Karnataka news paper

ಗುರುವಾರದಿಂದ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿ ಗಣತಿ ಆರಂಭ: 20 ವ್ಯಾಘ್ರಗಳು ಇರುವ ಸಾಧ್ಯತೆ..!


ಫಾಲಲೋಚನ ಆರಾಧ್ಯ
ಚಾಮರಾಜನಗರ:
ರಾಜ್ಯದ ಮತ್ತೊಂದು ಸಂಭವನೀಯ ಹುಲಿ ಧಾಮ ಎಂದೇ ಹೇಳಲಾಗುತ್ತಿರುವ ಮಲೆ ಮಹದೇಶ್ವರ ಬೆಟ್ಟ ವನ್ಯ ಧಾಮದಲ್ಲಿ, ಇದೇ ಫೆಬ್ರುವರಿ 10 ಗುರುವಾರದಿಂದ ಹುಲಿ ಗಣತಿ ಆರಂಭವಾಗಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ.

ಈಗಾಗಲೇ ಕ್ಯಾಮೆರಾ ಟ್ರ್ಯಾಪಿಂಗ್‌ ಮೂಲಕದ ಗಣತಿ ಕಾರ್ಯ ಪೂರ್ಣಗೊಂಡಿದೆ. ವನ್ಯಧಾಮದ 7 ವಲಯಗಳ ವ್ಯಾಪ್ತಿಯಲ್ಲೂ ಒಟ್ಟು 450 ಜೋಡಿ ಕ್ಯಾಮೆರಾಗಳನ್ನು ಅಳವಡಿಸಿ, ನಿಗದಿತ ದಿನದವರೆಗೆ ಕ್ಯಾಮೆರಾಗಳ ಮೂಲಕ ವನ್ಯಜೀವಿಗಳ ಇರುವಿಕೆ ಟ್ಯ್ರಾಪ್‌ ಆಗಿದೆ. ಇದೀಗ ಗಣತಿ ಮತ್ತೊಂದು ಭಾಗವಾಗಿ ಇಲಾಖೆ ಸಿಬ್ಬಂದಿ ತಂಡಗಳಾಗಿ ವಿಂಗಡನೆಯಾಗಿ ಹುಲಿಗಳ ನೇರ ವೀಕ್ಷಣೆ , ಹೆಜ್ಜೆ ಗುರುತು ಮೂಲಕ ವ್ಯಾಘ್ರಗಳು ಎಷ್ಟು ಸಂಖ್ಯೆಯಲ್ಲಿರಬಹುದು ಎಂಬುದನ್ನು ಅಂದಾಜಿಸಲು ಸಿದ್ದರಾಗಿದ್ದಾರೆ.

ಬಂಡೀಪುರದಲ್ಲಿ ಹುಲಿ ಗಣತಿ ಶುರು; 300 ಸಿಬ್ಬಂದಿ ನಿಯೋಜನೆ
ಮಲೆ ಮಹದೇಶ್ವರ ಬೆಟ್ಟವು ಧಾರ್ಮಿಕ ಕ್ಷೇತ್ರವಲ್ಲದೇ ದಟ್ಟ ಅರಣ್ಯವನ್ನೂ ಹೊಂದಿದೆ. ಅಗಾಧ ವನ್ಯ ಸಂಪತ್ತು ಈ ಕಾಡಿನಲ್ಲಿದೆ. ಈ ದಟ್ಟ ಅರಣ್ಯದಲ್ಲಿ ಇಲಾಖೆಯ ಒಟ್ಟು 300 ಮಂದಿ ಸಿಬ್ಬಂದಿ ಹುಲಿಗಳನ್ನು ಅಂದಾಜಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ತಿಳಿಸಿದರು.

2018ರಲ್ಲಿ ನಡೆದ ಹುಲಿ ಗಣತಿ ಪ್ರಕಾರ ಈ ವನ್ಯಧಾಮದಲ್ಲಿ 12 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು. ಇದೀಗ ಆ ಸಂಖ್ಯೆ 20ಕ್ಕೇರಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಫೆಬ್ರುವರಿ 10 ರಿಂದ ಪ್ರಾರಂಭವಾಗಲಿರುವ ಗಣತಿ ಕಾರ್ಯದ ಬಳಿಕ ತಿಳಿಯಲಿದೆ.

ಈಗಾಗಲೇ ಚಾಮರಾಜನಗರ ಜಿಲ್ಲೆಯ ಬಂಡೀಪುರ, ಬಿಆರ್‌ಟಿ ಹುಲಿ ರಕ್ಷಿತಾರಣ್ಯಗಳಲ್ಲಿ ಹುಲಿ ಗಣತಿ ಮುಗಿದಿದೆ. ಅವೆರಡು ಕಾಡುಗಳಲ್ಲಿ ಹುಲಿಗಳ ಸಂಖ್ಯೆ ನಿರೀಕ್ಷೆ ಮೀರಿ ಅಭಿವೃದ್ಧಿಗೊಳ್ಳುತ್ತಿದ್ದು, ಬಿಆರ್‌ಟಿಯಲ್ಲಿ ಹುಲಿಗಳ ಸಂಖ್ಯೆ ವೃದ್ಧಿಸಿದರೆ ಅದು ಮಲೆ ಮಹದೇಶ್ವರಬೆಟ್ಟ ವನ್ಯಧಾಮದ ಕಡೆಗೂ ವಿಸ್ತರಣೆಯಾಗಲಿದೆ. ಹೀಗಾಗಿ ಮಲೆ ಮಹದೇಶ್ವರ ಬೆಟ್ಟದ ಅರಣ್ಯದಲ್ಲಿ ಹುಲಿಗಳು ಹೆಚ್ಚುವ ಸಾಧ್ಯತೆ ಬಗ್ಗೆ ಚರ್ಚೆ ನಡೆದಿದೆ.

ಇನ್ನೊಂದು ವಾರದಲ್ಲಿ ಘೋಷಣೆ ಸಾಧ್ಯತೆ

ಈಗಾಗಲೇ ರಾಜ್ಯದ ಮತ್ತೊಂದು ಹುಲಿರಕ್ಷಿತಾರಣ್ಯವಾಗಿ ಮಲೆ ಮಹದೇಶ್ವಬೆಟ್ಟ ಘೋಷಣೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಅದು ಇನ್ನೊಂದು ವಾರದಲ್ಲಿ ತೀರ್ಮಾನವಾಗುವ ಸಂಭವ ಹೆಚ್ಚು ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಮ. ಬೆಟ್ಟಕ್ಕೂ ಹುಲಿ ಕಾಡಿನ ಶ್ರೇಯ ದೊರಕಿದ್ದೇ ಆದಲ್ಲಿ ಜಿಲ್ಲೆಯಲ್ಲೇ ಮೂರು ಹುಲಿ ರಕ್ಷಿತಾರಣ್ಯಗಳಾಗಲಿವೆ. ಈಗಾಗಲೇ ಬಂಡೀಪುರ, ಬಿಆರ್‌ಟಿ ಹುಲಿ ಕಾಡುಗಳಾಗಿ ಗಮನ ಸೆಳೆದಿವೆ. ಆ ಪಟ್ಟಿಗೆ ಮ.ಬೆಟ್ಟವೂ ಸೇರಿದಂತೆ ಅದೊಂದು ಬಗೆಯಲ್ಲಿ ದಾಖಲೆ ಆಗಲಿದೆ.

ಹುಲಿ, ಆನೆ ಹೆಜ್ಜೆ ಅರಸುತ್ತಾ ಗಣತಿ ನಡೆಸಿದ ವನ ಸಿಬ್ಬಂದಿ!
ಸದ್ಯ ಕರ್ನಾಟಕದ ಬಂಡೀಪುರ, ನಾಗರಹೊಳೆ, ಬಿಆರ್‌ಟಿ, ಭದ್ರಾ ಹಾಗೂ ಕಾಳಿ ಕಾಡುಗಳು ಹುಲಿ ರಕ್ಷಿತಾರಣ್ಯಗಳಾಗಿವೆ. ಮ.ಬೆಟ್ಟ ಘೋಷಣೆಯಾದರೆ ರಾಜ್ಯದಲ್ಲಿ ಒಟ್ಟು 6 ಹುಲಿ ರಕ್ಷಿತಾರಣ್ಯಗಳು ಇದ್ದಂತಾಗುತ್ತದೆ. 2018ರ ಗಣತಿ ಪ್ರಕಾರ ರಾಜ್ಯದ ಬಂಡೀಪುರದಲ್ಲಿ 173, ನಾಗರಹೊಳೆಯಲ್ಲಿ 120, ಕಾಳಿ 4, ಭದ್ರಾ 38, ಬಿಆರ್‌ಟಿ 56, ಮಲೆ ಮಹದೇಶ್ವರ ಬೆಟ್ಟ 12, ಕಾವೇರಿ ವನ್ಯಜೀವಿ ಕಾಡಿನಲ್ಲಿ 8 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ.

‘ಫೆಬ್ರುವರಿ 10 ರಿಂದ ನಮ್ಮ ಮಲೆ ಮಹದೇಶ್ವರಬೆಟ್ಟ ವನ್ಯಧಾಮದಲ್ಲಿ ಹುಲಿ ಗಣತಿಗೆ ಚಾಲನೆ ದೊರೆಯಲಿದೆ. ಇದಕ್ಕಾಗಿ ನಾವು ಸಕಲ ರೀತಿಯಲ್ಲಿ ಸಜ್ಜುಗೊಂಡಿದ್ದೇವೆ. 7 ವಲಯಗಳಲ್ಲಿ 300 ಮಂದಿ ಸಿಬ್ಬಂದಿ ಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ’ ಎಂದು ಮ.ಬೆಟ್ಟ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ತಿಳಿಸಿದ್ದಾರೆ.

ಮೊದಲ ಬಾರಿಗೆ ಚಿರತೆ ಗಣತಿ; ಹುಲಿ ಗಣತಿ ಜತೆಗೆ ಚಿರತೆ ಗಣತಿಗೆ ಅರಣ್ಯ ಇಲಾಖೆ ಸಿದ್ಧತೆ!



Read more

[wpas_products keywords=”deal of the day sale today offer all”]