ಬಹು ಕೋಟಿ ಆಸ್ತಿ ಒಡತಿ
ಸಾವಿರಕ್ಕೂ ಅಧಿಕ ಹಿಂದಿ ಸಿನಿಮಾಗಳಲ್ಲಿ ಲತಾ ಮಂಗೇಶ್ಕರ್ ಹಾಡಿದ್ದರು. 36ಕ್ಕೂ ಅಧಿಕ ಭಾಷೆಗಳಲ್ಲಿ ಲತಾ ಮಂಗೇಶ್ಕರ್ ಗಾನ ಸುಧೆ ಹರಿಸಿದ್ದರು. ಪದ್ಮಭೂಷಣ, ಪದ್ಮವಿಭೂಷಣ, ಭಾರತ ರತ್ನ ಸೇರಿದಂತೆ ಅನೇಕ ಪ್ರಶಸ್ತಿ- ಪುರಸ್ಕಾರಗಳಿಗೆ ಭಾಜನರಾಗಿದ್ದ ಲತಾ ಮಂಗೇಶ್ಕರ್ ತಮ್ಮ ಜೀವಿತಾವಧಿಯಲ್ಲಿ ಕೋಟ್ಯಂತರ ರೂಪಾಯಿ ಆಸ್ತಿಯನ್ನು ಸಂಪಾದಿಸಿದ್ದರು. ಐಷಾರಾಮಿ ಬಂಗಲೆಯಿಂದ ಹಿಡಿದು ದುಬಾರಿ ಕಾರುಗಳವರೆಗೆ ಬಹುಕೋಟಿ ಆಸ್ತಿಗೆ ಲತಾ ಮಂಗೇಶ್ಕರ್ ಒಡತಿ ಆಗಿದ್ದರು.
ಗಾಯಕಿ ಲತಾ ಮಂಗೇಶ್ಕರ್ ಆಸ್ತಿ ಎಷ್ಟು ಕೋಟಿ..?
ದಕ್ಷಿಣ ಮುಂಬೈನಲ್ಲಿ ‘ಪ್ರಭು ಕುಂಜ್ ಭವನ್’ ಎಂಬ ಐಷಾರಾಮಿ ಬಂಗಲೆಯನ್ನು ಲತಾ ಮಂಗೇಶ್ಕರ್ ಹೊಂದಿದ್ದಾರೆ. Mercedes, Chevrolet, Buick and Chrysler ಸೇರಿದಂತೆ ದುಬಾರಿ ಕಾರುಗಳನ್ನ ಲತಾ ಮಂಗೇಶ್ಕರ್ ಖರೀದಿ ಮಾಡಿದ್ದರು. ಕೆಲ ವರದಿಗಳ ಪ್ರಕಾರ, ಲತಾ ಮಂಗೇಶ್ಕರ್ ಅವರ ಆಸ್ತಿ 108-115 ಕೋಟಿ ರೂಪಾಯಿ. ಆದರೆ, ಕೆಲವೆಡೆ ಲತಾ ಮಂಗೇಶ್ಕರ್ ಅವರ ಆಸ್ತಿ 360 ಕೋಟಿ ರೂಪಾಯಿ ಎಂದು ವರದಿಯಾಗಿದೆ.
ಏಳುವರೆ ದಶಕದ ಶ್ರಮ
ಏಳುವರೆ ದಶಕಗಳ ಕಾಲ ಬಿಡುವಿಲ್ಲದೆ ದುಡಿದ ಶ್ರಮದ ಪ್ರತಿಫಲವಾಗಿ ಗಾಯಕಿ ಲತಾ ಮಂಗೇಶ್ಕರ್ ಬಹು ಕೋಟಿ ರೂಪಾಯಿ ಆಸ್ತಿಗೆ ಒಡತಿಯಾಗಿದ್ದರು. ಆದರೆ, ತಮ್ಮ ಜೀವಿತಾವಧಿಯಲ್ಲಿ ಲತಾ ಮಂಗೇಶ್ಕರ್ ಮದುವೆಯಾಗಿರಲಿಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಲತಾ ಮಂಗೇಶ್ಕರ್ ಜೀವನ ಪರ್ಯಂತ ಅವಿವಾಹಿತೆಯಾಗಿಯೇ ಉಳಿದಿದ್ದರು.
ಒಡಹುಟ್ಟಿದವರಾದ ಮೀನಾ, ಆಶಾ ಭೋಂಸ್ಲೆ, ಉಷಾ ಮಂಗೇಶ್ಕರ್ ಮತ್ತು ಹೃದಯನಾಥ್ ಮಂಗೇಶ್ಕರ್ ಜೊತೆ ಲತಾ ಮಂಗೇಶ್ಕರ್ ಸಂಬಂಧ ಉತ್ತಮವಾಗಿಯೇ ಇತ್ತು. ಲತಾ ಮಂಗೇಶ್ಕರ್ ಅವರ ಅಂತ್ಯಸಂಸ್ಕಾರದ ವೇಳೆ ಅಂತಿಮ ವಿಧಿವಿಧಾನಗಳನ್ನ ಸಹೋದರ ಹೃದಯನಾಥ್ ಮಂಗೇಶ್ಕರ್ ಅವರೇ ನೆರವೇರಿಸಿದ್ದರು. ಹೀಗಾಗಿ, ಲತಾ ಮಂಗೇಶ್ಕರ್ ಅವರ ಬಹುಕೋಟಿ ಆಸ್ತಿ ಒಡಹುಟ್ಟಿದವರ ಪಾಲಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಕೆಲ ವರದಿಗಳ ಪ್ರಕಾರ, ಲತಾ ಮಂಗೇಶ್ಕರ್ ಅವರ ಆಸ್ತಿ ಟ್ರಸ್ಟ್ ಪಾಲಾಗಲಿದೆ. ತಮ್ಮ ತಂದೆಯ ಹೆಸರಿನಲ್ಲಿ ಲತಾ ಮಂಗೇಶ್ಕರ್ ಟ್ರಸ್ಟ್‌ವೊಂದನ್ನು ಸ್ಥಾಪಿಸಿದ್ದರಂತೆ. ಟ್ರಸ್ಟ್ ಮೂಲಕವೇ ಸಾಮಾಜಿಕ ಕಾರ್ಯಗಳಲ್ಲಿ ಲತಾ ಮಂಗೇಶ್ಕರ್ ತೊಡಿಗಿದ್ದರು. ಇದೀಗ ಲತಾ ಮಂಗೇಶ್ಕರ್ ಅವರ ಆಸ್ತಿ ಟ್ರಸ್ಪ್ ಪಾಲಾಗಲಿದ್ದು, ಸಮಾಜದ ಒಳತಿಗೆ ಅದನ್ನ ಉಪಯೋಗಿಸಿಕೊಳ್ಳಲಾಗುವುದು ಎಂಬ ಮಾತುಗಳು ಸಹ ಕೇಳಿಬರುತ್ತಿದೆ.
Read more
[wpas_products keywords=”deal of the day party wear dress for women stylish indian”]