ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಯಾಗುವುದನ್ನು ಮಿತಿಗೊಳಿಸಲು ನಾವು ಪ್ರಯತ್ನ ಮಾಡಿದ್ದೇವೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದು, ಗ್ರಾಹಕ ಬೆಲೆ ಸೂಚ್ಯಂಕ ಹೆಚ್ಚಿನ ಮಟ್ಟದಲ್ಲಿದ್ದರೂ, ಇದು ನಿರೀಕ್ಷಿತ ಹಾದಿಯಲ್ಲಿದೆ. ಪ್ರಸಕ್ತ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಮುಖ್ಯ ಹಣದುಬ್ಬರವು ಗರಿಷ್ಠ ಮಟ್ಟಕ್ಕೆ ಏರುವ ನಿರೀಕ್ಷೆಯಿದೆ ಎಂದಿರುವ ಅವರು ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಮಧ್ಯಮ ಪ್ರಮಾಣದಲ್ಲಿರುತ್ತದೆ ಎಂದಿದ್ದಾರೆ.
ಮುಂದಿನ ಹಣಕಾಸು ವರ್ಷದಲ್ಲಿ ಅಂದರೆ 2022-2023ರಲ್ಲಿ ಜಿಡಿಪಿ ಶೇ. 8- 8.5 ಇರಬಹುದು ಎನ್ನಲಾಗಿತ್ತು. ಆದರೆ ಮುಂದಿನ ವರ್ಷ ಶೇ. 7.8ರ ದರದಲ್ಲಿ ಜಿಡಿಪಿ ಬೆಳವಣಿಗೆ ಕಾಣಲಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
2022-23ರಲ್ಲಿ ಹಣದುಬ್ಬರ ಶೇ. 4.5 ಇರಲಿದೆ ಎಂದು ಅವರು ಹೇಳಿದ್ದು, ಮೊದಲ ತ್ರೈಮಾಸಿಕದಲ್ಲಿ ಶೇ. 4.9, ಎರಡನೇ ತ್ರೈಮಾಸಿಕದಲ್ಲಿ ಶೇ. 5, ಮೂರನೇ ತ್ರೈಮಾಸಿಕದಲ್ಲಿ ಶೇ. 4 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ. 4.2 ಇರಬಹುದು ಎಂದು ಅಂದಾಜಿಸಲಾಗಿದೆ ಎಂದಿದ್ದಾರೆ.
ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) 2021-22ರಲ್ಲಿ ಶೇ. 5.3 ಇರಲಿದೆ ಎಂದು ಎಂದು ಆರ್‌ಬಿಐ ಇದೇ ವೇಳೆ ಹೇಳಿದೆ. ಸಿಪಿಐ ನಿರೀಕ್ಷೆಗಳಿಗೆ ಅನುಗುಣವಾಗಿರುತ್ತದೆ. ಆಹಾರದ ಬೆಲೆಗಳು ಆಶಾವಾದಾಯವಾಗಿದ್ದರೆ, ಕಚ್ಚಾ ತೈಲ ದರ ಏರಿಕೆ ಪ್ರಮುಖ ಅಪಾಯವಾಗಿದೆ ಎಂದು ಕೇಂದ್ರೀಯ ಬ್ಯಾಂಕ್ ವಿಶ್ಲೇಷಿಸಿದೆ.
ವಾಲಂಟರಿ ರಿಟೆನ್ಶನ್ ಸ್ಕೀಂ ಅಡಿಯಲ್ಲಿ ಒಳಹರಿವಿನ ಮಿತಿಯನ್ನು 1.5 ಲಕ್ಷ ಕೋಟಿ ರೂ.ನಿಂದ 2.5 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಇದರಿಂದ ಸರ್ಕಾರಿ ಭದ್ರತೆಗಳನ್ನು ಒಳಗೊಂಡಂತೆ ದೇಶೀಯ ಸಾಲ ಮಾರುಕಟ್ಟೆಗಳಿಗೆ ಹೆಚ್ಚಿನ ಮೊತ್ತದ ಬಂಡವಾಳ ಲಭ್ಯವಾಗಲಿದೆ.
ದೇಶೀಯ ಆರ್ಥಿಕತೆಯನ್ನು ಜಾಗತಿಕ ಗಂಡಾಂತರಗಳಿಂದ ರಕ್ಷಿಸುವುದನ್ನು ಆರ್‌ಬಿಐ ಮುಂದುವರಿಸುತ್ತದೆ ಎಂದು ಭರವಸೆ ನೀಡಿರುವ ಶಕ್ತಿಕಾಂತ್ ದಾಸ್, ಒಟ್ಟಾರೆ ನಗದು ಲಭ್ಯತೆಯನ್ನು ಮಿತಿಗೊಳಿಸಿದ್ದರೂ ವ್ಯವಸ್ಥೆಯಲ್ಲಿ ಹೆಚ್ಚುವರಿ ಹಣಕಾಸು ಲಭ್ಯವಿದೆ ಎಂದಿದ್ದಾರೆ.
ವಾಣಿಜ್ಯ ಕ್ಷೇತ್ರದ 20 ಕ್ಕೂ ಹೆಚ್ಚು ವಲಯಗಳಿಗೆ ಸಂಬಂಧಿಸಿದ ಅತ್ಯುತ್ತಮ ಲೇಖನಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಆಳವಾದ ಮಾಹಿತಿಗಾಗಿ ನೀವು ಎಕನಾಮಿಕ್ ಟೈಮ್ಸ್ ಓದಬಹುದು. ಮಾಹಿತಿಯುಕ್ತ ಲೇಖನಗಳನ್ನು ಓದಲು ಎಕನಾಮಿಕ್ ಟೈಮ್ಸ್ ಇಲ್ಲಿ ಕ್ಲಿಕ್ ಮಾಡಿ.
Read more
[wpas_products keywords=”deal of the day sale today offer all”]