Karnataka news paper

ಹೆಣ್ಣುಮಕ್ಕಳು ಮೈತುಂಬ ಬಟ್ಟೆ ಹಾಕಿಕೊಂಡರೆ ಶೋಭೆ, ಬಿಕಿನಿ ಪದ ಅತ್ಯಂತ ಕೀಳುಮಟ್ಟ: ಪ್ರಿಯಾಂಕಾ ಗಾಂಧಿ ಟ್ವೀಟ್ ಗೆ ರೇಣುಕಾಚಾರ್ಯ ಆಕ್ಷೇಪ


Online Desk

ದೆಹಲಿ: ಮಹಿಳೆಯರು ಧರಿಸುವ ಉದ್ರೇಕಕಾರಿ ಉಡುಗೆಗಳಿಂದ ಪುರುಷರು ಉದ್ವೇಕಗೊಳಗಾಗುತ್ತಾರೆ. ಇದರಿಂದ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ ನಂತರ ಶಾಸಕ, ಬಿಜೆಪಿ ನಾಯಕ ಎಂ ಪಿ ರೇಣುಕಾಚಾರ್ಯ ಕ್ಷಮೆ ಕೇಳಿದ ಪ್ರಸಂಗ ನಡೆದಿದೆ.

ಬಟ್ಟೆ ಧರಿಸುವುದು ಮಹಿಳೆಯರ ವೈಯಕ್ತಿಕ ಹಕ್ಕು ಅವರು ಬಿಕಿನಿ ಬೇಕಾದರೆ ಹಾಕಲಿ, ಜೀನ್ಸ್ ಬೇಕಾದರೆ ಧರಿಸಲಿ, ಹಿಜಾಬ್ ಧರಿಸಲಿ ಅದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ, ಬಟ್ಟೆಯ ಹೆಸರಿನಲ್ಲಿ ಮಹಿಳೆಯ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಬೆಳಗ್ಗೆ ಟ್ವೀಟ್ ಮಾಡಿದ್ದರು. 

ಇದು ದೇಶಾದ್ಯಂತ ಸುದ್ದಿಯಾಗುತ್ತಿದ್ದು, ಬಲಪಂಥೀಯರು, ಬಿಜೆಪಿ ನಾಯಕರು ತೀವ್ರವಾಗಿ ಪ್ರಿಯಾಂಕಾ ಗಾಂಧಿ ಟ್ವೀಟ್ ನ್ನು ಖಂಡಿಸುತ್ತಿದ್ದಾರೆ. ಈ ಬಗ್ಗೆ ಇಂದು ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾತನಾಡಿದ ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಗೌರವ ತೋರಿಸುತ್ತೇವೆ. ಅವರನ್ನು ಭೂತಾಯಿಗೆ ಹೋಲಿಸುತ್ತೇವೆ. ಇಲ್ಲಿ ಪ್ರತಿಯೊಬ್ಬರೂ ಭಾರತ ಮಾತೆಯ ಮಕ್ಕಳು, ಧರಿಸುವ ಬಟ್ಟೆಯ ಹೆಸರಿನಲ್ಲಿ ಶಿಕ್ಷಣ ಪಡೆಯುತ್ತಿರುವ ಯುವಜನತೆಯನ್ನು ಇಬ್ಘಾಗ ಮಾಡುವುದು ಸರಿಯಲ್ಲ ಎಂದರು.

ಇನ್ನು ಪ್ರಿಯಾಂಕಾ ಗಾಂಧಿ ಟ್ವೀಟ್ ಗೆ ಪ್ರತಿಕ್ರಿಯಿಸುವ ಭರದಲ್ಲಿ ಮಹಿಳೆಯರು ಮೈತುಂಬಾ ಬಟ್ಟೆಯನ್ನು ತೊಡಬೇಕು. ಅದು ನಮ್ಮ ಸಂಸ್ಕೃತಿ, ಅದನ್ನು ನಾವು ಗೌರವಿಸುತ್ತೇವೆ. ಬಿಕಿನಿಯಂತಹ ಉದ್ರೇಕಕಾರಿ ಬಟ್ಟೆಗಳನ್ನು ತೊಟ್ಟರೆ ಪುರುಷರು ಉದ್ರೇಕಕೊಂಡು ಅತ್ಯಾಚಾರಗಳು ಹೆಚ್ಚಾಗುತ್ತವೆ ಎಂದಿದ್ದರು. 

ತಮ್ಮ ಹೇಳಿಕೆ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮಹಿಳೆಯರನ್ನು ಅವಮಾನ ಮಾಡಲು ನಾನು ಈ ರೀತಿ ಹೇಳಿಲ್ಲ, ಮಹಿಳೆಯರ ಬಗ್ಗೆ ನಮಗೆ ವಿಶೇಷ ಗೌರವವಿದೆ, ಅವರ ಮೇಲೆ ಕಾಳಜಿಯಿದೆ. ಉಡುಪು ಹಾಕುವುದು ಮಹಿಳೆಯರ ಮೂಲಭೂತ ಹಕ್ಕು, ಪ್ರಿಯಾಂಕಾ ಗಾಂಧಿ ಟ್ವೀಟ್ ಕೀಳುಮಟ್ಟದ್ದಾಗಿದೆ. ಅವರು ದೇಶದ ಮಹಿಳೆಯರ ಕ್ಷಮೆ ಕೇಳಬೇಕೆಂದು ಎಂ ಪಿ ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.





Read more

[wpas_products keywords=”deal of the day”]