರೆ ಈ ವಿಚಾರಕ್ಕೆ ಕಾಂಗ್ರೆಸ್ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.





Read more

[wpas_products keywords=”deal of the day”]