PTI
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಬಿಜೆಪಿಯ ಸುವೇಂದು ಅಧಿಕಾರಿ ಅವರು ಟಿಎಂಸಿಗೆ ಮರಳಲು ಉತ್ಸುಕರಾಗಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ವಕ್ತಾರ ಕುನಾಲ್ ಘೋಷ್ ಅವರು ಬುಧವಾರ ಹೇಳಿದ್ದಾರೆ.
ಕೇಸರಿ ಪಕ್ಷದಲ್ಲಿ ಸುವೇಂದು ಅಧಿಕಾರಿ ಅವರಿಗೆ ಉಸಿರುಗಟ್ಟಿದಂತಾಗಿದೆ. ಹೀಗಾಗಿ ಅವರು ಮತ್ತೆ ಟಿಎಂಸಿಗೆ ಬರಲು ಬಯಸಿದ್ದಾರೆ. ಆದರೆ, ಬಿಜೆಪಿ ಸೇರ್ಪಡೆಗೊಂಡ ನಂತರ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ವಿರುದ್ಧ “ನಿಂದನೀಯ” ಹೇಳಿಕೆಗಳಿಂದಾಗಿ ಟಿಎಂಸಿ ಮತ್ತೆ ಅವರನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಘೋಷ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನು ಓದಿ: ಗೋವಾ ಚುನಾವಣೆ: ಟಿಎಂಸಿ ಪ್ರಣಾಳಿಕೆ ಬಿಡುಗಡೆ, ಮಹದಾಯಿ ನೀರಿನ ಮೇಲಿನ ಹಕ್ಕು ಎತ್ತಿ ಹಿಡಿಯುವ ಭರವಸೆ
ಬಿಧಾನಗರ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿಯಾಗಿರುವ ಸಬ್ಯಸಾಚಿ ದತ್ತಾ ಅವರನ್ನು ‘ಗೋಸುಂಬೆ’ ಎಂದು ಟೀಕಿಸಿದ್ದ ಅಧಿಕಾರಿ, ಇತ್ತೀಚೆಗೆ ಅವರಿಗೆ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಿದ್ದು ಬಿಜೆಪಿಯ ತಪ್ಪು ಎಂದು ಹೇಳಿದ್ದರು.
ದತ್ತಾ ಅವರು 2019 ರಲ್ಲಿ ಟಿಎಂಸಿ ತೊರೆದು 2021 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ನಂತರ ಮತ್ತೆ ಟಿಎಂಸಿಗೆ ಮರಳಿದ್ದಾರೆ.
ದತ್ತಾ ವಿರುದ್ಧದ ಟೀಕೆಗಳಿಗೆ ಪ್ರತಿಕ್ರಿಯಿಸಿ ಘೋಷ್ ಅವರು, “ಬಿಜೆಪಿಗೆ ಸೇರಿದ ನಂತರ ಅವರ ಕನಸುಗಳು ನುಚ್ಚುನೂರಾಗಿರುವುದರಿಂದ ಸುವೇಂದು ಅಧಿಕಾರಿ ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಅವರು ಇತರ ಎರಡು-ಮೂರು ನಾಯಕರೊಂದಿಗೆ ಟಿಎಂಸಿಗೆ ಮರಳಲು ಬಯಸುತ್ತಾರೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. “ಆದರೆ ಸುವೇಂದು ಅಧಿಕಾರಿಯಂತಹ ವ್ಯಕ್ತಿಗಳಿಗೆ ನಮ್ಮ ಪಕ್ಷದ ಬಾಗಿಲು ಮುಚ್ಚಿದೆ” ಎಂದು ಹೇಳಿದ್ದಾರೆ.
Read more
[wpas_products keywords=”deal of the day”]