Karnataka news paper

ಬಸ್ ಪ್ರಯಾಣಿಕರನ್ನು ಅವರ ಪ್ಲಾಟ್ ಫಾರ್ಮ್ ಗೆ ಡ್ರಾಪ್ ಮಾಡುವ ಪರಿಸರಸ್ನೇಹಿ ಇ ವಾಹನ: ತೆಲಂಗಾಣ ಸಾರಿಗೆ ಸಂಸ್ಥೆ ವಿನೂತನ ಯೋಜನೆ


The New Indian Express

ಹೈದರಾಬಾದ್: ಬಗ್ಗಿ ಕಾರ್ಟ್ ವಾಹನವನ್ನು ಸಾಮಾನ್ಯವಾಗಿ ಗಾಲ್ಫ್ ಮೈದಾನಗಳಲ್ಲಿ ಬಳಸಲಾಗುತ್ತದೆ. ವಿಸ್ತಾರವಾದ ಗಾಲ್ಫ್ ಮೈದಾನದ ಮೂಲೆಗಳಿಗೆ ಆಟಗಾರರು ಅದರಲ್ಲಿಯೇ ಪ್ರಯಾಣಿಸುವುದು.

ಇದನ್ನೂ ಓದಿ: ಪರಿಸರಸ್ನೇಹಿ ಕಾಗದ ಉತ್ಪಾದನೆ: ಶಿವಮೊಗ್ಗದ ಯುವಕ ಶೇಖ್ ಮೊಹಮದ್ ಸಾಧನೆ; 30 ದೇಶಗಳಿಗೆ ರಫ್ತು

ಅದೇ ಬಗ್ಗಿ ಕಾರ್ಟ್ ಅನ್ನು ಬಸ್ ನಿಲ್ದಾಣದಲ್ಲಿ ಬಳಸುವ್ಬ ವಿನೂತನ ಉಪಾಯ ಹೊಳೆದಿದ್ದು ತೆಲಂಗಾಣ ಸಾರಿಗೆ ಸಂಸ್ಥೆಗೆ. ವಿಸ್ತೃತವಾಗಿ ಹರಡಿಕೊಂಡ ಬಸ್ ನಿಲ್ದಾಣಗಳಲ್ಲಿ ಪ್ಲಾಟ್ ಮಾರ್ಮಿನಿಂದ ಇನ್ನೊಂದು ಪ್ಲಾಟ್ ಫಾರ್ಮಿಗೆ ಹೋಗುವುದು ತುಂಬಾ ತ್ರಾಸದಾಯಕ ಕೆಲಸ, ಗೊಂದಲಕಾರಿಯೂ ಹೌದು.

ಇದನ್ನೂ ಓದಿ: ಪುದುಚೆರಿ ಬಾಕ್ಸಿಂಗ್ ಟೂರ್ನಿಯಲ್ಲಿ ಪದಕ ಗೆದ್ದ ಕರ್ನಾಟಕದ ಸಿದ್ದಿ ಜನಾಂಗದ 7 ಮಂದಿ ಬಾಕ್ಸರ್ ಗಳು

ಲಿಥುವೇನಿಯಾ ಯುವತಿ- ಕೇರಳ DYFI ಯುವಕ ಪ್ರೇಮವಿವಾಹ: ಕಮ್ಯುನಿಸಂ ಭಯವಿದ್ದ ಪಾಲಕರನ್ನು ಒಪ್ಪಿಸಿದ ಯುವತಿ

ಅದರಲ್ಲೂ ಹಿರಿಯರು, ವಿಕಲಾಂಗರು, ಗರ್ಭಿಣಿಯರಿಗೆ ಆಗುವ ಕಷ್ಟ ಹೇಳತೀರದು. ಹೀಗಾಗಿ ಸರಂಜಾಮು ಸಮೇತ ಪ್ರಯಾಣಿಕರನ್ನು ಅವರವರ ಪ್ಲಾಟ್ ಫಾರ್ಮಿಗೆ ಡ್ರಾಪ್ ಮಾಡಲು ಟಿಎಸ್ ಆರ್ ಟಿ ಸಿ ಬಗ್ಗಿ ಕಾರ್ಟ್ ನೆರವು ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ: ಲಿಥುವೇನಿಯಾ ಯುವತಿ- ಕೇರಳ DYFI ಯುವಕ ಪ್ರೇಮವಿವಾಹ: ಕಮ್ಯುನಿಸಂ ಭಯವಿದ್ದ ಪಾಲಕರನ್ನು ಒಪ್ಪಿಸಿದ ಯುವತಿ

ಸದ್ಯ ಈ ವಾಹನ ಗೌಳಿಗುಡದ ಸೆಂಟ್ರಲ್ ಬಸ್ ನಿಲ್ದಾಣ ಮತ್ತು ಎಂಜಿಬಿಎಸ್ ನಿಲ್ದಾಣದ ನಡುವೆ ಕಾರ್ಯಾಚರಿಸುತ್ತಿದೆ. ಈ ವಾಹನವನ್ನು ನಿರ್ಮಿಸಿದ್ದು ಬೆಂಗಳೂರಿನ ಮೈನಿ ಎನ್ನುವ ಸಂಸ್ಥೆ

ಇದನ್ನೂ ಓದಿ:  ಕೇರಳ: ಗಾಯಗೊಂಡ ಡಾಲ್ಫಿನ್ ರಕ್ಷಣೆಗೆ ಮುಂದಾದ ಅಪ್ಪ ಮಗಳು; ಜನರಿಂದ ಮೆಚ್ಚುಗೆ

ಏಕಕಾಲಕ್ಕೆ 12 ಮಂದಿ ಈ ವಾಹನದಲ್ಲಿ ಕುಳಿತುಕೊಳ್ಳಬಹುದು. ದಿನಕ್ಕೆ ಸುಮಾರು 2,000 ಮಂದಿ ಬಸ್ ಪ್ರಯಾಣಿಕರು ಈ ಬಗ್ಗಿ ಕಾರ್ಟ್ ನೆರವು ಪಡೆದುಕೊಳ್ಳುತ್ತಿದ್ದಾರೆ. ಈ ವಾಹನ ವಿದ್ಯುತ್ ಚಾಲಿತ ಎನ್ನುವುದು ವಿಶೇಷ. ಅಲ್ಲದೆ ಈ ಸೇವೆ ಉಚಿತವಾಗಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಮಂಜುಗಡ್ಡೆಯಿಂದ ನಿರ್ಮಿತ ಇಗ್ಲೂ ಕೆಫೆ: ಮಂಜುಗಡ್ಡೆಯ ಟೇಬಲ್ ಕುರ್ಚಿಗಳು



Read more

[wpas_products keywords=”deal of the day”]