ಸರಣಿ ಆರಂಭಕ್ಕೂ ಮುನ್ನ ಶಿಖರ್ ಸೇರಿದಂತೆ ತಂಡದ ಕೆಲ ಆಟಗಾರರು ಕೊರೊನಾ ವೈರಸ್ ಸೋಂಕಿಗೆ ತುತ್ತಾಘಿದ್ದರು. ಇದೇ ಕಾರಣಕ್ಕೆ ಶಿಖರ್ ಮೊದಲ ಎರಡೂ ಒಡಿಐಗಳಿಗೆ ಅಲಭ್ಯರಾಗಿದ್ದರು. ಶಿಖರ್ ಅನುಪಸ್ಥಿತಿಯಲ್ಲಿ ಮೊದಲ ಒಡಿಐನಲ್ಲಿ ಇಶಾನ್ ಕಿಶನ್ ಆರಂಭಿಕರಾಗಿ ಆಡಿದರೆ, ಎರಡನೇ ಪಂದ್ಯದಲ್ಲಿ ರಿಷಭ್ ಪಂತ್ ಆರಂಭಿಕರಾಗಿ ಕಾಣಿಸಿಕೊಂಡರು. ಈಗ ಫೆ.11ರಂದು (ಶುಕ್ರವಾರ) ನಡೆಯಲಿರುವ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಶಿಖರ್ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಾತ್ರಿಯಾಗಿದೆ.
“ಮುಂದಿನ ಪಂದ್ಯದಲ್ಲಿ ಶಿಖರ್ ತಂಡಕ್ಕೆ ಮರಳಲಿದ್ದಾರೆ. ಈ ಮಧ್ಯೆ ಕೆಲ ಪಂದ್ಯಗಳಲ್ಲಿ ಪ್ರಯೋಗ ಮಾಡುವುದಕ್ಕೆ ನಾವು ಹಿಂದೇಟಾಕುವುದಿಲ್ಲ. ಅಂದಹಾಗೆ ತಂಡದ ದೀರ್ಘಕಾಲದ ಯೋಜನೆಗೆ ನಾವು ಬದ್ಧರಾಗಿರುವುದು ಮುಖ್ಯ. ಕೊನೇ ಪಂದ್ಯದಲ್ಲಿ ತಂಡದ ಯಾವ ಸಂಯೋಜನೆ ಉತ್ತಮವಾಗಿರುತ್ತದೆ ಎಂದು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದೇವೆ,” ಎಂದು 2ನೇ ಪಂದ್ಯದ ಬಳಿಕ ಮಾತನಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ ಹೇಳಿದ್ದಾರೆ.
ಕೇವಲ 12 ರನ್ ನೀಡಿ 4 ವಿಕೆಟ್ ಪಡೆದ ಬಗ್ಗೆ ಕನ್ನಡಿಗ ಪ್ರಸಿಧ್ ಹೇಳಿದ್ದಿದು!
ಭಾರತದ ಮುಡಿಗೆ ಒಡಿಐ ಸರಣಿ
ಸರಣಿಯ ಮೊದಲ ಪಂದ್ಯದಲ್ಲಿ ಆಲಲ್‌ರೌಂಡ್ ಪ್ರದರ್ಶನ ನೀಡುವ ಮೂಲಕ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ್ದ ಭಾರತ ತಂಡ, ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ನಡೆದ ದ್ವಿತೀಯ ಒಡಿಐನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಮೂಲಕ 50 ಓವರ್‌ಗಳಲ್ಲಿ 237/9 ರನ್‌ಗಳ ಸಾಧಾರಣ ಮೊತ್ತ ಮಾತ್ರವೇ ದಾಖಲಿಸಿತ್ತು.
ಆದರೆ, ಪ್ರಸಿಧ್ ಕೃಷ್ಣ (12ಕ್ಕೆ 4) ಅವರ ಮಾರಕ ಬೌಲಿಂಗ್ ದಾಳಿಯ ಬಲದಿಂದ ಕಮ್‌ಬ್ಯಾಕ್ ಮಾಡಿದ ಟೀಮ್ ಇಂಡಿಯಾ ಎದುರಾಳಿ ವೆಸ್ಟ್ ಇಂಡೀಸ್ ತಂಡವನ್ನು 193 ರನ್‌ಗಳಿಗೆ ಆಲ್‌ಔಟ್‌ಮಾಡಿ 44 ರನ್‌ಗಳ ಜಯದೊಂದಿಗೆ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ 2-0 ಅಂತರದಲ್ಲಿ ಸರಣಿ ಗೆದ್ದುಕೊಂಡಿತು. ಇದು ವೆಸ್ಟ್ ಇಂಡೀಸ್ ವಿರುದ್ಧ ಭಾರತ ಗೆದ್ದ ದಾಖಲೆಯ ಸತತ 11ನೇ ಒಡಿಐ ಸರಣಿಯಾಗಿದೆ. 2006ರ ಬಳಿಕ ವಿಂಡೀಸ್ ಎದುರು ಭಾರತ ಒಡಿಐ ಸರಣಿ ಸೋತಿಲ್ಲ ಎಂಬುದು ವಿಶೇಷ.
2ನೇ ಒಡಿಐನಲ್ಲಿ ಪೊಲಾರ್ಡ್ ಬದಲು ಪೂರನ್ ನಾಯಕನಾಗಲು ಇದೇ ಕಾರಣ!
ಮೂರನೇ ಒಡಿಐಗೆ ಟೀಮ್ ಇಂಡಿಯಾದ ಸಂಭಾವ್ಯ ಇಲೆವೆನ್ ಹೀಗಿದೆ
1. ರೋಹಿತ್ ಶರ್ಮಾ (ಓಪನರ್/ಕ್ಯಾಪ್ಟನ್)
2. ಶಿಖರ್ ಧವನ್ (ಓಪನರ್)
3. ವಿರಾಟ್ ಕೊಹ್ಲಿ (ಬ್ಯಾಟ್ಸ್‌ಮನ್)
4. ಕೆಎಲ್ ರಾಹುಲ್ (ಬ್ಯಾಟ್ಸ್‌ಮನ್)
5. ಸೂರ್ಯಕುಮಾರ್ ಯಾದವ್
6. ರಿಷಭ್ ಪಂತ್ (ವಿಕೆಟ್‌ಕೀಪರ್/ಬ್ಯಾಟ್ಸ್‌ಮನ್)
7. ವಾಷಿಂಗ್ಟನ್ ಸುಂದರ್ (ಆಲ್‌ರೌಂಡರ್)
8. ದೀಪಕ್ ಚಹರ್ (ಆಲ್‌ರೌಂಡರ್)
9. ಮೊಹಮ್ಮದ್ ಸಿರಾಜ್ (ಬಲಗೈ ವೇಗಿ)
10. ಪ್ರಸಿಧ್ ಕೃಷ್ಣ (ಬಲಗೈ ವೇಗಿ)
11. ಯುಜ್ವೇಂದ್ರ ಚಹಲ್ (ಲೆಗ್ ಸ್ಪಿನ್ನರ್)
Read more
[wpas_products keywords=”deal of the day sale today offer all”]