ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಲ್ಲಿ ‘ಡಿಜಿಟಲ್ ಉಳಿತಾಯ ಖಾತೆ ಮುಚ್ಚಲು ಶುಲ್ಕವನ್ನು ಪರಿಚಯಿಸಿದೆ ಎಂದು ಈ ಸೂಚನೆಯಲ್ಲಿ ಹೇಳಲಾಗಿದೆ. ಖಾತೆ ಮುಚ್ಚಲು ₹150 ಮತ್ತು GSTಯನ್ನು ಶುಲ್ಕವಾಗಿ ವಿಧಿಸಲಾಗುತ್ತದೆ. 2022ರ ಮಾರ್ಚ್ 5 ರಿಂದ ಈ ನಿಯಮ ಅನ್ವಯವಾಗಲಿದೆ. KYCಯನ್ನು ನವೀಕರಿಸದ ಕಾರಣ ಡಿಜಿಟಲ್ ಉಳಿತಾಯ ಬ್ಯಾಂಕ್ ಖಾತೆಯನ್ನು ಮುಚ್ಚಿದರೆ ಮಾತ್ರ ಈ ಶುಲ್ಕ ಅನ್ವಯವಾಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
ಖಾತೆ ತೆರೆದ 12 ತಿಂಗಳೊಳಗೆ KYC ಮಾಡಬೇಕು
ನಿಯಮಗಳ ಪ್ರಕಾರ, ಖಾತೆ ತೆರೆದ 12 ತಿಂಗಳೊಳಗೆ ಗ್ರಾಹಕರು ಡಿಜಿಟಲ್ ಉಳಿತಾಯ ಬ್ಯಾಂಕ್ ಖಾತೆಯ KYC ಅನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ, ಖಾತೆಯನ್ನು ಮುಚ್ಚಲಾಗುತ್ತದೆ. ಡಿಜಿಟಲ್ ಉಳಿತಾಯ ಖಾತೆ ಮುಚ್ಚುವಿಕೆಯ ಶುಲ್ಕಗಳನ್ನು ತಪ್ಪಿಸಲು, ಗ್ರಾಹಕರು reKYCಗಾಗಿ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬಹುದು. ಡಿಜಿಟಲ್ ಉಳಿತಾಯ ಬ್ಯಾಂಕ್ ಖಾತೆದಾರರು ಒಂದು ವರ್ಷ ಪೂರ್ಣಗೊಳ್ಳುವ ಮೊದಲು ReKYC ಮೂಲಕ ತಮ್ಮ ಖಾತೆಯನ್ನು ಸಾಮಾನ್ಯ ಉಳಿತಾಯ ಬ್ಯಾಂಕ್ ಖಾತೆಯಾಗಿ ಪರಿವರ್ತಿಸಬಹುದು. ಈ ಮೂಲಕ ವಿವಿಧ ಸೌಲಭ್ಯಗಳನ್ನು ಪಡೆಯಬಹುದು.
ಉಳಿತಾಯ ಖಾತೆ ಮೇಲಿನ ಬಡ್ಡಿ ದರದಲ್ಲೂ ಇಳಿಕೆ
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಕೂಡ ತನ್ನ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ. ಬಡ್ಡಿದರದಲ್ಲಿ ಶೇ. 0.25 ರಷ್ಟು ಕಡಿತ ಮಾಡಲಿದೆ. 2022ರ ಫೆಬ್ರವರಿ 1 ರಿಂದಲೇ ನೂತನ ಬಡ್ಡಿದರಗಳು ಜಾರಿಗೆ ಬರಲಿವೆ. ಫೆಬ್ರವರಿ1 ರಿಂದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ನ ಉಳಿತಾಯ ಖಾತೆಯು ₹1 ಲಕ್ಷದವರೆಗಿನ ಬ್ಯಾಲೆನ್ಸ್ಗೆ ವಾರ್ಷಿಕ ಶೇ.2.25ರ ಬಡ್ಡಿದರ ಹೊಂದಿದೆ. ಈ ಮೊದಲು ವಾರ್ಷಿಕ ಶೇ.2.50ರ ಬಡ್ಡಿದರ ಇತ್ತು. ₹1 ಲಕ್ಷಕ್ಕಿಂತ ಹೆಚ್ಚಿನ ಮತ್ತು ₹2 ಲಕ್ಷದವರೆಗಿನ ಬ್ಯಾಲೆನ್ಸ್ ಮೊತ್ತಕ್ಕೆ ವಾರ್ಷಿಕ ಶೇ.2.50 ಬಡ್ಡಿ ದರ ನಿಗದಿಮಾಡಲಾಗಿದೆ. ಈ ಮೊದಲು ವಾರ್ಷಿಕ ಶೇ.2.75ರ ಬಡ್ಡಿದರ ಇತ್ತು.
Read more
[wpas_products keywords=”deal of the day sale today offer all”]