Karnataka news paper

ಮತ್ತೆ ಜೀವಂತಿಕೆ ಪಡೆದುಕೊಂಡ ಪ್ರಭಾಸ್‌–ಅನುಷ್ಕಾ ಲವ್‌: ಏನಿದು ವಿಷಯ?


ಬಾಹುಬಲಿ’ ಖ್ಯಾತಿಯ ನಟಿ, ಕನ್ನಡತಿ ಅನುಷ್ಕಾ ಶೆಟ್ಟಿ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ಹೆಸರು ಗಳಿಸಿದವರು. 

ಕಳೆದ ಕೆಲ ವರ್ಷಗಳಿಂದ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳಲ್ಲಿ ಅನುಷ್ಕಾ ಮದುವೆಯ ಬಗ್ಗೆ ಚರ್ಚೆಗಳು ಕೇಳಿಬರುತ್ತಿದ್ದವು. ಅಲ್ಲದೇ ನಟ ಪ್ರಭಾಸ್ ಹಾಗೂ ಅನುಷ್ಕಾ ಗುಟ್ಟಾಗಿ ಲವ್‌ ಮಾಡುತ್ತಿದ್ದಾರೆ ಎಂಬ ಗಾಳಿ ಮಾತುಗಳು ಹರಿದಾಡಿದ್ದವು.

‘ಪ್ರಭಾಸ್ ಮತ್ತು ಅನುಷ್ಕಾ 40ರ ಹರೆಯ ದಾಟಿದರೂ ಮದುವೆಯಾಗಿಲ್ಲ, ಅವರು ಪ್ರೀತಿ ಮಾಡುತ್ತಿರುವುದೇ ಇದಕ್ಕೆ ಕಾರಣ’ ಎಂದು ಕೆಲ ಪ್ರಭಾಸ್‌ ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರೆ. 

ಇತ್ತೀಚೆಗೆ ಅನುಷ್ಕಾ ಅವರು, ಪ್ರಭಾಸ್‌ ಅಭಿನಯದ ’ಮಿರ್ಚಿ’ ಸಿನಿಮಾದ ಪೋಸ್ಟರ್‌ ಹಂಚಿಕೊಂಡಿದ್ದರು. ಈ ಸಿನಿಮಾ ತೆರೆಕಂಡು 9 ವರ್ಷಗಳಾದವು ಎಂದು ಹಳೆಯ ನೆನಪನ್ನು ಮೆಲುಕು ಹಾಕಿದ್ದರು.

ಪ್ರಭಾಸ್‌ ಇರುವ ಮಿರ್ಚಿ ಪೋಸ್ಟರ್ ಶೇರ್ ಮಾಡಿದ್ದ ಅನುಷ್ಕಾ, ‘ಎಲ್ಲರಿಗೂ ಧನ್ಯವಾದಗಳು… ಬ್ಲಾಕ್‌ಬಸ್ಟರ್ ‘ಮಿರ್ಚಿ’ಗೆ 9 ವರ್ಷಗಳು’ ಎಂದು ಬರೆದುಕೊಂಡಿದ್ದರು. ಸದ್ಯ ಈ ಪೋಸ್ಟ್‌ನಿಂದ ಪ್ರಭಾಸ್‌– ಅನುಷ್ಕಾ ಲವ್‌ ಮಾಡುತ್ತಿರುವ ಗಾಸಿಪ್‌ ಸುದ್ದಿ ಈಗ ಮತ್ತೆ ಜೀವಂತಿಕೆ ಪಡೆದುಕೊಂಡಿದೆ.

ಕೆಲ ಅಭಿಮಾನಿಗಳು ಪ್ರಭಾಸ್‌–ಅನುಷ್ಕಾ ಲವ್‌ ಮಾಡುತ್ತಿದ್ದು ಅವರು ಮದುವೆಯಾಗಬೇಕು ಎಂದು ಹೇಳುತ್ತಿದ್ದಾರೆ. ಇದುವರೆಗೂ ಈ ಜೋಡಿ ಯಾವುದೇ ಮಾಹಿತಿಯನ್ನು ಬಹಿರಂಗವಾಗಿ ಹಂಚಿಕೊಂಡಿಲ್ಲ.



Read More…Source link

[wpas_products keywords=”deal of the day party wear for men wedding shirt”]