Karnataka news paper

ಉತ್ತರ ಪ್ರದೇಶದಲ್ಲಿ ಮತದಾನ ಆರಂಭ: ಎಚ್ಚರ! ಕಾಶ್ಮೀರ, ಬಂಗಾಳ ಆಗಲು ಬಿಡಬೇಡಿ ಎಂದ ಯೋಗಿ


ಲಖನೌ: ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆಯ ಸಮರಕ್ಕೆ ಗುರುವಾರ ಚಾಲನೆ ದೊರಕಿದೆ. ಏಳು ಹಂತಗಳಲ್ಲಿ ನಡೆಯಲಿರುವ ಸುದೀರ್ಘ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರ ಬೆಳಿಗ್ಗೆ ಆರಂಭವಾಗಿದ್ದು, ರಾಜ್ಯದ ಪಶ್ಚಿಮ ಭಾಗದ 58 ನಿರ್ಣಾಯಕ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯನ್ನು 2024ರ ಲೋಕಸಭೆ ಚುನಾವಣೆಯ ‘ಸೆಮಿ ಫೈನಲ್’ ಎಂದೇ ಕರೆಯಲಾಗುತ್ತಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಮಗ ಹಾಗೂ ನೋಯ್ಡಾದ ಹಾಲಿ ಶಾಸಕ ಪಂಕಜ್ ಸಿಂಗ್, ಆಗ್ರಾ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಉತ್ತರಾಖಂಡದ ಮಾಜಿ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಲ್ಲಿ ಸೇರಿದ್ದಾರೆ.
Congress Manifesto: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನಿಂದ ಆಶ್ವಾಸನೆಗಳ ಮಹಾಪೂರ

“ಚುನಾವಣೆ ಆರಂಭಕ್ಕೂ ಮುನ್ನ ಕೆಲವು ಮತಗಟ್ಟೆಗಳಲ್ಲಿ ಇವಿಎಂಗಳಲ್ಲಿ ದೋಷ ಇರುವ ಬಗ್ಗೆ ಅಧಿಕಾರಿಗಳಿಂದ ದೂರು ಬಂದಿವೆ. ಆ ಯಂತ್ರಗಳನ್ನು ಬದಲಿಸಲಾಗಿದೆ. ಈವರೆಗೂ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಎಲ್ಲಿಯೂ ಕಾನೂನು ಮತ್ತು ಸುವ್ಯವಸ್ಥೆ ತೊಂದರೆ ಉಂಟಾಗಿಲ್ಲ” ಎಂದು ಶಮ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಜಸ್ಜಿತ್ ಕೌರ್ ಹೇಳಿದ್ದಾರೆ.

2017ರ ಚುನಾವಣೆಯಲ್ಲಿ ಈ ವಲಯದ 58 ಸೀಟುಗಳ ಪೈಕಿ ಶೇ 91ರಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಆದರೆ, ಈ ಬಾರಿ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು ಇದೇ ಭಾಗದಲ್ಲಿ. ಹೀಗಾಗಿ ಬಿಜೆಪಿಗೆ ಈ ಚುನಾವಣೆಯಲ್ಲಿ ಭಾರಿ ಹಿನ್ನಡೆ ಉಂಟಾಗುವ ಭೀತಿ ಎದುರಾಗಿದೆ.

ಯೋಗಿ ಆದಿತ್ಯನಾಥ್ ಎಚ್ಚರಿಕೆ
ಮತದಾರರು ತಪ್ಪು ಮಾಡಿದರೆ ಉತ್ತರ ಪ್ರದೇಶ ಮತ್ತೊಂದು ಕಾಶ್ಮೀರ ಅಥವಾ ಬಂಗಾಳವಾಗಿ ಬಿಡಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೊದಲ ಹಂತದ ಮತದಾನ ಆರಂಭಕ್ಕೂ ಮುನ್ನ ರಾಜ್ಯದ ಮತದಾರರಿಗೆ ಎಚ್ಚರಿಕೆ ನೀಡಿದರೆ. ಬಿಜೆಪಿಗೆ ಮತ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ಉತ್ತರ ಪ್ರದೇಶ ಬಿಜೆಪಿ ಘಟಕ ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಬಿಜೆಪಿ ಮತ ಹಾಕಿದರೆ ‘ಭಯಮುಕ್ತ ಜೀವನದ ಖಾತರಿ’ ಸಿಗಲಿದೆ ಎಂದು ಯೋಗಿ ಹೇಳಿದ್ದಾರೆ.

“ನನ್ನ ಹೃದಯದಲ್ಲಿ ಇರುವ ಕೆಲವು ವಿಚಾರಗಳನ್ನು ನಿಮಗೆ ನಾನು ಹೇಳಬೇಕಿದೆ. ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಅದ್ಭುತ ಕೆಲಸಗಳು ನಡೆದಿವೆ. ಜಾಗ್ರತೆ! ನೀವು ತಪ್ಪಿದರೆ, ಈ ಐದು ವರ್ಷಗಳ ಶ್ರಮ ಹಾಳಾಗಲಿದೆ. ಉತ್ತರ ಪ್ರದೇಶವು ಕಾಶ್ಮೀರ, ಕೇರಳ ಮತ್ತು ಬಂಗಾಳ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ” ಎಂದು ಯೋಗಿ ವಿಡಿಯೋದಲ್ಲಿ ಎಚ್ಚರಿಕೆ ನೀಡಿದ್ದಾರೆ.
BJP’s UP Manifesto: ಉತ್ತರ ಪ್ರದೇಶದಲ್ಲಿ ‘ಉಚಿತ’ ಭರವಸೆಗಳ ಮಳೆ ಸುರಿಸಿದ ಬಿಜೆಪಿ!

“ನಿಮ್ಮ ಮತವು ನನ್ನ ಐದು ವರ್ಷಗಳ ಪ್ರಯತ್ನಕ್ಕೆ ಆಶೀರ್ವಾದವಾಗಿದೆ. ನಿಮ್ಮ ಮತವು ನಿಮಗೆ ಭಯಮುಕ್ತ ಜೀವನಕ್ಕೆ ಖಾತರಿ ಕೂಡ ಆಗಿರಲಿದೆ” ಎಂದು ಹೇಳಿದ್ದಾರೆ.

“ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ. ಕಳೆದ ಐದು ವರ್ಷಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವು ಎಲ್ಲವನ್ನೂ ಬದ್ಧತೆ ಮತ್ತು ಸಮರ್ಪಣೆಯೊಂದಿಗೆ ಮಾಡಿದೆ. ನೀವು ಪ್ರತಿಯೊಂದನ್ನೂ ನೋಡಿದ್ದೀರಿ ಮತ್ತು ಎಲ್ಲವನ್ನೂ ವಿವರವಾಗಿ ಆಲಿಸಿದ್ದೀರಿ” ಎಂದು ತಿಳಿಸಿದ್ದಾರೆ.



Read more

[wpas_products keywords=”deal of the day sale today offer all”]