Personal Finance
ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ಅವರ ಅದಾನಿ ಗ್ರೂಪ್ ಸುಮಾರು 2 ಬಿಲಿಯನ್ ಡಾಲರ್‌ಗಳಷ್ಟು ಶ್ರೀಮಂತವಾಗಿದೆ. ಅದಾನಿ ವಿಲ್ಮರ್ ಷೇರು ಮಾರುಕಟ್ಟೆಯಲ್ಲಿ ತನ್ನ ಮೊದಲ ದಿನವನ್ನು ರೂ 35,467.5 ಕೋಟಿ ಮೌಲ್ಯದೊಂದಿಗೆ ಕೊನೆ ಮಾಡಿದೆ ಎಂದು ವರದಿ ಉಲ್ಲೇಖ ಮಾಡಿದೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ, ಗೌತಮ್ ಅದಾನಿ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಕಳೆದ ವಾರ, ಫೋರ್ಬ್ಸ್‌ನ ರಿಯಲ್-ಟೈಮ್ ಬಿಲಿಯನೇರ್ ಪಟ್ಟಿಯ ಪ್ರಕಾರ, ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಗೌತಮ್ ಅದಾನಿ ಶ್ರೀಮಂತ ಭಾರತೀಯರಾಗಿದ್ದಾರೆ.
ಕಳೆದ 1 ವರ್ಷದಲ್ಲಿ ದಿನಕ್ಕೆ 1002 ಕೋಟಿ ಗಳಿಸಿದ ಗೌತಮ್ ಅದಾನಿ: ಏಷ್ಯಾದ 2ನೇ ಅತಿದೊಡ್ಡ ಶ್ರೀಮಂತ
ಇನ್ನು ಐಪಿಒ ಆದ ಅದಾನಿ ವಿಲ್ಮಾರ್ ಗೌತಮ್ ಅದಾನಿ ಅಧ್ಯಕ್ಷತೆಯ ಅದಾನಿ ಗ್ರೂಪ್ ಮತ್ತು ಸಿಂಗಾಪುರ್ ಅಗ್ರಿಬಿಸಿನೆಸ್ ವಿಲ್ಮರ್ ಇಂಟರ್ನ್ಯಾಷನಲ್ ಲಿಮಿಟೆಡ್ ನಡುವಿನ ಜಂಟಿ ಉದ್ಯಮವಾಗಿದೆ. ಅದಾನಿ ವಿಲ್ಮಾರ್ ಷೇರು ಮಾರುಕಟ್ಟೆಯಲ್ಲಿ ತನ್ನ ಮೊದಲ ದಿನವನ್ನು 35,467.5 ಕೋಟಿ ರೂ.ಗೆ ಕೊನೆ ಮಾಡಿದೆ. ಇದರೊಂದಿಗೆ, ಅದಾನಿ ಗ್ರೂಪ್ ಘಟಕದ ಮಾಲೀಕತ್ವದ ಮೌಲ್ಯವು ರೂ 15,166 ಕೋಟಿ ಅಥವಾ USD 2.03 ಶತಕೋಟಿಗೆ ಏರಿದೆ.

ಅತಿದೊಡ್ಡ ಗ್ರಾಹಕ ಸರಕುಗಳ ಕಂಪನಿ
ಅದಾನಿ ವಿಲ್ಮಾರ್ ಅಹಮದಾಬಾದ್ ಮೂಲದ ಎಫ್‌ಎಂಸಿಜಿ ಷೇರುಗಳಲ್ಲಿ ಪಟ್ಟಿ ಮಾಡಲಾದ ಆದಾಯದ ಮೂಲಕ ನೋಡಿದರೆ, ದೇಶದ ಅತಿದೊಡ್ಡ ಗ್ರಾಹಕ ಸರಕುಗಳ ಕಂಪನಿಯಾಗಿದೆ.2020-2021 ರ ಹಣಕಾಸು ವರ್ಷದಲ್ಲಿ, AWL ನ ಆದಾಯವು 37,196 ಕೋಟಿ ರೂ. ಆಗಿತ್ತು. ಕಂಪನಿಯು ಹಣಕಾಸು ವರ್ಷ 21-22 (ಏಪ್ರಿಲ್-ಸೆಪ್ಟೆಂಬರ್ ಅವಧಿ) ಮೊದಲ ಆರು ತಿಂಗಳಲ್ಲಿ 24,957 ಕೋಟಿ ಆದಾಯವನ್ನು ಗಳಿಸಿದೆ. ಅದಾನಿ ವಿಲ್ಮಾರ್ ಅನ್ನು ಜನವರಿ 1999 ರಲ್ಲಿ ಅಹಮದಾಬಾದ್‌ನ ಸಬರಮತಿ ನದಿ ಪ್ರದೇಶದಲ್ಲಿ ಸ್ಥಾಪಿಸಲಾಯಿತು. ಕಂಪನಿಯು ಕಳೆದ ಎರಡು ದಶಕಗಳಲ್ಲಿ ದೇಶದ ಅತಿದೊಡ್ಡ ಖಾದ್ಯ ತೈಲ ಕಂಪನಿಯಾಗಿದೆ.
ಗೌತಮ್ ಅದಾನಿಗೆ .8 ಬಿಲಿಯನ್ ನಷ್ಟ: ವಿಶ್ವದ 20 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದ ಅದಾನಿ
ಗೌತಮ್ ಅದಾನಿ VS ಮುಖೇಶ್ ಅಂಬಾನಿ
ಅದಾನಿ ಗ್ರೂಪ್‌ನ 59 ವರ್ಷದ ಮಾಲೀಕರ ನಿವ್ವಳ ಮೌಲ್ಯವು USD 88.5 ಬಿಲಿಯನ್ ಆಗಿದೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ತೋರಿಸುತ್ತದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ ಅದಾನಿಯವರ ನಿವ್ವಳ ಮೌಲ್ಯವು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಾಲೀಕರ ನಿವ್ವಳ ಮೌಲ್ಯ 87.9 ಶತಕೋಟಿ ಯುಎಸ್‌ಡಿಯನ್ನು ಮೀರಿದೆ. ಗೌತಮ್ ಅದಾನಿ ಅವರ ಸಂಪತ್ತು USD 12 ಶತಕೋಟಿ ಜಿಗಿತಕ್ಕೆ ಸಾಕ್ಷಿಯಾಗಿದೆ. ಇದರೊಂದಿಗೆ, ಅದಾನಿ ಈ ವರ್ಷ ವಿಶ್ವದ ಅತಿದೊಡ್ಡ ಸಂಪತ್ತು ಗಳಿಸಿದ ವ್ಯಕ್ತಿ ಆಗಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಎಲೋನ್ ಮಸ್ಕ್ ಅಗ್ರಸ್ಥಾನದಲ್ಲಿದ್ದಾರೆ. ಮಸ್ಕ್ ನಂತರ ಜೆಫ್ ಬೆಜೋಸ್, ಬರ್ನಾರ್ಡ್ ಅರ್ನಾಲ್ಟ್, ಬಿಲ್ ಗೇಟ್ಸ್ ಮತ್ತು ಲ್ಯಾರಿ ಪೇಜ್ ಇದ್ದಾರೆ.
ವಾರೆನ್ ಬಫೆಟ್ USD 115 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ. ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ 10 ಮತ್ತು 11 ನೇ ಸ್ಥಾನದಲ್ಲಿದ್ದು, ಏಷ್ಯನ್ನರಲ್ಲಿ ಅತ್ಯಧಿಕ ಸ್ಥಾನದಲ್ಲಿ ಇರುವವರು ಆಗಿದ್ದಾರೆ. ಫೋರ್ಬ್ಸ್‌ನ ರಿಯಲ್-ಟೈಮ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ, ಅದಾನಿ 91.1 ಬಿಲಿಯನ್ USD ನಿವ್ವಳ ಮೌಲ್ಯದೊಂದಿಗೆ ಫೋರ್ಬ್ಸ್ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ. ಪ್ರಸ್ತುತ USD 89.2 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಅಂಬಾನಿ 11 ನೇ ಸ್ಥಾನದಲ್ಲಿದ್ದಾರೆ.
ಇದಕ್ಕೂ ಮುನ್ನ ಗೌತಮ್ ಅದಾನಿ ಎರಡನೇ ಸ್ಥಾನದಲ್ಲಿ ಇದ್ದರು. ಅದಾನಿ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಗೌತಮ್ ಅದಾನಿ ಮತ್ತು ಅವರ ಕುಟುಂಬವು ಕಳೆದ ಒಂದು ವರ್ಷದಲ್ಲಿ ದಿನಕ್ಕೆ ಬರೋಬ್ಬರಿ 1,002 ಕೋಟಿ ರೂಪಾಯಿ ಆದಾಯ ಗಳಿಸಿತ್ತು. ಏಷ್ಯಾದ 2ನೇ ಅತಿದೊಡ್ಡ ಶ್ರೀಮಂತನಾಗಿರುವ ಗೌತಮ್ ಅದಾನಿ ಅವರ ಸಂಪತ್ತು ನಾಲ್ಕು ಪಟ್ಟು ಹೆಚ್ಚಾಗಿತ್ತು. ಒಂದು ವರ್ಷದ ಹಿಂದೆ 1,40,200 ಕೋಟಿ ರೂಪಾಯಿನಷ್ಟಿದ್ದ ಆಸ್ತಿ ಬರೋಬ್ಬರಿ 5,05,900 ಕೋಟಿ ರೂಪಾಯಿಗೆ ಹೆಚ್ಚಾಗಿತ್ತು.
English summary
Billionaire Gautam Adani Overtakes Mukesh Ambani as Asia’s Richest Person
Billionaire Gautam Adani overtakes Mukesh Ambani as Asia’s richest person. Read on.
Story first published: Tuesday, February 8, 2022, 21:13 [IST]
Read more…
[wpas_products keywords=”deal of the day”]