Karnataka news paper

ದಶಕದ ಬಳಿಕ ಆರ್‌ಸಿಬಿಗೆ ಮರಳಬಹುದಾದ ಮೂವರು ಸ್ಟಾರ್‌ಗಳಿವರು!


ಹೊಸದಿಲ್ಲಿ: ಹದಿನೈದನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮೆಗಾ ಆಟಗಾರರ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಶುರುವಾಗಿದೆ. ವಿಶ್ವದ ದೊಡ್ಡ ಸ್ಟಾರ್‌ ಆಟಗಾರರು ಯಾವ-ಯಾವ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆಂಬುದನ್ನು ತಿಳಿದುಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಶ್ರೇಯಸ್‌ ಅಯ್ಯರ್‌ ಅವರನ್ನು ಮೆಗಾ ಹರಾಜಿನಲ್ಲಿ ಖರೀದಿಸಲು ಬೆಂಗಳೂರು ಫ್ರಾಂಚೈಸಿ ಬರೋಬ್ಬರಿ 20 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ ಎಂದು ಮೂಲಗಳು ತಿಳಿಸಿರುವುದನ್ನು ಇತ್ತೀಚೆಗೆ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಬಹಿರಂಗಪಡಿಸಿದ್ದರು. ಆದರೆ, ಇತ್ತೀಚಿನ ವರದಿಗಳ ಪ್ರಕಾರ ಮೆಗಾ ಹರಾಜಿನಲ್ಲಿ ಖರೀದಿಸಲು ಜೇಸನ್‌ ಹೋಲ್ಡರ್, ರಿಯಾನ್ ಪರಾಗ್‌ ಹಾಗೂ ಅಂಬಾಟಿ ರಾಯುಡು ಹೆಸರುಗಳನ್ನು ಶಾರ್ಟ್‌ ಲಿಸ್ಟ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಆದರೆ ಈ ಆಟಗಾರರನ್ನು ಖರೀದಿಸುವ ಬಗ್ಗೆ ಆರ್‌ಸಿಬಿ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ ಮೇಲ್ನೋಟಕ್ಕೆ ಈ ಮೂವರು ಆಟಗಾರರ ಪೈಕಿ ಜೇಸನ್‌ ಹೋಲ್ಡರ್‌ ಅವರನ್ನು ಖರೀದಿಸಲು ಬೆಂಗಳೂರು ಫ್ರಾಂಚೈಸಿ ಒಲವು ತೋರಿಸಬಹುದು. ಅಂದಹಾಗೆ ಒಂದು ದಶಕದ ಹಿಂದೆ ಆರ್‌ಸಿಬಿ ತಂಡದಲ್ಲಿ ಆಡಿದ್ದ ಮೂವರು ಆಟಗಾರರನ್ನು ಈ ಬಾರಿ ದೊಡ್ಡ ಹರಾಜಿನಲ್ಲಿ ಖರೀದಿಸುವ ಸಾಧ್ಯತೆ ಇದೆ.

‘ನನ್ನ ಐಪಿಎಲ್‌ ವೃತ್ತಿಬದುಕು 2019ರಲ್ಲೇ ಅಂತ್ಯಗೊಳ್ಳುತ್ತಿತ್ತು’, ಎಂದ ಸಿರಾಜ್‌!

ಐಯಾನ್‌ ಮಾರ್ಗನ್‌: ಇಂಗ್ಲೆಂಡ್‌ ತಂಡದ ಸೀಮಿತ ಓವರ್‌ಗಳ ನಾಯಕ ಐಯಾನ್‌ ಮಾರ್ಗನ್‌ 2010ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಆ ವೇಳೆ ಆರು ಪಂದ್ಯಗಳಾಡಿದ್ದ ಅವರು 116 ಸ್ಟ್ರೈಕ್‌ ರೇಟ್‌ನಲ್ಲಿ 35 ರನ್‌ ಗಳಿಗೆ ಸೀಮಿತರಾಗಿದ್ದರು. ತದ ನಂತರ ಐಯಾನ್‌ ಮಾರ್ಗನ್‌ ತಮ್ಮ ಬ್ಯಾಟಿಂಗ್‌ನಲ್ಲಿ ಸಾಕಷ್ಟು ಬೆಳವಣಿಗೆ ಸಾಧಿಸಿದ್ದರು. ಆ ಮೂಲಕ ಅವರ ನಾಯಕತ್ವದಲ್ಲಿ ಇಂಗ್ಲೆಂಡ್‌ ತಂಡ 2019ರಲ್ಲಿ ಚೊಚ್ಚಲ ಏಕದಿನ ವಿಶ್ವಕಪ್‌ ಮುಡಿಗೇರಿಸಿಕೊಂಡಿತ್ತು.

ಅಷ್ಟೇ ಅಲ್ಲದೆ ಅವರ ನಾಯಕತ್ವದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಕಳೆದ ಆವೃತ್ತಿಯಲ್ಲಿ ಫೈನಲ್‌ ಪ್ರವೇಶ ಮಾಡಿತ್ತು. ಆದರೆ ಇದೀಗ ಬೆಂಗಳೂರು ಫ್ರಾಂಚೈಸಿ ಆರ್‌ಸಿಬಿಗೆ ನೂತನ ನಾಯಕನಿಗಾಗಿ ಹುಡುಕಾಟ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಮೆಗಾ ಹರಾಜಿನಲ್ಲಿ ಐಯಾನ್‌ ಮಾರ್ಗನ್‌ ಅವರನ್ನು ಆರ್‌ಸಿಬಿ ಮತ್ತೆ ಖರೀದಿಸುವ ಸಾಧ್ಯತೆ ಇದೆ.

ಕಪ್ ಗೆಲ್ಲುವುದಕ್ಕಿಂತ ಆರ್‌ಸಿಬಿಗೆ ಪ್ರಾಮಾಣಿಕನಾಗಿರುವುದು ಮುಖ್ಯ: ಕೊಹ್ಲಿ!

ಭುವನೇಶ್ವರ್‌ ಕುಮಾರ್‌: ಐಪಿಎಲ್‌ ಆರಂಭಿಕ ಆವೃತ್ತಿಗಳಾದ 2009 ಮತ್ತು 2010ರಲ್ಲಿ ಭುವನೆಶ್ವರ್‌ ಕುಮಾರ್‌ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಆದರೆ ಈ ಅವಧಿಯಲ್ಲಿ ಅವರು ಒಂದೇ ಒಂದು ಪಂದ್ಯ ಆಡಿರಲಿಲ್ಲ. ಆದರೆ ಚಾಂಪಿಯನ್ಸ್‌ ಲೀಗ್‌ 20 ಟೂರ್ನಿಯಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದರು. ಆದರೆ ಇದೀಗ ಭುವನೇಶ್ವರ್‌ ಕುಮಾರ್‌ ಐಪಿಎಲ್‌ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಬೌಲರ್‌ಗಳ ಪೈಕಿ ಒಬ್ಬರಾಗಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್‌ ತಂಡದಿಂದ ಹೊರ ಬಂದಿರುವ ಅವರು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಹಿ ಹಾಕಿದರೆ, ಮೊಹಮ್ಮದ್‌ ಸಿರಾಜ್‌ಗೆ ಅತ್ಯುತ್ತಮ ಜೋಡಿಯಾಗಬಲ್ಲರು.

ಆಲ್‌ರೌಂಡರ್‌ ಖರೀದಿಗೆ ಹಣದ ಹೊಳೆ ಹರಿಸಲು ಸಜ್ಜಾದ ಆರ್‌ಸಿಬಿ!

ಮನೀಶ್ ಪಾಂಡೆ: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವಕ್ಕೆ ಸಂಭಾವ್ಯ ಅಭ್ಯರ್ಥಿಗಳಲ್ಲಿ ಮನೀಶ್ ಪಾಂಡೆ ಕೂಡ ಒಬ್ಬರಾಗಿದ್ದಾರೆ. 2009 ಮತ್ತು 2010ರ ಆವೃತ್ತಿಗಳಲ್ಲಿ ಪಾಂಡೆ ಆರ್‌ಸಿಬಿ ಪರ ಪ್ಯಾಡ್‌ ಕಟ್ಟಿದ್ದರು. ಈ ಅವಧಿಯಲ್ಲಿ ಚೊಚ್ಚಲ ಶತಕ ಸಿಡಿಸಿದ ಭಾರತೀಯ ಮೊದಲ ಬ್ಯಾಟ್ಸ್‌ಮನ್‌ ಎಂಬ ಸಾಧನೆಯನ್ನು ಮಾಡಿದ್ದರು.

ಆರ್‌ಸಿಬಿ ಪರ ಒಟ್ಟು 18 ಪಂದ್ಯಗಳಾಡಿರುವ ಅವರು 417 ರನ್‌ ಗಳಿಸಿದ್ದಾರೆ. ಒಂದು ವೇಳೆ ಮನೀಶ್‌ ಪಾಂಡೆ ಆರ್‌ಸಿಬಿಗೆ ಸಹಿ ಮಾಡಿದರೆ, ವಿರಾಟ್‌ ಕೊಹ್ಲಿ ಅಗ್ರ ಕ್ರಮಾಂಕದಲ್ಲಿ ಮುಂದುವರಿದು ಕನ್ನಡಿಗ ಮಧ್ಯಮ ಕ್ರಮಾಂಕದ ಜವಾಬ್ದಾರಿಯನ್ನು ಸ್ವೀಕರಿಸಬಹುದು. ಆ ಮೂಲಕ ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ ಬ್ಯಾಕ್ ಅಪ್‌ಗೆ ಇರಬಹುದು.

ಆರ್‌ಸಿಬಿ ತಂಡದ ನಾಯಕತ್ವಕ್ಕೆ ಕೊಹ್ಲಿ ಮರಳಬೇಕೆಂದ ಅಗರ್ಕರ್‌!

ಮನೀಶ್‌ ಪಾಂಡೆ ಜೊತೆಗೆ ರಾಬಿನ್‌ ಉತ್ತಪ್ಪ ಅವರನ್ನೂ ಆರ್‌ಸಿಬಿ ಸೇರಿಸಿಕೊಳ್ಳಬಹುದು. ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡಿದ್ದ ಉತ್ತಪ್ಪ, ದೀರ್ಘಾವಧಿಯಿಂದ ಟೀಮ್‌ ಇಂಡಿಯಾದಿಂದ ಹೊರಗುಳಿದಿದ್ದಾರೆ. ಅಂದಹಾಗೆ ಈ ಹಿಂದೆ ಆರ್‌ಸಿಬಿ ಪರ ಆಡಿದ್ದ ಉತ್ತಪ್ಪ ಮೆಗಾ ಹರಾಜಿನಲ್ಲಿ ತವರು ತಂಡಕ್ಕೆ ಮರಳಿದರೂ ಅಚ್ಚರಿ ಇಲ್ಲ.



Read more

[wpas_products keywords=”deal of the day gym”]