Karnataka news paper

ಸ್ವಯಂಪ್ರೇರಿತ ಭವಿಷ್ಯ ನಿಧಿ: ತೆರಿಗೆ ವಿನಾಯಿತಿ ಜೊತೆ ನಿವೃತ್ತಿ ಜೀವನ ಸುಲಭ


Personal Finance

|

ವ್ಯಕ್ತಿಯ ಜೀವನದಲ್ಲಿ ಅತ್ಯಂತ ಮಹತ್ವದ ಆರ್ಥಿಕ ಗುರಿಗಳಲ್ಲಿ ಒಂದಾಗಿದೆ ನಿವೃತ್ತಿ ಯೋಜನೆ. ನಿವೃತ್ತಿ ಸಂದರ್ಭದಲ್ಲಿ ಸುಲಭ ಜೀವನಕ್ಕಾಗಿ ಹಣವನ್ನು ಸಂಗ್ರಹ ಮಾಡುವುದು ಮುಖ್ಯವಾಗುತ್ತದೆ. ಇದಕ್ಕಾಗಿ ನಮ್ಮಲ್ಲಿ ಹಲವಾರು ಆಯ್ಕೆಗಳು ಇದೆ. ವಿಮೆ, ಭವಿಷ್ಯ ನಿಧಿ, ಫಿಕ್ಸಿಡ್‌ ಡೆಪಾಸಿಟ್‌ ಮೊದಲಾದ ಆಯ್ಕೆಗಳು ಇದೆ.

ಸಾಮಾನ್ಯವಾಗಿ ನಮಗೆ ನಿವೃತ್ತಿ ಜೀವನ ಸುರಕ್ಷತೆಯ ವಿಚಾರಕ್ಕೆ ಬಂದಾಗ ಉದ್ಯೋಗಿ ಭವಿಷ್ಯ ನಿಧಿ (ಇಪಿಎಫ್) ಮತ್ತು (ಸಾರ್ವಜನಿಕ ಭವಿಷ್ಯ ನಿಧಿ) ಪಿಪಿಎಫ್ ನೆನಪಿಗೆ ಬರುತ್ತದೆ. ಹೆಚ್ಚಿನ ಜನರು ಉದ್ಯೋಗಿ ಭವಿಷ್ಯ ನಿಧಿ ಹಾಗೂ ಪಿಪಿಎಫ್ ಅನ್ನು ತಮ್ಮ ನಿವೃತ್ತಿ ಜೀವನ ಸುರಕ್ಷೆಯ ಹಾದಿ ಎಂದು ಕೊಳ್ಳುತ್ತಾರೆ. ಆದರೆ ಹಲವಾರು ಮಂದಿಗೆ ಸ್ವಯಂಪ್ರೇರಿತ ಭವಿಷ್ಯ ನಿಧಿ (ವಿಪಿಎಫ್) ಯೂ ನಿಮ್ಮ ಸುರಕ್ಷಿತ ಆಯ್ಕೆ ಎಂಬುವುದು ತಿಳಿದಿಲ್ಲ.

ಚಿನ್ನದ ಬೆಲೆ ಏರಿಕೆ: ಫೆಬ್ರವರಿ 9ರ ದರ ತಿಳಿದುಕೊಳ್ಳಿ

ಉದ್ಯೋಗಿಯು ತನ್ನ ಮೂಲ ಆದಾಯದ ಶೇಕಡ 12 ಅನ್ನು ಇಪಿಎಫ್ ಅಡಿಯಲ್ಲಿ ತನ್ನ ಭವಿಷ್ಯ ನಿಧಿ ಖಾತೆಗೆ ನೀಡಬೇಕು. ಉದ್ಯೋಗಿಯ ಸಂಸ್ಥೆಯು ಕೂಡಾ ಸಮಾನವಾದ ಮೊತ್ತವನ್ನು ನೀಡುತ್ತದೆ. ಉದ್ಯೋಗಿಯು ತನ್ನ ಸಂಬಳದಿಂದ ಶೇಕಡ 12 ಅನ್ನು ಇಪಿಎಫ್‌ಗೆ ನೀಡುವ ಜೊತೆಗೆ ತಮ್ಮ ಮೂಲ ವೇತನದ ಶೇಕಡ ನೂರರಷ್ಟು ಹಾಗೂ ಡಿಎಯನ್ನು ಕೂಡಾ ಸ್ವಯಂಪ್ರೇರಣೆಯಿಂದ ಪಿಎಫ್‌ ಖಾತೆಗೆ ವರ್ಗಾವಣೆ ಮಾಡಿಕೊಳ್ಳಬಹುದು. ಇದುವೇ ಸ್ವಯಂಪ್ರೇರಿತ ಭವಿಷ್ಯ ನಿಧಿ (ವಿಪಿಎಫ್) ಆಗಿದೆ.

ಸ್ವಯಂಪ್ರೇರಿತ ಭವಿಷ್ಯ ನಿಧಿ: ತೆರಿಗೆ ವಿನಾಯಿತಿ ಜೊತೆ ನಿವೃತ್ತಿ ಜೀವನ ಸುಲಭ

ಇದು ಸಾಮಾನ್ಯ EPF ಪಾವತಿಯಂತೆಯೇ ಇರುತ್ತದೆ. ಸರಳವಾಗಿ ಹೇಳುವುದಾದರೆ, ವಿಪಿಎಫ್ ಇಪಿಎಫ್‌ನ ವಿಸ್ತರಣೆ ಆಗಿದೆ. ವಿಪಿಎಫ್ ಕೊಡುಗೆಗಳು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ನಿರ್ದಿಷ್ಟಪಡಿಸಿದ ಕನಿಷ್ಠ ಕೊಡುಗೆಗಿಂತ ಹೆಚ್ಚಿನ ಹಣವನ್ನು ನಿಮ್ಮ ವೇತನದಿಂದ ಕಡಿತ ಮಾಡುವುದು ಆಗಿದೆ. ಇದು ನಿಮಗೆ ಬಿಟ್ಟಿರುವ ಆಯ್ಕೆ ಆಗಿದ್ದು, ನೀವು ಕೆಲಸ ಮಾಡುವ ಸಂಸ್ಥೆ ನಿಮ್ಮ ವಿಪಿಎಫ್ ಅನ್ನು ನಿಮ್ಮ ಒಪ್ಪಿಗೆ ಇಲ್ಲದೆ ಕಡಿತ ಮಾಡುವಂತಿಲ್ಲ. ಇನ್ನು ಈ ವಿಪಿಎಫ್‌ಗೆ ಯಾವುದೇ ಮಿತಿಯಿಲ್ಲ. ಹಾಗಾದರೆ ಈ ವಿಪಿಎಫ್‌ ಆರಂಭ ಮಾಡುವುದು ಹೇಗೆ, ಏನಿದೆ ಪ್ರಯೋಜನ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ..

ಫೆಬ್ರವರಿ 9ರಂದು ಪೆಟ್ರೋಲ್-ಡೀಸೆಲ್ ದರ ಸ್ಥಿರ: ದರ ವಿವರ ತಿಳಿಯಿರಿ

ವಿಪಿಎಫ್‌ ಪ್ರಾರಂಭ ಹೇಗೆ?

ಸ್ವಯಂಪ್ರೇರಿತ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡುವುದು ಸರಳ ಮತ್ತು ನೇರವಾದ ಪ್ರಕ್ರಿಯೆಯಾಗಿದೆ. ನಿಮ್ಮ ಆದಾಯದ ನಿರ್ದಿಷ್ಟ ಅನುಪಾತವನ್ನು (ಮೇಲೆ ತಿಳಿಸಿದ ಗರಿಷ್ಠಕ್ಕೆ ಒಳಪಟ್ಟಿರುತ್ತದೆ) ಪ್ರತಿ ತಿಂಗಳು ನಿಮ್ಮ ವೇತನದಿಂದ ಕಡಿತಗೊಳಿಸಲಾಗುತ್ತದೆ ಎಂದು ನೀವು ನಿಮ್ಮ ಸಂಸ್ಥೆಗೆ ತಿಳಿಸುವ ಅಗತ್ಯವಾಗಿದೆ. ನೀವು ಇದಕ್ಕಾಗಿ ನಿಮ್ಮ ಕಂಪನಿಯ ಹಣಕಾಸು/ಎಚ್‌ಆರ್ ವಿಭಾಗವನ್ನು ಸಂಪರ್ಕಿಸಬಹುದು. ಇಲಾಖೆಯ ಫಾರ್ಮ್ ಅನ್ನು ಭರ್ತಿ ಮಾಡಿ, ಅದಕ್ಕೆ ಸಹಿ ಹಾಕಬೇಕಾಗುತ್ತದೆ. ಬಳಿಕ ಆ ಫಾರ್ಮ್ ಅನ್ನು ಇಲಾಖೆಗೆ ಕಳುಹಿಸಬೇಕಾಗುತ್ತದೆ. ಇದರಲ್ಲಿ ನೀವು ಎಷ್ಟು ವಿಪಿಎಫ್ ಕೊಡುಗೆ ನೀಡಲು ಬಯಸುತ್ತೀರಿ ಎಂಬುವುದನ್ನು ಉಲ್ಲೇಖ ಮಾಡಬೇಕಾಗಿದೆ.

 ಸ್ವಯಂಪ್ರೇರಿತ ಭವಿಷ್ಯ ನಿಧಿ: ತೆರಿಗೆ ವಿನಾಯಿತಿ ಲಭ್ಯ

ವಿಪಿಎಫ್‌ ಮಾಡಿಸಿ, ತೆರಿಗೆ ವಿನಾಯಿತಿ ಪಡೆಯಿರಿ!

ಉದ್ಯೋಗಿಗಳ ಭವಿಷ್ಯ ನಿಧಿಗಳಂತೆಯೇ ಸ್ವಯಂಪ್ರೇರಿತ ಭವಿಷ್ಯ ನಿಧಿಗಳಿಗೆ ತೆರಿಗೆ ವಿಧಿಸಲಾಗುತ್ತದೆ. ಆದರೆ ವಿಪಿಎಫ್‌ ಕೊಡುಗೆಗಳು 1961 ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ-ವಿನಾಯತಿಗೆ ಒಳಪಡುತ್ತವೆ. 1.5 ಲಕ್ಷದವರೆಗೆ ತೆರಿಗೆಗಳನ್ನು ಉಳಿಸಲು ನೀವು ಹೂಡಿಕೆ ಮಾಡಬಹುದಾದ ವಿಧಾನದಲ್ಲಿ ಇದು ಕೂಡಾ ಒಂದಾಗಿದೆ. ಇದು ಇಇಇ ಇದು EEE ತೆರಿಗೆಗಳಿಗೆ ಒಳಪಟ್ಟಿರುತ್ತದೆ.

ಹೂಡಿಕೆ, ಗಳಿಕೆ ಮತ್ತು ಹಿಂಪಡೆಯುವಿಕೆ ಸೇರಿದಂತೆ ವಿಪಿಎಫ್‌ನಲ್ಲಿನ ಹೂಡಿಕೆಯು ಅದರ ಸಂಪೂರ್ಣ ತೆರಿಗೆ-ಮುಕ್ತವಾಗಿರುತ್ತದೆ ಎಂದು ಇದು ಸೂಚಿಸುತ್ತದೆ. ಐದು ವರ್ಷಗಳ ನಿರಂತರ ಸೇವೆಯ ಮೊದಲು ನೀವು ವಿಪಿಎಫ್‌ ಹಿಂದಕ್ಕೆ ಪಡೆದರೆ ಹಣಕ್ಕೆ ತೆರಿಗೆ ವಿಧಿಸಲಾಗುತ್ತದೆ.

English summary

Voluntary Provident Fund: Enhance Your Retirement Corpus With Tax Benefit

Voluntary Provident Fund: Enhance Your Retirement Corpus With Tax Benefit.



Read more…

[wpas_products keywords=”deal of the day”]