ಕಟ್ಟಡ ಉದ್ಘಾಟನೆಯ ಟೆಪ್ ಕಟ್ ಮಾಡಲು ನಾ ಮುಂದು ತಾ ಮುಂದು ಅಂತಾ ಇಬ್ಬರ ನಡುವೆ ಕಿತ್ತಾಟ ನಡೆದಿದೆ. ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಹಿನ್ನೆಲೆ ಶಾಸಕರು, ಸಚಿವರು, ಸಂಸದರನ್ನು ಆಹ್ವಾನಿಸಲಾಗಿತ್ತು.
ಕಾರ್ಯಕ್ರಮದ ಪ್ರಮುಖ ಭಾಗವಾದ ಮುತ್ಸಂದ್ರ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆ ಕೂಡ ಇತ್ತು. ಈ ವೇಳೆ ಉದ್ಘಾಟನೆಗೆ ತಂದಿದ್ದ ಕತ್ತರಿಯನ್ನ ಶಾಸಕ ಶರತ್ ಬಚ್ಚೇಗೌಡ ಎತ್ತಿಕೊಂಡು ಟೇಪ್ ಕಟ್ ಮಾಡಲು ಮುಂದಾಗಿದ್ದಾರೆ. ಸಚಿವ ಇದರಿಂದ ಎಂಟಿಬಿ ನಾಗರಾಜ್ ಗರಂ ಆಗಿದ್ದಾರೆ. ಎಂಟಿಬಿ ಕೋಪಗೊಂಡರು, ತಲೆಕೆಡಿಸಿಕೊಳ್ಳದೇ ಶಾಸಕ ಶರತ್ ಟೆಪ್ ಕಟ್ ಮಾಡಿದ್ದಾರೆ.
ಒಲ್ಲದ ಉಸ್ತುವಾರಿ ಎಂಟಿಬಿಗೆ ವರಿ : ಚಿಕ್ಕಬಳ್ಳಾಪುರ ಇನ್‍ಚಾರ್ಜ್ ಹೊತ್ತ ದಿನದಿಂದಲೂ ಬೇಜಾರು
ಕಟ್ ಮಾಡಿ ಒಳಗೆ ಹೋಗುತ್ತಿದ್ದಂತೆ ಬಚ್ಚೇಗೌಡ ನಿಂದು ಇದೇ ಆಗೋಯ್ತು ಅಂತ ಶರತ್ ಬಗ್ಗೆ ಎಂಟಿಬಿ ಗರಂ ಆಗಿ ಹೇಳಿದ್ದಾರೆ. ಹೀಗೆ ಹೇಳುತ್ತಿದ್ದಂತೆ ಶಾಸಕ ಶರತ್ ಬಚ್ಚೇಗೌಡ ಹಾಗೂ ಶಾಸಕ ಎಂಟಿಬಿ ನಾಗರಾಜ್ ನಡುವೆ ಟಾಕ್ ವಾರ್ ಶುರುವಾಗಿದೆ. ಮಾತಿನ ಸಮರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಶಾಸಕರು ಹಾಗೂ ಸಚಿವರನ್ನು ಶಾಂತಗೊಳಿಸಿದ್ದಾರೆ.
Read more
[wpas_products keywords=”deal of the day sale today offer all”]