Karnataka news paper

ಭಾರತದಲ್ಲಿ ಸತತ 10ನೇ ಬಾರಿ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ


News

|

ನವದೆಹಲಿ, ಫೆಬ್ರವರಿ 10: ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸತತ 10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ರೆಪೋ ದರ ಬದಲಾವಣೆ ಮಾಡದಿರಲು ನಿರ್ಧರಿಸಿದ ಈ ಹಿನ್ನೆಲೆ ರೆಪೋ ದರ ಶೇಕಡಾ 4ರಷ್ಟಾಗಿಯೇ ಉಳಿದುಕೊಂಡಿದೆ. ದೇಶದ ಆರ್ಥಿಕತೆಯು ಕೊಂಚ ಚೇತರಿಕೆಯ ಲಕ್ಷಣ ಕಂಡು ಬಂದರೂ ರೆಪೋ ದರವನ್ನು ಬದಲಾವಣೆ ಮಾಡದಿರಲು ಆರ್‌ಬಿಐ ತೀರ್ಮಾನಿಸಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಸತತ 10ನೇ ಬಾರಿ ಯಥಾಸ್ಥಿತಿ ಕಾಯ್ದುಕೊಂಡಿರುವುದನ್ನು ಇಲ್ಲಿ ಉಲ್ಲೇಖಿಸಿದೆ. ಮೇ 2020 ರಲ್ಲಿ, ಬಡ್ಡಿದರವನ್ನು ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕಡಿತಗೊಳಿಸುವ ಮೂಲಕ ಬೇಡಿಕೆ ಹೆಚ್ಚಿಸಲು ಕೇಂದ್ರ ಬ್ಯಾಂಕ್ ತನ್ನ ಪಾಲಿಸಿ ರೆಪೋ ದರ ಅಥವಾ ಅಲ್ಪಾವಧಿಯ ಸಾಲದ ದರವನ್ನು ಪರಿಷ್ಕರಿಸಿತ್ತು.

‘ರೆಪೋ, ರಿವರ್ಸ್ ರೆಪೋ ಬದಲಾವಣೆ ಇಲ್ಲ’: ಆರ್‌ಬಿಐ ಗವರ್ನರ್‌

ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಬಜೆಟ್ 2022 ಮಂಡಿಸಿದ ನಂತರ ಇದು ಮೊದಲ ಹಣಕಾಸು ನೀತಿ ಸಮಿತಿ ಸಭೆಯಾಗಿದೆ. ಹಣಕಾಸು ನೀತಿ ಸಮಿತಿಯು ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಇಡಲು ಸರ್ವಾನುಮತದಿಂದ ಸಮ್ಮತಿಸಲಾಗಿದೆ. ಆರ್ಥಿಕ ಬೆಳವಣಿಗೆ ಹೆಚ್ಚಿಸುವ ಮತ್ತು ಹಣದುಬ್ಬರವನ್ನು ನಿಯಂತ್ರಿಸುವುದಕ್ಕೆ ಈ ಹೊಂದಾಣಿಕೆಯ ನಿಲುವು ಮುಂದುವರಿಸಲು ನಿರ್ಧರಿಸಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

ಭಾರತದಲ್ಲಿ ಸತತ 10ನೇ ಬಾರಿ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ರಿವರ್ಸ್ ರೆಪೊ ದರವನ್ನು ಶೇ. 3.35% ನಲ್ಲಿ ಬದಲಾಯಿಸದೆ ಬಿಡಲಾಗಿದೆ. ಆದಾಗ್ಯೂ, ಅಪೆಕ್ಸ್ ಬ್ಯಾಂಕ್ ರಿವರ್ಸ್ ರೆಪೊ ದರವನ್ನು 15-40 ಬೇಸಿಸ್ ಪಾಯಿಂಟ್‌ಗಳಷ್ಟು (ಬಿಪಿಎಸ್) ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿತ್ತು.

ಹಣದುಬ್ಬರ ಮತ್ತು ಬೆಳವಣಿಗೆಯ ದೃಷ್ಟಿಕೋನ:

“ಒಟ್ಟಾರೆ ಹಣದುಬ್ಬರ ಮತ್ತು ಬೆಳವಣಿಗೆಯ ದೃಷ್ಟಿಕೋನವನ್ನು ಗಣನೆಗೆ ತೆಗೆದುಕೊಳ್ಳಲಾಗಿದ್ದು, ನಿರ್ದಿಷ್ಟವಾಗಿ ಹಣದುಬ್ಬರ ದೃಷ್ಟಿಕೋನ ಸುಧಾರಿಸಲಾಗುತ್ತದೆ. ಓಮಿಕ್ರಾನ್ ಸೃಷ್ಟಿಸಿದ ಅನಿಶ್ಚಿತತೆ ಸಂಬಂಧಿಸಿದಂತೆ ಸುದೀರ್ಘ ಮತ್ತು ವಿಶಾಲ ದೃಷ್ಟಿಕೋನದ ಆಧಾರದಲ್ಲಿ ಚೇತರಿಕೆಗೆ ನಿರಂತರ ಬೆಂಬಲ ನೀಡಲಾಗುವುದು ಎಂದು ಹಣಕಾಸು ನೀತಿ ಸಮಿತಿ ಅಭಿಪ್ರಾಯಪಟ್ಟಿರುವುದಾಗಿ ಆರ್‌ಬಿಐ ಮುಖ್ಯಸ್ಥರು ಹೇಳಿದ್ದಾರೆ.

ಗ್ರಾಹಕ ಬೆಲೆ ಸೂಚ್ಯಂಕ-ಆಧಾರಿತ ಚಿಲ್ಲರೆ ಹಣದುಬ್ಬರವು FY23 ರ ದ್ವಿತೀಯಾರ್ಧದಲ್ಲಿ 4% ಗುರಿಗೆ ಹತ್ತಿರವಾಗುವ ನಿರೀಕ್ಷೆಯಿದೆ ಮತ್ತು ವಿತ್ತೀಯ ನೀತಿಗೆ ಅನುಕೂಲಕರವಾಗಿ ಉಳಿಯಲು ಅವಕಾಶವನ್ನು ಒದಗಿಸುತ್ತದೆ ಎಂದು RBI ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

English summary

10th time in a row, RBI keeps repo rate unchanged at 4%

10th time in a row, RBI keeps repo rate unchanged at 4%: Governor Shaktikanta Das.

Story first published: Thursday, February 10, 2022, 12:55 [IST]



Read more…

[wpas_products keywords=”deal of the day”]