
ಹೌದು, ಇನ್‌ಸ್ಟಾಗ್ರಾಮ್ ತನ್ನ ಯುವರ್ ಆಕ್ಟಿವಿಟಿ ಸೆಟ್ಟಿಂಗ್ಸ್‌ನಲ್ಲಿ ಹೊಸ ಫೀಚರ್ಸ್ ಪರಿಚಯಿಸಿದೆ. ಈ ಹೊಸ ಫೀಚರ್ಸ್‌ನಿಂದ ಬಳಕೆದಾರರು ತಮ್ಮ ಎಲ್ಲಾ ಆಕ್ಟಿವಿಟಿಗಳನ್ನು ಒಂದೇ ಸ್ಥಳದಲ್ಲಿ ನೋಡುವುದಕ್ಕೆ ಮತ್ತು ಮ್ಯಾನೇಜ್ ಮಾಡಲು ಅನುಮತಿಸುತ್ತದೆ. ಜೊತೆಗೆ ಎಲ್ಲಾ ಆಕ್ಟಿವಿಟಿಯನ್ನು ಬಲ್ಕ್ ಆಗಿ ಡಿಲೀಟ್ ಅಥವಾ ಆರ್ಕೈವ್ ಮಾಡುವುದಕ್ಕೆ ಅವಕಾಶವನ್ನು ನೀಡಲಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್ ಯುವರ್ ಆಕ್ಟಿವಿಟಿ ಸೆಟ್ಟಿಂಗ್ಸ್‌ನಲ್ಲಿ ಪರಿಚಯಿಸಿರುವ ಹೊಸ ಫೀಚರ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್ ಯುವರ್ ಆಕ್ಟಿವಿಟಿಯಲ್ಲಿ ಬಲ್ಕ್ ಆಗಿ ಡಿಲೀಟ್ ಮಾಡುವುದಕ್ಕೆ ಅವಕಾಶ ನೀಡಲು ಮುಂದಾಗಿದೆ. ಅಲ್ಲದೆ ಒಂದೆ ಸ್ಥಳದಲ್ಲಿ ಎಲ್ಲಾ ವಿಷಯವನ್ನು ನೋಡುವುದಕ್ಕೆ ಮತ್ತು ಮ್ಯಾನೇಜ್ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದು ವಿಷಯ ಮತ್ತು ಸಂವಾದದ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿರುವ ‘ಯುವರ್ ಆಕ್ಟಿವಿಟಿ’ ನೀವು ಎಷ್ಟು ಸಮಯವನ್ನು ಇನ್ಸ್ಟಾಗ್ರಾಮ್‌ನಲ್ಲಿ ಕಳೆದಿದ್ದೀರಾ ಅನ್ನೊದನ್ನ ಸೆಟ್ ಮಾಡಲು ಅವಕಾಶ ನೀಡಲಿದೆ. ಜೊತೆಗೆ ನೋಟಿಫಿಕೇಶನ್‌ಗಳನ್ನು ಸೆಟ್ ಮಾಡಲು ಮತ್ತು ಅವರ ಸಂವಾದದ ಹಿಸ್ಟರಿಯನ್ನು ನೋಡಲು ಅನುಮತಿಸುತ್ತದೆ. ಇದೀಗ ಪರಿಚಯಿಸಲಿರುವ ಹೊಸ ಅಪ್ಡೇಟ್‌ಗಳು ಈ ನಿರ್ದಿಷ್ಟ ಸೆಟ್ಟಿಂಗ್‌ಗಳಿಗೆ ಹೆಚ್ಚಿನ ಫೀಚರ್ಸ್ ಮತ್ತು ಕಂಟ್ರೋಲ್ ಅನ್ನು ತರಲಿದೆ.

ಹೊಸ ಫೀಚರ್ಸ್ ಬಳಕೆದಾರರು ತಮ್ಮ ವಿಷಯ ಮತ್ತು ಸಂವಹನಗಳನ್ನು ವಿಂಗಡಿಸಲು ಮತ್ತು ಫಿಲ್ಟರ್ ಮಾಡಲು ಸಾಧ್ಯವಾಗುತ್ತದೆ. ಇದರಿಂದ ದಿನಾಂಕ ಶ್ರೇಣಿಗಳ ಆಧಾರದ ಮೇಲೆ ಹಿಂದಿನ ಕಾಮೆಂಟ್‌ಗಳು, ಲೈಕ್ಸ್, ಸ್ಟೋರೀಸ್ ಇತ್ಯಾದಿಗಳನ್ನು ಹುಡುಕಬಹುದು. ಅಂದರೆ ನೀವು ಮಾಡಿದ ಎಲ್ಲಾ ಕಾಮೆಂಟ್‌ಗಳು ಮತ್ತು ಸ್ಟೋರಿ ಪ್ರತ್ಯುತ್ತರಗಳನ್ನು ಸಹ ನೀವು ಕಾಣಬಹುದು. ಅಲ್ಲದೆ ಈ ಎಲ್ಲಾ ಕಾಮೆಂಟ್ ಮತ್ತು ಲೈಕ್ಸ್‌ಗಳನ್ನು ಡಿಲೀಟ್ ಮಾಡಲು ಬಯಸಿದರೆ ಇದು ಉಪಯುಕ್ತವಾಗಲಿದೆ.

ಇದಲ್ಲದೆ ಈ ಹಿಂದೆ ನೀವು ಇನ್‌ಸ್ಟಾಗ್ರಾಮ್‌ನಲ್ಲಿ ಡಿಲೀಟ್ ಮಾಡಲಾದ ಅಥವಾ ಆರ್ಕೈವ್ ಮಾಡಿದ ವಿಷಯವನ್ನು ಸರ್ಚ್ ಮಾಡಲು ಕೂಡ ಈ ಹೊಸ ಫೀಚರ್ಸ್ ಉಪಯುಕ್ತವಾಗಿದೆ. ಬಳಕೆದಾರರು ಪ್ಲಾಟ್‌ಫಾರ್ಮ್‌ನಲ್ಲಿ ಸರ್ಚ್ ಹಿಸ್ಟರಿಯನ್ನು ಕೂಡ ಪರಿಶೀಲಿಸಬಹುದು. ಅಲ್ಲದೆ ನೀವು ಭೇಟಿ ನೀಡಿದ ಲಿಂಕ್‌ಗಳು ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ನೀವು ಕಳೆದ ಸಮಯವನ್ನು ಸಹ ನೋಡಬಹುದು. ಇದಕ್ಕಾಗಿ ಬಳಕೆದಾರರು ತಮ್ಮ ಪ್ರೊಫೈಲ್ ವಿಭಾಗದ ಮೇಲಿನ ಬಲ ಮೂಲೆಯಲ್ಲಿ ಟ್ಯಾಪ್ ಮಾಡಿದ ನಂತರ ‘ಯುವರ್ ಆಕ್ಟಿವಿಟಿ’ ಫೀಚರ್ಸ್ ಅನ್ನು ಪ್ರವೇಶಿಸಬಹುದು. ಸದ್ಯ ಈ ಹೊಸ ಫೀಚರ್ಸ್ ಅಪ್‌ಡೇಟ್ ಈಗಷ್ಟೇ ಹೊರಬರಲು ಪ್ರಾರಂಭಿಸಿರುವುದರಿಂದ, ನಿಮ್ಮ ಅಪ್ಲಿಕೇಶನ್ ಅನ್ನು ಅಪ್ಡೇಟ್ ಮಾಡಬೇಕಾಗುತ್ತದೆ.

ಇನ್ನು ಇತ್ತೀಚಿಗೆ ಇನ್‌ಸ್ಟಾಗ್ರಾಮ್ ತನ್ನ ಬಹುನಿರೀಕ್ಷಿತ ಟೆಕ್ ಎ ಬ್ರೇಕ್ ಫೀಚರ್ಸ್ ಅನ್ನು ಪರಿಚಯಿಸಿದೆ. ಇದರಿಂದ ನೀವು ಸೊಶೀಯಲ್ ಮೀಡಿಯಾದಲ್ಲಿ ಮಧ್ಯಂತರ ವಿರಾಮವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಅಂದರೆ ಬಳಕೆದಾರರು ಹೆಚ್ಚು ಸಮಯ ಕಳೆಯುವ ಪ್ರತಿ ಬಾರಿ ಟೇಕ್ ಎ ಬ್ರೇಕ್ ಫೀಚರ್ಸ್ ಪಾಪ್ ಅಪ್ ಆಗುತ್ತದೆ. ನಿಮಗೆ ವಿರಾಮ ಬೇಕು ಎನಿಸಿದಾಗ ವಿರಾಮ ತೆಗೆದುಕೊಳ್ಳಬಹುದು. ಅಲ್ಲದೆ ಹೆಚ್ಚಿನ ಸಮಯ ಸೊಶೀಯಲ್ ಮೀಡಿಯಾದಲ್ಲಿ ಕಾಲ ಕಳೆದಂತೆ ನಿಮಗೆ ವಿರಾಮ ತೆಗೆದುಕೊಳ್ಳಲು ಆಲರ್ಟ್ ಅನ್ನು ಕೂಡ ನೀಡಲಿದೆ.
Read more…
[wpas_products keywords=”smartphones under 15000 6gb ram”]