Karnataka news paper

‘ಆಗ ತಂಡದಲ್ಲಿ ಕೊಹ್ಲಿ ಭಾಯ್‌ ಇರಲಿಲ್ಲ’ ಪಂದ್ಯದ ಬಳಿಕ ಹೂಡಾ ಭಾವುಕ!


ಅಹಮದಾಬಾದ್‌: ವೆಸ್ಟ್‌ ಇಂಡೀಸ್‌ ವಿರುದ್ದ ಎರಡನೇ ಒಡಿಐ ಪಂದ್ಯದಲ್ಲಿ ಭಾರತ ತಂಡ 44 ರನ್‌ಗಳಿಂದ ಗೆಲುವು ಪಡೆದ ಬಳಿಕ ಸಹ ಆಟಗಾರರ ಸೂರ್ಯಕುಮಾರ್‌ ಯಾದವ್‌ ಅವರ ಜೊತೆ ಸಂಭಾಷಣೆ ನಡೆಸಿದ ದೀಪಕ್‌ ಹೂಡಾ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಶನಿವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಸಂಘಟಿತ ಪ್ರದರ್ಶನ ತೋರುವ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಓಡಿಐ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಪಂದ್ಯದ ಬಳಿಕ ಸೂರ್ಯಕುಮಾರ್‌ ಯಾದವ್‌ ಅವರ ಜೊತೆ ಸಂಭಾಷಣೆ ನಡೆಸಿದ ದೀಪಕ್‌ ಹೂಡಾ, ವೆಸ್ಟ್ ಇಂಡೀಸ್‌ ವಿರುದ್ಧ ಮೊದಲನೇ ಪಂದ್ಯದ ವೇಳೆ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರಿಂದ ಟೀಮ್‌ ಇಂಡಿಯಾ ಕ್ಯಾಪ್‌ ಸ್ವೀಕರಿಸಿದ್ದ ಬಗ್ಗೆ ಮಾತನಾಡಿದರು.

ಪ್ರಸಿಧ್‌ ಪರಾಕ್ರಮ, ತಾಯ್ನಾಡಿನಲ್ಲಿ ಐತಿಹಾಸಿಕ ಸರಣಿ ಗೆದ್ದ ಭಾರತ!

“ನಾನು ಮೊಟ್ಟ ಮೊದಲ ಬಾರಿ ಭಾರತ ತಂಡಕ್ಕೆ ಬಂದಾಗ ವಿರಾಟ್‌ ಭಾಯ್‌ ತಂಡದಲ್ಲಿ ಇರಲಿಲ್ಲ. ಆದರೆ ಇದು ನನ್ನ ಬಾಲ್ಯದ ಕನಸು. ಕ್ರಿಕೆಟ್‌ ದಂತಕತೆಗಳಾದ ಧೋನಿ ಭಾಯ್‌ ಹಾಗೂ ವಿರಾಟ್‌ ಭಾಯ್‌ ಅವರನ್ನು ನೋಡಿಕೊಂಡು ಬೆಳೆದಿದ್ದೇನೆ. ಹಾಗಾಗಿ ವಿರಾಟ್‌ ಭಾಯ್‌ ಅಥವಾ ಧೋನಿ ಭಾಯ್‌ ಅವರಿಂದ ಟೀಮ್‌ ಇಂಡಿಯಾ ಕ್ಯಾಪ್‌ ಸ್ವೀಕರಿಸುವು ನನ್ನ ಕನಸಾಗಿತ್ತು,” ಎಂದು ಹೇಳಿದ್ದಾರೆ.

ಕಳೆದ 2017ರಲ್ಲಿಯೇ ದೀಪಕ್‌ ಹೂಡಾ ಶ್ರೀಲಂಕಾ ವಿರುದ್ಧ ಟಿ20 ಸರಣಿಯ ಭಾರತ ತಂಡದಲ್ಲಿ ಮೊಟ್ಟ ಮೊದಲ ಬಾರಿ ಆಯ್ಕೆಯಾಗಿದ್ದರು. ಆದರೆ ಈ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್‌ ಶರ್ಮಾ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ ಆಡುವ ಬಳಗದಲ್ಲಿ ಹೂಡಾಗೆ ಅವಕಾಶ ಸಿಕ್ಕಿರಲಿಲ್ಲ.

ಪಂತ್‌ ತಮ್ಮೊಂದಿಗೆ ಇನಿಂಗ್ಸ್ ಆರಂಭಿಸಲು ಕಾರಣ ತಿಳಿಸಿದ ರೋಹಿತ್‌!

“ವಿರಾಟ್‌ ಭಾಯ್‌ ಅವರಿಂದ ಟೀಮ್‌ ಇಂಡಿಯಾ ಕ್ಯಾಪ್‌ ಸ್ವೀಕರಿಸಿದ್ದು, ನನ್ನ ಪಾಲಿಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ,” ಎಂದು ಸೂರ್ಯಕುಮಾರ್‌ ಅವರ ಜೊತೆಗಿನ ಸಂಭಾಷಣೆಯಲ್ಲಿ ಹೂಡಾ ಭಾವುಕರಾದರು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಆರಂಭಿಸಿದ್ದ ಭಾರತ ತಂಡ ಒಂದು ಹಂತದಲ್ಲಿ 43 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿತ್ತು. ಈ ವೇಳೆ ಮದ್ಯಮ ಕ್ರಮಾಂಕದಲ್ಲಿ ಕೆ.ಎಲ್‌ ರಾಹುಲ್‌(49) ಹಾಗೂ ಸೂರ್ಯಕುಮಾರ್‌(64) 91 ರನ್‌ ಜೊತೆಯಾಟವಾಡಿದ್ದರು. ಇವರ ಜೊತೆಗೆ ದೀಪಕ್‌ ಹೂಡಾ ಕೂಡ 25 ಎಸೆತಗಳಲ್ಲಿ ನಿರ್ಣಾಯಕ 29 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು.

ಕೇವಲ 12 ರನ್ ನೀಡಿ 4 ವಿಕೆಟ್‌ ಪಡೆದ ಬಗ್ಗೆ ಕನ್ನಡಿಗ ಪ್ರಸಿಧ್‌ ಹೇಳಿದ್ದಿದು!

ನಂತರ ಬೌಲಿಂಗ್‌ನಲ್ಲಿಯೂ ಒಂದೇ ಒಂದು ನಿರ್ಣಾಯಕ ವಿಕೆಟ್‌ ಉರುಳಿಸಿದ್ದರು. 238 ರನ್‌ ಗಳಿಸಿದ್ದ ವೆಸ್ಟ್‌ ಇಂಡೀಸ್‌ ಪರ ಒಂದು ಹಂತದಲ್ಲಿ ಕಠಿಣ ಹೋರಾಟ ನಡೆಸುತ್ತಿದ್ದ ಶಮಾರ್ಹ ಬ್ರೂಕ್ಸ್ (44) ಅವರನ್ನು ದೀಪಕ್‌ ಹೂಡಾ ನಿರ್ಣಾಯಕ ಸನ್ನಿವೇಶದಲ್ಲಿ ಔಟ್‌ ಮಾಡಿದರು. ಆ ಮೂಲಕ ಭಾರತದ ಕಮ್‌ಬ್ಯಾಕ್‌ ನೆರವಾಗಿದ್ದರು.

ಅಂದಹಾಗೆ ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲನೇ ಹಣಾಹಣಿಯಲ್ಲಿ ದೀಪಕ್‌ ಹೂಡಾ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲಿಯೂ ಹೂಡಾ ಅಜೇಯ 26 ರನ್ ಗಳಿಸಿದ್ದರು. ಆ ಮೂಲಕ ಭಾರತ ತಂಡದ 6 ವಿಕೆಟ್‌ ಗೆಲುವಿಗೆ ನೆರವಾಗಿದ್ದರು.

ಪಂತ್‌ ಬದಲು ಈ ಆಟಗಾರನೇ ಇನಿಂಗ್ಸ್‌ ಆರಂಭಿಸಬೇಕಾಗಿತ್ತೆಂದ ಗವಾಸ್ಕರ್‌!



Read more

[wpas_products keywords=”deal of the day gym”]