ರಾಜ್ಯಸಭೆಯಲ್ಲಿ ಮಂಗಳವಾರ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ಚರ್ಚೆ ವೇಳೆ ಪ್ರಧಾನಿ ಮೋದಿ ಅವರು, 2014ರ ಫೆಬ್ರವರಿಯಲ್ಲಿ ಯಾವುದೇ ಚರ್ಚೆ ನಡೆಸದೆ ಸಂಸತ್‌ನಲ್ಲಿ ಆಂಧ್ರ ಪ್ರದೇಶ ಮರು ಸಂಘಟನಾ ಮಸೂದೆಯನ್ನು ತರಾತುರಿಯಲ್ಲಿ ಅಂಗೀಕರಿಸಲಾಗಿತ್ತು ಎಂದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು.
ತೆಲಂಗಾಣ ರಚನೆ ವಿರುದ್ಧವಾಗಿ ಬಿಜೆಪಿ ಇರಲಿಲ್ಲ ಎಂದು ಪ್ರತಿಪಾದನೆ ಮಾಡಿದ್ದ ಪ್ರಧಾನಿ, ಲೋಕಸಭೆಯಲ್ಲಿ ಮಸೂದೆ ಮಂಡನೆ ಮಾಡಿದಾಗ ಮೈಕ್ರೋಫೋನ್‌ಗಳನ್ನು ತುಂಡು ಮಾಡಲಾಗಿತ್ತು, ಬಾಗಿಲುಗಳನ್ನು ಮುಚ್ಚಲಾಗಿತ್ತು ಮತ್ತು ಕಾಂಗ್ರೆಸ್ ಸಂಸದರು ಪೆಪ್ಪರ್ ಸ್ಪ್ರೇಗಳನ್ನೂ ಬಳಸಿದ್ದರು ಎಂದು ಮೋದಿ ಆರೋಪಿಸಿದ್ದರು.
“ರಾಜ್ಯ ವಿಂಗಡಣಾ ಮಸೂದೆಯನ್ನು ಯಾವುದೇ ಚರ್ಚೆ ಇಲ್ಲದೆ ಅಂಗೀಕರಿಸಲಾಗಿತ್ತು. ವಿಂಗಡಣೆ ಪ್ರಕ್ರಿಯೆಯಲ್ಲಿ ಸಂಬಂಧಿತ ರಾಜ್ಯಗಳ ಅಭಿಪ್ರಾಯಗಳನ್ನು ಪಡೆದುಕೊಂಡಿರಲಿಲ್ಲ. ಅದರ ಪರಿಣಾಮವಾಗಿ ಎರಡೂ ರಾಜ್ಯಗಳ ನಡುವೆ ಕಹಿ ಮುಂದುವರಿದಿದೆ” ಎಂದು ಹೇಳಿದ್ದರು.
ಮೋದಿ ಅವರ ಹೇಳಿಕೆ ಬೆನ್ನಲ್ಲೇ ತೆಲಂಗಾಣದಾದ್ಯಂತ ಪ್ರತಿಭಟನೆ ನಡೆಸಿದ್ದ ಟಿಆರ್ಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು, ಪ್ರಧಾನಿಯ ಪ್ರತಿಕೃತಿಗಳನ್ನು ದಹಿಸಿದ್ದರು. ಮೋದಿ ಅವರು ತೆಲಂಗಾಣದ ಜನರಿಗೆ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಟಿಆರ್‌ಎಸ್ ನಾಯಕರು ಆಗ್ರಹಿಸಿದ್ದರು. ಕಪ್ಪು ಬ್ಯಾಡ್ಜ್ ಧರಿಸಿದ್ದ ಟಿಆರ್‌ಎಸ್ ಕಾರ್ಯಕರ್ತರು, ಕಪ್ಪು ಬಾವುಟಗಳನ್ನು ಪ್ರದರ್ಶಿಸಿ ಮೋಟಾರ್ ಸೈಕಲ್ ಏರಿ ಪ್ರತಿಭಟನೆ ನಡೆಸಿದ್ದರು. ಗಾಳಿಯಲ್ಲಿ ಕಪ್ಪು ಬಲೂನ್‌ಗಳನ್ನು ಹಾರಿಸಿದ್ದರು.
ಹೈದರಾಬಾದ್‌ನಲ್ಲಿ ಸಚಿವ ತಲಸನಿ ಶ್ರೀನಿವಾಸ ಯಾದವ್ ನೇತೃತ್ವದಲ್ಲಿ ಟಿಆರ್‌ಎಸ್ ಕಾರ್ಯಕರ್ತರು ವಿಧಾನಸೌಧದ ತೆಲಂಗಾಣ ಹುತಾತ್ಮರ ಸ್ಮಾರಕದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರಧಾನಿ ಮೋದಿ ಅವರು ತೆಲಂಗಾಣ ರಚನೆಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಮತ್ತು ರಾಜ್ಯದ ಜನರ ಕ್ಷಮೆ ಕೋರಬೇಕು ಎಂದು ಅವರು ಆಗ್ರಹಿಸಿದ್ದರು.
Read more
[wpas_products keywords=”deal of the day sale today offer all”]