ನಿನಾದ್ ಹರಿತ್ಸ – ರಮ್ಯಾ ಎಂಗೇಜ್‌ಮೆಂಟ್
ನಟ ನಿನಾದ್ ಹರಿತ್ಸ ಅವರ ನಿಶ್ಚಿತಾರ್ಥ ಸಮಾರಂಭ ಇತ್ತೀಚೆಗಷ್ಟೇ ಜರುಗಿದೆ. ತಮ್ಮ ದೀರ್ಘಕಾಲದ ಗೆಳತಿ ರಮ್ಯಾರನ್ನ ಕೈಹಿಡಿಯಲು ನಟ ನಿನಾದ್ ಹರಿತ್ಸ ಸಿದ್ಧವಾಗಿದ್ದಾರೆ. ರಮ್ಯಾ ಹಾಗೂ ನಟ ನಿನಾದ್ ಹರಿತ್ಸ ಅವರ ಎಂಗೇಜ್‌ಮೆಂಟ್ ನೆರವೇರಿದ್ದು, ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದಾರೆ.
ಗಾಸಿಪ್‌ಗೆ ಬ್ರೇಕ್ ಹಾಕಿದ ‘ನಾಗಿಣಿ 2’ ಕಲಾವಿದರಾದ ನಿನಾದ್, ನಮ್ರತಾ ಗೌಡ!
ಲವ್ ಕಮ್ ಅರೇಂಜ್ಡ್ ಮ್ಯಾರೇಜ್
ನಟ ನಿನಾದ್ ಹರಿತ್ಸ ಕಿರುತೆರೆ ಲೋಕದಲ್ಲಿ ಬಿಜಿಯಾಗಿದ್ದಾರೆ. ಆದರೆ, ರಮ್ಯಾಗೆ ಬಣ್ಣದ ಬದುಕಿನ ನಂಟಿಲ್ಲ. ಸಿಎ ಓದಿರುವ ರಮ್ಯಾ ಮತ್ತು ನಟ ನಿನಾದ್ ಹರಿತ್ಸಗೆ ಕೆಲ ವರ್ಷಗಳಿಂದ ಪರಿಚಯ ಇದೆ. ಪರಸ್ಪರ ಪ್ರೀತಿಸುತ್ತಿದ್ದ ನಟ ನಿನಾದ್ ಹರಿತ್ಸ ಮತ್ತು ರಮ್ಯಾ ಇದೀಗ ಕುಟುಂಬಸ್ಥರ ಒಪ್ಪಿಗೆ ಪಡೆದು ಮದುವೆಯಾಗುತ್ತಿದ್ದಾರೆ.
ಬರ್ತಡೇ ಸರ್ಪ್ರೈಸ್ ಕಂಡು ‘ನಾಗಿಣಿ 2’ ಧಾರಾವಾಹಿ ನಟಿ ನಮ್ರತಾ ಗೌಡ ಕಣ್ಣಲ್ಲಿ ಆನಂದಬಾಷ್ಫ!
ನಟ ನಿನಾದ್ ಹರಿತ್ಸ ಮತ್ತು ರಮ್ಯಾ ಭೇಟಿ ಆಗಿದ್ದು ಹೇಗೆ?
ನಿನಾದ್ ಹರಿತ್ಸ ಮತ್ತು ರಮ್ಯಾ ಕಾಮನ್ ಫ್ರೆಂಡ್ ಮೂಲಕ ಪರಿಚಯಗೊಂಡರು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿದೆ. ನಿನಾದ್ ಹರಿತ್ಸ ಮತ್ತು ರಮ್ಯಾ ಪ್ರೀತಿಗೆ ಕುಟುಂಬಸ್ಥರು ಸಮ್ಮತಿ ನೀಡಿದ್ದಾರೆ.
ದಾವಣಗೆರೆಯ ಕಲ್ಯಾಣ ಮಂಟಪದಲ್ಲಿ ಶಿವಾನಿ-ತ್ರಿಶೂಲ್‌ಗೆ ಅದ್ದೂರಿ ಮದುವೆ ಆರತಕ್ಷತೆ!
ಮದುವೆ ಯಾವಾಗ?
ಫೆಬ್ರವರಿ 7 ರಂದು ನಿನಾದ್ ಹರಿತ್ಸ ಮತ್ತು ರಮ್ಯಾ ಅವರ ನಿಶ್ಚಿತಾರ್ಥ ಸಮಾರಂಭ ಶಾಸ್ತ್ರೋಕ್ತವಾಗಿ ನಡೆದಿದೆ. ಇದೇ ವರ್ಷ ದಾಂಪತ್ಯ ಜೀವನಕ್ಕೆ ನಿನಾದ್ ಹರಿತ್ಸ ಮತ್ತು ರಮ್ಯಾ ಕಾಲಿಡಲಿದ್ದಾರೆ.
ಹಬ್ಬಿದ ಸುಳ್ಳು ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ ‘ನಾಗಿಣಿ 2’ ಧಾರಾವಾಹಿಯ ನಟ ನಿನಾದ್, ನಮ್ರತಾ ಗೌಡ!
ಸೋಷಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ್ದ ನಿನಾದ್ ಹರಿತ್ಸ
‘’ಹಿರಿಯರು ಮತ್ತು ಪೋಷಕರ ಆಶೀರ್ವಾದದಿಂದ ನಾನು ಮತ್ತು ರಮ್ಯಾ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ. ನಮ್ಮ ಆಯ್ಕೆಯನ್ನ ಗೌರವಿಸಿ ನಮಗೆ ಆಶೀರ್ವಾದ ಮಾಡಿದ ತಂದೆ- ತಾಯಿಗೆ ಹೃತ್ಪೂರ್ವಕ ಧನ್ಯವಾದಗಳು. ನಮಗೆ ಪ್ರೀತಿ ತೋರಿ, ಆಶೀರ್ವಾದ ಮಾಡಿ’’ ಎಂದು ನಟ ನಿನಾದ್ ಹರಿತ್ಸ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ನಿನಾದ್ ಹರಿತ್ಸ ಮತ್ತು ರಮ್ಯಾಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
Read more
[wpas_products keywords=”deal of the day party wear dress for women stylish indian”]