ಮೊದಲ ಬಾರಿ ‘ಮೈನೆ ಪ್ಯಾರ್ ಕಿಯಾ’ ಸಿನಿಮಾ ನೋಡಿದ್ದು ತುಂಬ ಅದ್ಭುತವಾದ ಅನುಭವ ಎಂದಿರುವ ಆವಂತಿಕಾ, ತೆರೆ ಮೇಲೆ ಅಮ್ಮ ಬೇಸರವಾಗಿರೋದನ್ನು ನೋಡಲಾಗಲಿಲ್ಲ ಎಂದು ಹೇಳಿದ್ದಾರೆ.
“ನಾನು ಚಿಕ್ಕವಳಿದ್ದಾಗ ಮೈನೇ ಪ್ಯಾರ್ ಕಿಯಾ ಸಿನಿಮಾವನ್ನು ಕೆಲ ಬಾರಿ ನೋಡಿದ್ದೆ. ಮೊದಲ ಬಾರಿಗೆ ಸಿನಿಮಾ ನೋಡುವಾಗ ಅಮ್ಮ ಕೆಲ ದೃಶ್ಯಗಳಲ್ಲಿ ಬೇಜಾರಾಗಿದ್ದಳು, ಅದನ್ನು ನೋಡಲಾಗದೆ ನಾನು ರೂಮ್‌ನಿಂದ ಹೊರಹೋದೆ. ನಾವು ಎಲ್ಲಿ ಹೋದರೂ ಕೂಡ ನನ್ನ ಅಮ್ಮನಿಗೆ ವೀಕ್ಷಕರು ಪ್ರೀತಿ ಅಭಿಮಾನ ತೋರಿಸುತ್ತಾರೆ. ಈ ಚಿತ್ರ ರಿಲೀಸ್ ಆಗಿ 30 ವರ್ಷ ಕಳೆದರೂ ಕೂಡ ವೀಕ್ಷಕರು ನೆನಪಿಟ್ಟುಕೊಂಡಿರೋದು ಖುಷಿಯ ವಿಷಯ. ನೀವು ಅದ್ಭುತವಾದ ಕೆಲಸ ಮಾಡಿದರೆ ಚಿತ್ರರಂಗ ಅನೇಕ ವರ್ಷಗಳ ಕಾಲವೂ ಪ್ರೀತಿ ಕೊಟ್ಟು ಋಣ ತೀರಿಸುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ” ಎಂದು ಆವಂತಿಕಾ ಹೇಳಿದ್ದಾರೆ.
ಬಾಲಿವುಡ್ ನಟಿ ಭಾಗ್ಯಶ್ರೀ ಪುತ್ರಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ; ಈ ಸಿನಿಮಾದ ನಿರ್ದೇಶಕರು ಯಾರು?
“ಮೈನೆ ಪ್ಯಾರ್ ಕಿಯಾ ಸಿನಿಮಾಕ್ಕೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿರೋದು ಖುಷಿಯ ವಿಷಯ. ಆಗ ನಾನು ವಾಸಿಸುತ್ತಿದ್ದ ಬಿಲ್ಡಿಂಗ್‌ಗೆ ನನ್ನ ನೋಡಲು ದೊಡ್ಡ ಜನಸಂದಣಿ ಬಂದಿತ್ತು. ಪ್ರತಿದಿನ ಪೋಸ್ಟ್‌ಮ್ಯಾನ್ ನನಗಾಗಿ ಬರೆದಿದ್ದ ಒಂದಷ್ಟು ರಾಶಿ ಪತ್ರ ತರುತ್ತಿದ್ದರು. ಸಿಕ್ಕಾಪಟ್ಟೆ ಪತ್ರ ಬರುತ್ತಿದ್ದರಿಂದ ಅವರು ನನಗೆ ಬೋನಸ್ ಕೊಡಿ ಎನ್ನುತ್ತಿದ್ದರು” ಎಂದು ಭಾಗ್ಯಶ್ರೀ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
“ನನಗೆ ಆಗಲೇ ಮದುವೆಯಾಗಿ ಮಗು ಕೂಡ ಹುಟ್ಟಿದ್ದ, ಅಭಿಮಾನಿಗಳ ಕ್ರೇಜ್ ಮಧ್ಯೆ ನಾನು ಆಗತಾನೇ ಹುಟ್ಟಿದ್ದ ಮಗುವಿನ ಜೊತೆ ಕಾಲ ಕಳೆಯುತ್ತ ಚಿಕ್ಕ ಪ್ರಪಂಚ ಕಟ್ಟಿಕೊಂಡಿದ್ದೆ” ಎಂದು ಭಾಗ್ಯಶ್ರೀ ಹೇಳಿದ್ದಾರೆ.
ಸಲ್ಮಾನ್ ಖಾನ್‌ರನ್ನು ಅಪ್ಪಿಕೊಳ್ಳಲಾಗದೆ, ಕಿಸ್ ಮಾಡಲಾಗದೆ ಒದ್ದಾಡಿದ್ದ ‘ಸೀತಾರಾಮ ಕಲ್ಯಾಣ’ ನಟಿ ಭಾಗ್ಯಶ್ರೀ
ಆರಂಭದಲ್ಲಿ ಈ ಚಿತ್ರವನ್ನು 7 ಬಾರಿ ಭಾಗ್ಯಶ್ರೀ ರಿಜೆಕ್ಟ್ ಮಾಡಿದ್ದರು. ಮದುವೆಯಾಗಲು ರೆಡಿಯಾಗಿದ್ದ ಭಾಗ್ಯಶ್ರೀಗೆ ಸಿನಿಮಾದಲ್ಲಿ ನಟಿಸೋದು ಇಷ್ಟವಿರಲಿಲ್ಲ. ಅಂತೂ ಸಿನಿಮಾ ಮಾಡಲು ಒಪ್ಪಿದ ನಂತರವೂ ಕೂಡ ಸಲ್ಮಾನ್ ಖಾನ್ ಅವರನ್ನು ತಬ್ಬಿಕೊಳ್ಳಬೇಕು, ಕಿಸ್ ಕೊಡಬೇಕು ಎಂದಾಗ ಭಾಗ್ಯಶ್ರೀ ತಕರಾರು ತೆಗೆದಿದ್ದರಂತೆ. ಅದಾದ ನಂತರ ಭಾಗ್ಯಶ್ರೀ ಸಾಕಷ್ಟು ಆಫರ್ ರಿಜೆಕ್ಟ್ ಮಾಡಿದ್ದರು. ಇಲ್ಲಿಯವರೆಗೆ ಭಾಗ್ಯಶ್ರೀ ಅವರು ಕನ್ನಡ, ತೆಲುಗು, ತಮಿಳು, ಭೋಜ್‌ಪುರಿ, ಬಂಗಾಳಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಅಂದಹಾಗೆ ಭಾಗ್ಯಶ್ರೀ ಪುತ್ರ ಅಭಿಮನ್ಯು ಕೂಡ ನಟ.
Read more
[wpas_products keywords=”deal of the day party wear dress for women stylish indian”]