Karnataka news paper

ಕೊಲೆಗಾರನನ್ನ ಹುಡುಕಿಕೊಂಡು ಬಂದೇಬಿಟ್ಟಳು ನಕ್ಷತ್ರ! ಸಿಕ್ಕಿಬೀಳ್ತಾಳಾ ಶ್ವೇತಾ?


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಲಕ್ಷಣ’ ಕೂಡ ಒಂದು. ಕೆಲವೇ ದಿನಗಳ ಹಿಂದೆಯಷ್ಟೇ ಶುರುವಾದ ‘ಲಕ್ಷಣ’ ಧಾರಾವಾಹಿಯ ಕಥೆ ವೇಗವಾಗಿ ಸಾಗುತ್ತಿದೆ. ಸಾಕಿದ ತಂದೆಯನ್ನೇ ಕೊಲ್ಲಲು ಮುಂದಾಗಿದ್ದ ಶ್ವೇತಾಳ ನಿಜ ಬಣ್ಣ ಇದೀಗ ನಕ್ಷತ್ರ ಮುಂದೆ ಬಯಲಾಗುವ ಸಾಧ್ಯತೆ ದಟ್ಟವಾಗಿದೆ.

ತಂದೆಯನ್ನೇ ಕೊಲ್ಲಿಸಲು ಸುಪಾರಿ ಕೊಟ್ಟ ಶ್ವೇತಾ
ಹುಟ್ಟಿದ ಮರುಕ್ಷಣವೇ ಅದಲು ಬದಲಾಗುವ ಇಬ್ಬರು ಹೆಣ್ಣು ಮಕ್ಕಳ ಕಥೆ ‘ಲಕ್ಷಣ’ ಧಾರಾವಾಹಿಯದ್ದು. ಆರತಿ – ಚಂದ್ರಶೇಖರ್ ದಂಪತಿಯ ಪುತ್ರಿ ನಕ್ಷತ್ರ ತುಕಾರಂ ಮನೆಯಲ್ಲಿ ಬೆಳೆದಿದ್ದರೆ, ತುಕಾರಾಂ ಪುತ್ರಿ ಶ್ವೇತಾಳನ್ನ ಆರತಿ – ಚಂದ್ರಶೇಖರ್ ಸಾಕುತ್ತಿರುತ್ತಾರೆ. ಆದರೆ, ಮಕ್ಕಳು ಅದಲು ಬದಲಾಗಿರುವ ಸತ್ಯ ವೈದ್ಯರನ್ನು ಬಿಟ್ಟರೆ ಇನ್ಯಾರಿಗೂ ಗೊತ್ತಿರುವುದಿಲ್ಲ.

‘ಲಕ್ಷಣ’: ನಕ್ಷತ್ರ ಸ್ವಂತ ಮಗಳು ಎಂಬ ಸತ್ಯ ಚಂದ್ರಶೇಖರ್‌ಗೆ ಗೊತ್ತಾಗೋಯ್ತಾ? ಅಥವಾ ಕನಸಾ?

ಎರಡು ದಶಕಗಳು ಉರುಳಿದ ಬಳಿಕ ಈ ಸತ್ಯವನ್ನು ಶ್ವೇತಾ ಹಾಗೂ ನಕ್ಷತ್ರಗೆ ವೈದ್ಯರು ತಿಳಿಸಿರುತ್ತಾರೆ. ಅತ್ತ ಸತ್ಯ ಗೊತ್ತಿದ್ದರೂ, ಅದನ್ನ ಅಪ್ಪ- ಅಮ್ಮನ ಬಳಿ ಹೇಳಲಾಗದೆ ನಕ್ಷತ್ರ ಸುಮ್ಮನಿದ್ದರೆ, ಇತ್ತ ಐ‍ಷಾರಾಮಿ ಜೀವನ ನಡೆಸಿರುವ ಶ್ವೇತಾ ಸತ್ಯ ಹೊರಗೆ ಬಂದರೆ ಬೀದಿಗೆ ಬೀಳಬೇಕಾಗುತ್ತದೆ ಎಂಬ ಆತಂಕದಿಂದ ನಿಜವನ್ನು ಮುಚ್ಚಿಟ್ಟು ಶ್ರೀಮಂತ ಭೂಪತಿಯನ್ನು ಮದುವೆಯಾಗಲು ಮುಂದಾಗುತ್ತಾಳೆ.

ಭೂಪತಿ ಮುಂದೆ ಬಯಲಾಯ್ತು ಬಹುದೊಡ್ಡ ರಹಸ್ಯ: ಸಿಕ್ಕಿಹಾಕಿಕೊಂಡ ಶ್ವೇತಾ..!

ನಕ್ಷತ್ರಳ ತಂದೆ- ತಾಯಿಯನ್ನು ಹುಡುಕಲು ಹೊರಟಿರುವ ಚಂದ್ರಶೇಖರ್ ತನ್ನ ದಾರಿಗೆ ಅಡ್ಡವಾಗಿ ನಿಂತಿದ್ದಾರೆ ಎಂದು ಶ್ವೇತಾ ಭಾವಿಸಿದ್ದಾಳೆ. ಹೀಗಾಗಿ, ಸಾಕು ತಂದೆಯನ್ನೇ ಕೊಲೆ ಮಾಡಿಸಲು ಶ್ವೇತಾ ಮುಂದಾಗಿದ್ದಾಳೆ. ಇದೇ ಕೆಲಸಕ್ಕಾಗಿ ಕಾಲೇಜ್‌ನಲ್ಲಿ ಜೊತೆಯಲ್ಲಿ ಓದಿದ ಹುಡುಗ ಪ್ರಖ್ಯಾತ್‌ಗೆ ಶ್ವೇತಾ ಸುಪಾರಿ ಕೊಟ್ಟಿದ್ದಾಳೆ.

‘ಲಕ್ಷಣ’: ನಕ್ಷತ್ರಗಾಗಿ ತುಕಾರಾಂ ಮುಂದೆ ಎರಡು ಕಂಡೀಷನ್ ಹಾಕಿದ ಭೂಪತಿ!

ತಂದೆಯನ್ನ ಕಾಪಾಡಿದ ನಕ್ಷತ್ರ
ಶ್ವೇತಾಳಿಂದ ಸುಪಾರಿ ಪಡೆದ ಪ್ರಖ್ಯಾತ್ ಅದಾಗಲೇ ಚಂದ್ರಶೇಖರ್‌ರನ್ನ ಕೊಲೆ ಮಾಡಲು ಮುಂದಾಗಿದ್ದ. ಆಗ ಚಂದ್ರಶೇಖರ್ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದು ನಕ್ಷತ್ರ. ಹೀಗಿರುವಾಗಲೇ, ಕೊಲೆಗಾರ ಪ್ರಖ್ಯಾತ್ ಮುಖವನ್ನ ನಕ್ಷತ್ರ ನೋಡಿದ್ದಳು.

‘ಲಕ್ಷಣ’ ಧಾರಾವಾಹಿಯಲ್ಲಿ ಬಡವರು ಕೊಳಕರು, ಕೆಟ್ಟವರು ಅಂತ ತೋರಿಸಿಲ್ಲ: ನಟ ಜಗನ್ ಚಂದ್ರಶೇಖರ್

ಶ್ವೇತಾ ಜೊತೆ ಕೊಲೆಗಾರ
ಕೊಲೆಗಾರನ ಮುಖ ಪರಿಚಯ ನಕ್ಷತ್ರಗಿದೆ. ಹೀಗಾಗಿ ಕೊಲೆಗಾರನನ್ನು ಹಿಡಿಯಲು ಹೊರಟ ನಕ್ಷತ್ರಗೆ ದೊಡ್ಡ ಆಘಾತವೇ ಉಂಟಾಗಿದೆ. ಯಾಕಂದ್ರೆ, ಶ್ವೇತಾ ಜೊತೆಗೆ ಕೊಲೆಗಾರ ಇರುವುದನ್ನು ಹಾಗೂ ಕೊಲೆಗಾರನಿಗೆ ಶ್ವೇತಾ ದುಡ್ಡು ಕೊಡುತ್ತಿರುವುದನ್ನು ನಕ್ಷತ್ರ ನೋಡಿಬಿಟ್ಟಳು. ಅಲ್ಲಿಂದ, ಕೊಲೆಗಾರ ಪ್ರಖ್ಯಾತ್‌ನ ಫಾಲೋ ಮಾಡಿದ ನಕ್ಷತ್ರ ಇದೀಗ ನೇರವಾಗಿ ಅವನ ಮನೆಗೇ ಬಂದಿದ್ದಾಳೆ. ಹಾಗಾದ್ರೆ, ಕೊಲೆಗಾರನ ಹಿಂದೆ ಇರೋದು ಶ್ವೇತಾ ಅಂತ ನಕ್ಷತ್ರಗೆ ಗೊತ್ತಾಗುತ್ತಾ? ಶ್ವೇತಾಳ ಅಸಲಿ ಮುಖ ಭೂಪತಿಗೆ ಪರಿಚಯವಾಗುತ್ತಾ? ಎಂಬುದೇ ಸದ್ಯದ ಕುತೂಹಲ.

ಅಂದ್ಹಾಗೆ, ‘ಲಕ್ಷಣ’ ಧಾರಾವಾಹಿಯಲ್ಲಿ ನಕ್ಷತ್ರ ಆಗಿ ವಿಜಯಲಕ್ಷ್ಮಿ, ಶ್ವೇತಾ ಆಗಿ ಸುಕೃತಾ ನಾಗ್, ಭೂಪತಿಯಾಗಿ ಜಗನ್ನಾಥ್ ಚಂದ್ರಶೇಖರ್ ಅಭಿನಯಿಸುತ್ತಿದ್ದಾರೆ.



Read more

[wpas_products keywords=”deal of the day sale today offer all”]