Karnataka news paper

Jai Bhim: ಆಸ್ಕರ್‌ ರೇಸ್‌ನಿಂದ ‘ಜೈ ಭೀಮ್’ ಔಟ್! ನಟ ಸೂರ್ಯ ಫ್ಯಾನ್ಸ್‌ಗೆ ನಿರಾಸೆ


ಈ ಬಾರಿ ಆಸ್ಕರ್‌ ಪ್ರಶಸ್ತಿ ರೇಸ್‌ನಲ್ಲಿ ತಮಿಳಿನ ‘ಜೈ ಭೀಮ್‌’ (Jai Bhim) ಸಿನಿಮಾ ಕೂಡ ಇತ್ತು. ಕೊನೇ ಸುತ್ತಿನಲ್ಲಿ ನಾಮನಿರ್ದೇಶನ ಪಟ್ಟಿಯಿಂದ ‘ಜೈ ಭೀಮ್‌’ ಹೊರಗುಳಿದಿದ್ದು, ಈ ಬಾರಿ ಜೈ ಭೀಮ್ ಸಿನಿಮಾಕ್ಕೆ ಆಸ್ಕರ್ ಪ್ರಶಸ್ತಿ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ತಮಿಳು ನಟ ಸೂರ್ಯ (Suriya) ನಿರ್ಮಾಣದ ಈ ಸಿನಿಮಾವನ್ನು ಟಿ.ಜೆ. ಜ್ಞಾನವೇಲ್ ನಿರ್ದೇಶನ ಮಾಡಿದ್ದರು. ಆಸ್ಕರ್ ಯೂಟ್ಯೂಬ್‌ ಚಾನೆಲ್‌ನಲ್ಲೂ ಈ ಸಿನಿಮಾದ ಒಂದಷ್ಟು ದೃಶ್ಯಗಳು ಪ್ರಸಾರವಾಗಿದ್ದು, ಭಾರತೀಯರಿಗೆ ಹೆಮ್ಮೆ ತಂದಿತ್ತು. ಆದರೆ, ಅಂತಿಮ ಹಂತಕ್ಕೆ ಚಿತ್ರ ಹೋಗದೇ ಇರುವುದು ನಿರಾಸೆ ಮೂಡಿಸಿದೆ.

ಈ ಬಾರಿ ಆಸ್ಕರ್ ಪ್ರಶಸ್ತಿ ರೇಸ್‌ಗೆ ವಿಶ್ವಾದ್ಯಂತ 276 ಸಿನಿಮಾಗಳು ಸ್ಪರ್ಧೆಯಲ್ಲಿದ್ದವು. ಅದರಲ್ಲಿ ‘ಅತ್ಯುತ್ತಮ ಸಿನಿಮಾ’ ವಿಭಾಗದಲ್ಲಿ ತಮಿಳಿನ ‘ಜೈ ಭೀಮ್’ ಸಿನಿಮಾ ಇತ್ತು. ಬಹುತೇಕರು ಈ ಬಾರಿ ಪ್ರಶಸ್ತಿ ಸಿಕ್ಕೇ ಸಿಗುತ್ತದೆ ಎಂದು ಬಲವಾಗಿ ನಂಬಿದ್ದರು. ಈ ವಿಚಾರದಿಂದಾಗಿ ಸೂರ್ಯ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದರು. ಹಾಗೆಯೇ ಮಲಯಾಳಂನ ‘ಮರಕ್ಕರ್’ ಕೂಡ ಆಸ್ಕರ್ ರೇಸ್‌ನಲ್ಲಿತ್ತು. ಆದರೆ, ಈಗ ‘ಜೈ ಭೀಮ್‌’, ‘ಮರಕ್ಕರ್’ ಸ್ಪರ್ಧೆಯಿಂದ ಹೊರಗೆ ಉಳಿದಿವೆ.

ಈ ಮಧ್ಯೆ ‘ಜೈ ಭೀಮ್‌’ ಆಸ್ಕರ್ ರೇಸ್‌ನಿಂದ ಹೊರಗುಳಿದಿದ್ದಕ್ಕೆ ಬೇಸರಗೊಂಡಿರುವ ಸೂರ್ಯ ಅಭಿಮಾನಿಗಳು, ಇನ್ನೊಮ್ಮೆ ಈ ಸಿನಿಮಾವನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ. ಒಂದಷ್ಟು ಅಭಿಮಾನಿಗಳು ಚಿತ್ರದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಆಸ್ಕರ್‌ನ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಜಾಗ ಪಡೆದಿರುವ ಏಕೈಕ ‘ಜೈ ಭೀಮ್’ ಎಂದು ಖುಷಿಯಾಗಿದ್ದಾರೆ. ಜೊತೆಗೆ ವಿಶ್ವಾದ್ಯಂತ ಅನೇಕ ಸೆಲೆಬ್ರಿಟಿಗಳು ಈ ಸಿನಿಮಾವನ್ನು ಹೊಗಳಿದ್ದು, ಸೂರ್ಯ ಅವರಿಗೆ ಹೆಚ್ಚು ಆತ್ಮಸ್ಥೈರ್ಯ ತುಂಬಿದಂತೆ ಆಗಿದೆ. ಮುಂದಿನ ಸಿನಿಮಾದಲ್ಲಿ ಅವರು ಇನ್ನೂ ಸ್ಟ್ರಾಂಗ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ.

ಸೂರ್ಯ ನಟನೆಯ ‘ಜೈ ಭೀಮ್’ ಮೇಲೆ ಆರೋಪ; 5 ಕೋಟಿ ರೂ. ಪರಿಹಾರ ನೀಡುವಂತೆ ಲೀಗಲ್ ನೋಟಿಸ್

‘ಜೈ ಭೀಮ್’ ಕಥೆ ಏನು?
1995ರ ನೈಜ ಘಟನೆ ಆದರಿಸಿದ ಕಥೆಯಿದು. ಇಲಿ, ಹಾವು ಹಿಡಿದು, ಇಟ್ಟಂಗಿ ಬಡೆದು ಬದುಕುವ ಇರುಳರು ಎಂಬ ಮುಗ್ದ ಬುಡಕಟ್ಟು ಜನಾಂಗ ಪೋಲಿಸರ ಕಪಿಮುಷ್ಠಿಗೆ ಸಿಲುಕಿ ನರಳಿದ ಇತಿಹಾಸ ಈ ಸಿನಿಮಾದಲ್ಲಿದೆ. ಕಮರ್ಷಿಯಲ್ ಸಿನಿಮಾದ ಅಂಶಗಳನ್ನು ಪಕ್ಕಕ್ಕಿಟ್ಟು, ಹೀರೋಯಿಸಂ ಬಿಟ್ಟು ಸ್ಟಾರ್ ನಟ ಸೂರ್ಯ ಕೇವಲ ಸಹಜವಾದ ಅಭಿನಯದ ಮೂಲಕ ಹೀರೋಯಿಸಂ ತೋರಿಸಿರೋದು ಅನೇಕರ ಮೆಚ್ಚುಗೆಗೆ ಕಾರಣವಾಗಿದೆ. ಲಿಜೋಮೋಲ್ ಜೋಸ್, ಕೆ.ಮಣಿಕಂದನ್, ಪ್ರಕಾಶ್ ರಾಜ್, ರಜಿಶಾ ವಿಜಯನ್, ರಾವ್ ರಮೇಶ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಗಣರಾಜ್ಯೋತ್ಸವ ದಿನ ಬಿ.ಸಿ ರೋಡ್‌ನಲ್ಲಿ ಬೃಹತ್ ಪರದೆಯಲ್ಲಿ ‘ಜೈಭೀಮ್‌’ ಸಿನಿಮಾ ಉಚಿತ ಪ್ರದರ್ಶನ



Read more

[wpas_products keywords=”deal of the day party wear dress for women stylish indian”]