Karnataka news paper

ರಾಷ್ಟ್ರಧ್ವಜದ ಬಗ್ಗೆ ಅಪಮಾನ ಸರಿಯಲ್ಲ; ಈಶ್ವರಪ್ಪ ವಿವಾದಾತ್ಮಕ ಹೇಳಿಕೆಗೆ ವಿರುದ್ಧ ಸಿದ್ದರಾಮಯ್ಯ ಕಿಡಿ


ಬೆಂಗಳೂರು: ಭವಿಷ್ಯದಲ್ಲಿ ಕೆಂಪುಕೋಟೆಯಲ್ಲಿ ಭಗವಾಧ್ವಜ ಹಾರಾಡಲೂಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕೆಂಪುಕೋಟೆ ಮೇಲೆ ಕೇಸರಿ‌ ಧ್ವಜ ಹಾರಿಸುವ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಧ್ವಜದ ಬಗ್ಗೆ ಈಶ್ವರಪ್ಪಗೆ ಗೌರವವಿಲ್ಲ. ಈಶ್ವರಪ್ಪ ಇಲ್ಲಿರೋಕೆ ನಾಲಾಯಕ್ ಎಂದು ಕೆಂಡಾಮಂಡಲರಾದರು. ರಾಷ್ಟ್ರಧ್ವಜದ ಬಗ್ಗೆ ಅಪಮಾನ ಸರಿಯಲ್ಲ. ಅದಕ್ಕೆ ಅಗೌರವ ತೋರುವುದು ಸರಿಯಲ್ಲ. ಈಶ್ವರಪ್ಪಗೆ ರಾಷ್ಟ್ರಧ್ವಜದ ಬಗ್ಗೆ ಅರಿವಿದ್ರೇ ತಾನೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಶ್ವರಪ್ಪ ನೀಡಿರುವ ಈ ವಿವಾದಾತ್ಮಕ ಹೇಳಿಕೆಯ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುತ್ತೇನೆ ಎಂದ ಸಿದ್ದರಾಮಯ್ಯ, ಈಶ್ವರಪ್ಪಗೆ ಮಾತಿನಲ್ಲೇ ಚಾಟಿ ಬೀಸಿದರು.
ಭವಿಷ್ಯದಲ್ಲಿ ಭಗವಾಧ್ವಜ ರಾಷ್ಟ್ರ ಧ್ವಜ ಆಗಬಹುದು..! ಸಚಿವ ಕೆ. ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ
ಭವಿಷ್ಯದಲ್ಲಿ ಭಗವದ್‌ ಧ್ವಜ ರಾಷ್ಟ್ರ ಧ್ವಜವಾಗಬಹುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹಿಜಾಬ್ ಕೇಸರಿ ಸಂಘರ್ಷದ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ್ದ ಕೆ.ಎಸ್ ಈಶ್ವರಪ್ಪ, ಕೇಸರಿ ಶಾಲನ್ನು ಜಗತ್ತಿನಲ್ಲಿ ಎಲ್ಲಿ ಬೇಕಾದ್ರೂ ಹಾರಿಸ್ತೇವೆ. ಈ ಹಿಂದೆ ರಾಮಚಂದ್ರ, ಮಾರುತಿ ರಥದ ಮೇಲೆ ಕೇಸರಿ ಧ್ವಜ ಇತ್ತು. ಈಗ ರಾಷ್ಟ್ರ ಧ್ವಜ ಫಿಕ್ಸ್ ಆಗಿದೆ. ರಾಷ್ಟ್ರ ಧ್ವಜಕ್ಕೆ ಅನ್ನ ತಿನ್ನುವ ಪ್ರತಿಯೊಬ್ಬನೂ ಗೌರವ ಕೊಡಬೇಕು ಎಂದಿದ್ದರು.

ಅಲ್ಲದೇ, ಇವತ್ತಲ್ಲ ಯಾವತ್ತೋ ಒಂದು ದಿನ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುತ್ತೇವೆ ಅಂದಾಗ ನಗುತ್ತಿದ್ದರು. ಈಗ ಕಟ್ಟುತ್ತಿದ್ದೇವಲ್ಲಾ? ಹಾಗೆಯೇ ಇನ್ನು ನೂರು ವರ್ಷನೋ ಐನೂರು ವರ್ಷದ ನಂತರ ಭಾಗವತ್ ಧ್ವಜಯೇ ರಾಷ್ಟ್ರ ಧ್ವಜ ಆಗಬಹುದು. ಆಗ ಎಲ್ಲಿ ಬೇಕಾದರೂ ಹಾರಬಹುದು ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು.



Read more

[wpas_products keywords=”deal of the day sale today offer all”]