Karnataka news paper

‘ರಮ್ಯ ರಾಮಸ್ವಾಮಿ’ ಸಿನಿಮಾದಲ್ಲಿ ರವಿಚಂದ್ರನ್ ಪಾತ್ರ ಹೇಗಿರಲಿದೆ? ಚಿ. ಗುರುದತ್ ನೀಡಿದ ಮಾಹಿತಿ ಇಲ್ಲಿದೆ


‘ಕ್ರೇಜಿ ಸ್ಟಾರ್‌’ ರವಿಚಂದ್ರನ್‌ ‘ಕನ್ನಡಿಗ’ ಸಿನಿಮಾದ ನಂತರ ವಿಭಿನ್ನವಾದ ಕಥೆಗಳನ್ನು ಒಪ್ಪಿಕೊಳ್ಳುತ್ತಿದ್ದು, ಆ ಸಾಲಿಗೆ ಈಗ ಮತ್ತೊಂದು ಸಿನಿಮಾ ಸೇರ್ಪಡೆಯಾಗಿದೆ. ಈ ಚಿತ್ರ ತನ್ನ ಟೈಟಲ್‌ನಿಂದಲೇ ಹೆಚ್ಚಿನ ಗಮನ ಸೆಳೆಯುತ್ತಿದ್ದು, ‘ರಮ್ಯ ರಾಮಸ್ವಾಮಿ’ ಎಂಬ ಹೆಸರಿಡಲಾಗಿದೆ. ಜತೆಗೆ ನಟ ಚಿ. ಗುರುದತ್‌ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ನಟ, ನಿರ್ದೇಶಕ ಚಿ. ಗುರುದತ್‌ ಈಚಿನ ದಿನಗಳಲ್ಲಿ ಬಹಳ ಸಕ್ರಿಯರಾಗಿದ್ದು, ಮೊನ್ನೆಯಷ್ಟೇ ಶಿವರಾಜ್‌ಕುಮಾರ್‌ ನಟನೆಯ ಸಿನಿಮಾವನ್ನು ಅವರು ನಿರ್ದೇಶನ ಮಾಡುವುದಾಗಿ ಅನೌನ್ಸ್‌ ಆಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಗುರುದತ್‌ ಅವರು ಸೀರಿಯಲ್‌ನಲ್ಲಿ ನಟಿಸಲು ಆರಂಭಿಸಿದ್ದರು. ಈಗ ರವಿಚಂದ್ರನ್‌ ಅವರ ಸಿನಿಮಾವನ್ನು ನಿರ್ದೇಶನ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
(ಹರೀಶ್‌ ಬಸವರಾಜ್‌)

​ರವಿಚಂದ್ರನ್‌ & ನಾನು 40 ವರ್ಷಗಳ ಸ್ನೇಹಿತರು

-40-

‘ಕೆಲ ವರ್ಷಗಳಿಂದ ಸುಮ್ಮನೆ ಕುಳಿತುಕೊಂಡಿದ್ದೆ ಎನಿಸಿತು. ಈಗ ಒಂದರ ಹಿಂದೆ ಒಂದು ಕೆಲಸವನ್ನು ಒಪ್ಪಿಕೊಂಡು ಮಾಡುತ್ತಿದ್ದೇನೆ. ರವಿಚಂದ್ರನ್‌ ಮತ್ತು ನಾನು 40 ವರ್ಷಗಳ ಸ್ನೇಹಿತರು. ಅವರು ದೊಡ್ಡ ಲೆಜೆಂಡ್‌. ಅವರ ಜತೆ ಕೆಲಸ ಮಾಡುವುದೇ ನನ್ನ ಪುಣ್ಯ. ನನ್ನ ಮತ್ತೊಬ್ಬ ಸ್ನೇಹಿತ ಜನಾರ್ದನ್‌ ಮಹರ್ಷಿ ಈ ಸಿನಿಮಾಗೆ ಕಥೆ ಬರೆದಿದ್ದಾರೆ. ಭಾವನಾತ್ಮಕ ಅಂಶಗಳುಳ್ಳ ಸಿನಿಮಾವಿದು. ಎಂದಿನಂತೆ ನನ್ನ ಸ್ಟೈಲ್‌ನ ಹಾಸ್ಯ ಸಿನಿಮಾದಲ್ಲಿರುತ್ತದೆ’ ಎಂದು ಹೇಳಿದರು ಚಿ. ಗುರುದತ್‌.

‘ಲವ್ ಮಾಕ್‌ಟೇಲ್’ ಸಿನಿಮಾ ಯಾಕೆ ಹಿಟ್ ಆಯ್ತು? ರವಿಚಂದ್ರನ್ ನೀಡಿದ ವ್ಯಾಖ್ಯಾನ ಇಲ್ಲಿದೆ!

​ನಾಯಕಿ ಆಯ್ಕೆ ಇನ್ನೂ ಆಗಿಲ್ಲ

‘ರಮ್ಯ ಎನ್ನುವುದು ನಾಯಕಿಯ ಹೆಸರು. ರಾಮಸ್ವಾಮಿ ನಾಯಕನ ಹೆಸರು. ರವಿಚಂದ್ರನ್‌ ರಾಮಸ್ವಾಮಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಡೀ ಸಿನಿಮಾ ಕಥೆ ಆ ಎರಡು ಪಾತ್ರಗಳ ಸುತ್ತವೇ ಸುತ್ತುವುದರಿಂದ ಆ ಟೈಟಲ್‌ ಇಟ್ಟಿದ್ದೇವೆ. ರಮ್ಯ ಪಾತ್ರಕ್ಕೆ ಇನ್ನೂ ಯಾರೂ ಆಯ್ಕೆಯಾಗಿಲ್ಲ. ಉಳಿದ ತಾರಾಗಣದ ಆಯ್ಕೆಯೂ ಸದ್ಯದಲ್ಲೆ ಆಗಲಿದೆ. ರವಿ ಬಸ್ರೂರು ಸಂಗೀತ ಸಂಯೋಜನೆ ಇದೆ. ನನ್ನ ಇನ್ನೊಬ್ಬ ಆತ್ಮೀಯ ಸ್ನೇಹಿತ ಜಿ.ಎಸ್‌.ವಿ. ಸೀತಾರಾಮ್‌ ಸಿನಿಮಾಟೋಗ್ರಫಿ ಮಾಡುತ್ತಿದ್ದಾರೆ. ಸೀತಾರಾಮ್‌ ಕೂಡ ನನಗೆ ಹಲವು ವರ್ಷಗಳ ಗೆಳೆಯ. ಎನ್‌. ಎಸ್‌. ರಾಜ್‌ಕುಮಾರ್‌ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು ಗುರುದತ್‌.

Ramya Ramaswamy: ಹೊಸ ಸಿನಿಮಾ ಒಪ್ಪಿಕೊಂಡ ಕ್ರೇಜಿಸ್ಟಾರ್: ರವಿಚಂದ್ರನ್‌ಗೆ ಚಿ.ಗುರುದತ್ ಆಕ್ಷನ್ ಕಟ್!

​ಸ್ಮಾರ್ಟ್‌ ರವಿಚಂದ್ರನ್‌

‘ರಾಮಸ್ವಾಮಿ ಪಾತ್ರದಲ್ಲಿ ರವಿಚಂದ್ರನ್‌ ಬಹಳ ಸ್ಮಾರ್ಟ್‌ ಆಗಿ, ಸುಂದರವಾಗಿ ಕಾಣುತ್ತಾರೆ. ಕಥೆ ಡಿಸ್ಕಸ್‌ ಮಾಡುವಾಗಲೂ ನಾನು ರವಿಗೆ ಅದನ್ನೇ ಹೇಳಿದ್ದೇನೆ. ಪ್ರೇಮಲೋಕದಲ್ಲಿ ಹೇಗೆ ಕಂಡಿದ್ರೋ ಹಾಗಿರಬೇಕು ಎಂದು ಹೇಳಿದ್ದೇನೆ. ಜನ, ರವಿಚಂದ್ರನ್‌ ಅಭಿಮಾನಿಗಳು ಎಂಜಾಯ್‌ ಮಾಡುವಂತಹ ಸಿನಿಮಾ ಇದಾಗಲಿದೆ’ ಎನ್ನುವುದು ನಿರ್ದೇಶಕ ಗುರುದತ್‌ ಅವರ ಮಾತು. ‘ರಮ್ಯ ರಾಮಸ್ವಾಮಿ’ ಟೈಟಲ್‌ ಸೂಚಿಸಿದವರು ಚಿ. ಗುರುದತ್‌ ಅವರ ಸ್ನೇಹಿತ ಸುನೀಲ್‌ ಎಂಬುವರು. ಈ ಸಿನಿಮಾ ಬೇರೆಯದೇ ರೀತಿಯಲ್ಲಿ ನಿರ್ಮಾಣವಾಗಲಿದೆ ಎಂಬುದು ನಿರ್ಮಾಪಕ ರಾಜ್‌ಕುಮಾರ್‌ ಮಾತು.

Breaking News: ಕ್ರೇಜಿ ಸ್ಟಾರ್ ರವಿಚಂದ್ರನ್ ಅಪಹರಣ!

​ಏಪ್ರಿಲ್‌ ತಿಂಗಳಲ್ಲಿ ಚಿತ್ರೀಕರಣ

ನಾಯಕಿ ರಮ್ಯ ಪಾತ್ರದಲ್ಲಿ ಸ್ಯಾಂಡಲ್‌ವುಡ್‌ನ ಪ್ರಮುಖ ನಟಿಯೊಬ್ಬರು ನಟಿಸಲಿದ್ದು, ಸದ್ಯದಲ್ಲೇ ಅವರಾರ‍ಯರು ಎಂಬುದನ್ನು ಚಿತ್ರತಂಡ ರಿವೀಲ್‌ ಮಾಡಲಿದೆ. ಏಪ್ರಿಲ್‌ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಲು ನಿರ್ಮಾಪಕರು ಯೋಚಿಸಿದ್ದಾರೆ. ಸ್ಕ್ರಿಪ್ಟ್‌ ಕೊನೆಯ ಹಂತದಲ್ಲಿದ್ದು, ಅದು ಮುಗಿದ ಕೂಡಲೇ ಶೂಟಿಂಗ್‌ ಆರಂಭಿಸುತ್ತೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಕೋಟ್‌:

ರಮ್ಯ ರಾಮಸ್ವಾಮಿ ಹಳೇ ಸ್ನೇಹಿತರ ಸಂತೋಷ ಕೂಟ ಎನ್ನಬಹದು. ನಾನು, ರವಿ, ಜಿ. ಎಸ್‌. ವಿ. ಸೀತಾರಾಮ್‌, ಜನಾರ್ದನ ಮಹರ್ಷಿ, ಎನ್‌. ಎಸ್‌. ರಾಜ್‌ಕುಮಾರ್‌ ಹೀಗೆ ಹಲವು ಸ್ನೇಹಿತರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಖುಷಿಯಿಂದ ಚಿತ್ರೀಕರಣದ ದಿನಗಳನ್ನು ಎದುರು ನೋಡುತ್ತಿದ್ದೇನೆ.

ಚಿ. ಗುರುದತ್‌, ನಿರ್ದೇಶಕ

ನನ್ನ ಸಮಾರಂಭಕ್ಕೆ ಬರಲು ಕಿಚ್ಚ ಸುದೀಪ್‌ಗೆ ಕರೆಯಬೇಕು ಅಂತಿಲ್ಲ, ಆರ್ಡರ್ ಮಾಡಬಹುದು: ವಿ ರವಿಚಂದ್ರನ್



Read more

[wpas_products keywords=”deal of the day party wear dress for women stylish indian”]