ಇತ್ತೀಚೆಗೆ ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದ ಎಬಿ ಡಿವಿಲಿಯರ್ಸ್, “ಆರ್‌ಸಿಬಿ ನನಗೆ ಕುಟುಂಬ. 10 ರಿಂದ 11 ವರ್ಷಗಳಲ್ಲಿ ನನ್ನ ಜೀವನ ಸಂಪೂರ್ಣವಾಗಿ ಬದಲಾಗಿದೆ. ಬೇರೆ ತಂಡಗಳಂತೆ ಆರ್‌ಸಿಬಿ ತಂಡದಲ್ಲಿಯೂ ನಾನು ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ಇಲ್ಲಿನ ಸಂಗತಿಗಳು ಸುಂದರ ಹಾಗೂ ಅದ್ಭುತವಾಗಿವೆ,” ಎಂದರು.
“ಇಲ್ಲಿನ ಸಂಬಂಧಗಳು ಅತ್ಯುತ್ತಮವಾಗಿದ್ದವು. ಇದರಲ್ಲಿ ಸ್ವಲ್ಪ ಹಾಸ್ಯ ಹಾಗೂ ಇನ್ನು ಸ್ವಲ್ಪ ವಿನೋದದಿಂದ ಕೂಡಿತ್ತು. ಈ ಎಲ್ಲವನ್ನೂ ಒಮ್ಮೆ ಹಿಂತಿರುಗಿ ನೋಡಿದಾಗ ನನಗೆ ಯಾವುದೇ ಪಶ್ಚಾತಾಪವಿಲ್ಲ. ನನ್ನ ವೃತ್ತಿ ಜೀವನದ ಪೈಕಿ ಆರ್‌ಸಿಬಿಯಲ್ಲಿ ಕಳೆದ ಸಮಯ ಅದ್ಭುತವಾಗಿದೆ,” ಎಂದು ಮಿಸ್ಟರ್ 360 ಡಿಗ್ರಿ ಖ್ಯಾತಿಯ ಮಾಜಿ ಬ್ಯಾಟ್ಸ್‌ಮನ್ ಹೇಳಿದ್ದಾರೆ.
‘ಅಪಾರ್ಟ್‌ಮೆಂಟ್ ಕೊಡ್ತಿವಿ ಬೆಂಗಳೂರಿಗೆ ಬನ್ನಿ’ : ಎಬಿಡಿ ಕೊಟ್ಟ ಉತ್ತರ ನೋಡಿ…
ಭಾರತ ಹಾಗೂ ಎಬಿ ಡಿವಿಲಿಯರ್ಸ್ ನಡುವಿನ ಪ್ರೀತಿ ಆಗಾಧವಾಗಿದೆ. ಅಷ್ಟೇ ಅಲ್ಲದೆ ಅಭಿಮಾನಿಗಳ ಪಾಲಿಗೆ ಎಬಿ ಡಿವಿಲಿಯರ್ಸ್ ಆರಾಧ್ಯ ದೈವ. ಒಮ್ಮೆ ಅವರು ಐಪಿಎಲ್ ಟೂರ್ನಿಯಲ್ಲಿ ಬ್ಯಾಟಿಂಗ್ ಮೂಲಕ ಸಿಡಿದರೆ ಭಾರತೀಯ ಅಭಿಮಾನಿಗಳು ಅವರನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಾರೆ.
“ಐಪಿಎಲ್ ಕ್ರಿಕೆಟ್, ಭಾರತೀಯ ಪ್ರೇಕ್ಷಕರು ಮತ್ತು ಭಾರತೀಯರ ರೀತಿಯನ್ನು ಅನುಭವಿಸುವ ಸವಲತ್ತು ನನಗೆ ಕಳೆದ 15 ವರ್ಷಗಳಿಂದ ಸಿಕ್ಕಿದೆ. ನಿಸ್ಸಂಶಯವಾಗಿ ಭಾರತದಲ್ಲಿ ಬೆಳೆಯುವುದು ಆಸಕ್ತಿದಾಯಕವಾಗಿರುತ್ತಿತ್ತು. ಬಹುಶಃ ನಾನು ಭಾರತಕ್ಕಾಗಿ ಎಂದಿಗೂ ಆಡುತ್ತಿರಲಿಲ್ಲ. ಆದರೆ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ತುಂಬಾನೇ ಕಷ್ಟ. ಭಾರತವನ್ನು ಪ್ರತಿನಿಧಿಸಬೇಕೆಂದರೆ ನೀವು ಅತ್ಯಂತ ವಿಶೇಷ ಆಟಗಾರನಾಗಿರಬೇಕು,” ಎಂದರು.
ಮೆಗಾ ಹರಾಜಿನಿಂದ ಹೊರಗುಳಿಯುವುದಕ್ಕೆ ಕಾರಣ ತಿಳಿಸಿದ ಜೇಮಿಸನ್!
ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅವರ ಹೆಸರುಗಳನ್ನು ಉಲ್ಲೇಖ ಮಾಡದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಏಕೆಂದರೆ ಕಳೆದ 10 ರಿಂದ 11 ವರ್ಷಗಳ ಕಾಲ ಆರ್‌ಸಿಬಿಯಲ್ಲಿ ಆಡಿರುವ ಆಧುನಿಕ ಬ್ಯಾಟಿಂಗ್ ದಿಗ್ಗಜರು ಐಪಿಎಲ್‌ನಲ್ಲಿ ಸಾಕಷ್ಟು ದಾಖಲೆಗಳನ್ನು ಬರೆದಿದ್ದಾರೆ.
ಮೂರು ವರ್ಷಗಳ ಕಾಲ ಡೆಲ್ಲಿ ಡೇರ್‌ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ಪರ ಆಡಿದ್ದ ಎಬಿ ಡಿವಿಲಿಯರ್ಸ್ 2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಬಂದಿದ್ದರು. 10 ವರ್ಷಗಳ ನಂತರ ಆರ್‌ಸಿಬಿ ಪರ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಎರಡು ಶತಕ ಹಾಗೂ 37 ಅರ್ಧಶತಕಗಳೊಂದಿಗೆ 41.10ರ ಸರಾಸರಿಯಲ್ಲಿ 4522 ರನ್ ಗಳಿಸಿದ್ದಾರೆ.
ದಶಕದ ಬಳಿಕ ಆರ್‌ಸಿಬಿಗೆ ಮರಳಬಹುದಾದ ಮೂವರು ಸ್ಟಾರ್‌ಗಳಿವರು!
2021ರ ಇಂಡಿಯನ್ ಪ್ರೀಮಿಯರ್ ಟೂರ್ನಿ ಮುಗಿದ ಬಳಿಕ ಎಬಿ ಡಿವಿಲಿಯರ್ಸ್ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಬೆಂಗಳೂರು ಫ್ರಾಂಚೈಸಿಯಲ್ಲಿ ಯಾವುದಾದರೊಂದು ಜವಾಬ್ದಾರಿ ನಿರ್ವಹಿಸುವ ಆಸಕ್ತಿ ಹೊಂದಿರುವ ಎಬಿಡಿ, 2022ರ ಆವೃತ್ತಿಯಲ್ಲಿ ನೂತನ ಪಾತ್ರದೊಂದಿಗೆ ಆರ್‌ಸಿಬಿಗೆ ಮರಳಿದರೂ ಅಚ್ಚರಿ ಇಲ್ಲ.
Read more
[wpas_products keywords=”deal of the day gym”]