ಕಲಾ ಜಗತ್ತಿಗೆ ಡಾ.ರಾಜ್ ಕುಮಾರ್ ನೀಡಿದ ಅಪೂರ್ವ ಸೇವೆ ಹಾಗೂ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಅಣ್ಣಾವ್ರಿಗೆ ಗೌರವ ಡಾಕ್ಟರೇಟ್ ಲಭಿಸಿ 46 ವರ್ಷಗಳು ತುಂಬಿವೆ. ನಿನ್ನೆಗೆ (ಫೆಬ್ರವರಿ 8) ಸರಿಯಾಗಿ 46 ವರ್ಷಗಳ ಹಿಂದೆ ಡಾ.ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಲಭಿಸಿತ್ತು. ಈ ಕುರಿತು ಅಣ್ಣಾವ್ರ ಮಗ ರಾಘವೇಂದ್ರ ರಾಜ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.
ಡಾ.ರಾಜ್ ನಿಧನದ ನಂತರ ‘ದೊಡ್ಮನೆ’ ಎರಡು ಮನೆ ಆಗಿದ್ದು ಯಾಕೆ? ಕಟು ಸತ್ಯ ಬಹಿರಂಗ!
ರಾಘವೇಂದ್ರ ರಾಜ್ ಕುಮಾರ್ ಟ್ವೀಟ್
‘’ಸರಿಯಾಗಿ 46 ವರ್ಷಗಳ ಹಿಂದೆ ಅಂದರೆ ಫೆಬ್ರವರಿ 8, 1976 ರಂದು ಮೈಸೂರು ವಿಶ್ವವಿದ್ಯಾಲಯ ಅಪ್ಪಾಜಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು’’ ಎಂದು ರಾಘವೇಂದ್ರ ರಾಜ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಗೌರವ ಡಾಕ್ಟರೇಟ್ ಪದವಿ ಪಡೆದ ಡಾ.ರಾಜ್ ಕುಮಾರ್ ಅವರ ಅಪರೂಪದ ಫೋಟೋವನ್ನೂ ರಾಘವೇಂದ್ರ ರಾಜ್ ಕುಮಾರ್ ಹಂಚಿಕೊಂಡಿದ್ದಾರೆ.
ಡಾ.ರಾಜ್ ಅವರ ಆಸೆ ನೆರವೇರಿಸಿದ್ದ ಪಂಡಿತ್ ಭೀಮಸೇನ ಜೋಷಿ
ಮಾನಸ ಗಂಗೋತ್ರಿಯಲ್ಲಿ ಕಾರ್ಯಕ್ರಮ ನಡೆದಿತ್ತು
ಫೆಬ್ರವರಿ 8, 1976 ರಂದು ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಡಾ.ರಾಜ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿತ್ತು. ಈ ಸಮಾರಂಭಕ್ಕೆ ಅಂದಿನ ರಾಜ್ಯಪಾಲರಾದ ಡಾ.ಉಮಾಶಂಕರ ದೀಕ್ಷಿತ್, ವಿವಿ ಕುಲಪತಿ ಡಾ.ಡಿ.ವಿ.ಅರಸು ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಡಾ.ರಾಜ್ ಕಮಾರ್ ಅವರ ಜೊತೆಗೆ ಅದೇ ದಿನ ಮುಂಬೈನ ಬಾಬಾ ಅಟಾಮಿಕ್ ಎನರ್ಜಿ ಸೆಂಟರ್ ನಿರ್ದೇಶಕರಾದ ಡಾ.ಎಚ್.ಎನ್.ಸೇತ್ನಾ, ಕನ್ನಡ ಬರಹಗಾರ ವಿ.ಸೀತಾರಾಮಯ್ಯ, ಇತಿಹಾಸ ಪ್ರಾಧ್ಯಾಪಕ ಎಂ.ಎಚ್.ಗೋಪಾಲ್ ಅವರಿಗೂ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿತ್ತು.
ರಾಜ್‌ಕುಮಾರ್‌ರನ್ನು ರಿಲೀಸ್ ಮಾಡಲು ವೀರಪ್ಪನ್‌ಗೆ ಕೋಟಿ ಕೋಟಿ ಹಣ ಕೊಟ್ಟಿದ್ದು ನಿಜವೇ?
ಡಾಕ್ಟರೇಟ್ ಬಗ್ಗೆ ಡಾ.ರಾಜ್ ಕುಮಾರ್ ಹೀಗೆ ಹೇಳಿದ್ದರು!
ಗೌರವ ಡಾಕ್ಟರೇಟ್ ಪದವಿ ಪಡೆದ ಬಗ್ಗೆ ಡಾ.ರಾಜ್ ಕುಮಾರ್ ವೇದಿಕೆಯೊಂದರಲ್ಲಿ ಹೀಗೆ ಹೇಳಿದ್ದರು – ‘’ಏನನ್ನ ನೋಡಿ ನನಗೆ ಡಾಕ್ಟರೇಟ್ ಕೊಡ್ತಿದ್ದೀರಾ? ನಾನು ವಿದ್ಯಾವಂತನಲ್ಲ, ಓದಿದವನಲ್ಲ. ನಾನೇನು ಎಂ.ಎ ಆಗಲಿ, ಪಿ.ಎಚ್.ಡಿ ಆಗಲಿ ಮಾಡಿದ್ದೀನಾ? ಬಾಲ್ಯದಲ್ಲಿ ನಾನು ಹಳ್ಳಿಯಲ್ಲಿ ಎಮ್ಮೆ ಮೇಯಿಸ್ತಾ ಇದ್ದೆ’’
Read more
[wpas_products keywords=”deal of the day party wear dress for women stylish indian”]