Karnataka news paper

ನಾಲ್ಕು ರಾಷ್ಟ್ರಗಳ ಟಿ20 ಸರಣಿಯ ಪಾಕ್ ಪ್ರಸ್ತಾವನೆಯನ್ನು ತಿರಸ್ಕರಿಸಿದ ಬಿಸಿಸಿಐ


Online Desk

ಮುಂಬೈ: ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಒಳಗೊಂಡ ನಾಲ್ಕು ರಾಷ್ಟ್ರಗಳ ಟಿ20 ಸರಣಿಯನ್ನು ಯೋಜಿಸುವ ಪಿಸಿಬಿಯ ಪ್ರಸ್ತಾವನೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಿರಸ್ಕರಿಸಿದೆ. 

ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಪ್ರಸ್ತಾಪಿಸಿರುವ ಪಂದ್ಯಾವಳಿಯಿಂದ ಅಲ್ಪಾವಧಿಯ ವಾಣಿಜ್ಯ ಪ್ರಯೋಜನಗಳನ್ನು ಹೊರತುಪಡಿಸಿ ಹೆಚ್ಚಿನ ಪ್ರಯೋಜನವಾಗುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಪರಿಚಯಿಸಲು ಚಿಂತನೆ ನಡೆಸಲಾಗುತ್ತಿದೆ ಜೊತೆಗೆ ಐಪಿಎಲ್, ಐಸಿಸಿ ಈವೆಂಟ್‌ಗಳು ಕುರಿತು ಉನ್ನತ ಮಟ್ಟದ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ ಶಾ, ಅಲ್ಪಾವಧಿಯ ಪ್ರಯೋಜನಗಳನ್ನು(ರಮೀಜ್ ರಾಜಾ ಪ್ರಸ್ತಾಪಿಸಿದ ನಾಲ್ಕು ರಾಷ್ಟ್ರಗಳ ಪಂದ್ಯಾವಳಿ ) ಅಂತಹ ಸಂದರ್ಭಗಳಲ್ಲಿ ಮುಖ‍್ಯವಲ್ಲ ಎಂದು ಪಿಸಿಬಿಯ ಪ್ರಸ್ತಾಪವನ್ನು ತಳ್ಳಿಹಾಕಿದರು. ಈ ಮೂಲಕ ಭಾರತ ಮತ್ತು ಪಾಕಿಸ್ತಾನ ನಡುವಿನ ನಾಲ್ಕು ರಾಷ್ಟ್ರಗಳ ಟಿ20 ಸರಣಿ ಆರಂಭದಲ್ಲೆ ಶಾ ಅವರ ವಿರೋಧಿಸಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವಕಪ್: ಕೇವಲ 5 ನಿಮಿಷದಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್‌ ಸೋಲ್ಡೌಟ್!

ಇದರೊಂದಿಗೆ ಶೀಘ್ರದಲ್ಲೇ ಭಾರತ-ಪಾಕಿಸ್ತಾನ ಸರಣಿಯ ನಿರೀಕ್ಷೆಯಲ್ಲಿದ್ದ ಎರಡೂ ದೇಶಗಳ ಅಭಿಮಾನಿಗಳು ಹತಾಶರಾಗಿದ್ದಾರೆ.ಕಳೆದ ತಿಂಗಳು, ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಅವರು ಐಸಿಸಿ ಮುಂದೆ ನಾಲ್ಕು ರಾಷ್ಟ್ರಗಳ ಕ್ರಿಕೆಟ್ ಸರಣಿಯ ಪ್ರಸ್ತಾಪವನ್ನು ಮುಂದಿಟ್ಟಿದ್ದರು. 2021ರ T20 ವಿಶ್ವಕಪ್ ನಲ್ಲಿ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಬಂದ TRP ಆಧರಿಸಿ PCB ಈ ಪ್ರಸ್ತಾಪವನ್ನು ಮುಂದಿಟ್ಟಿತ್ತು.



Read more…

[wpas_products keywords=”deal of the day sports items”]