Karnataka news paper

ಮೆಗಾ ಆಕ್ಷನ್‌ನಲ್ಲಿ ಸಿಎಸ್‌ಕೆ ಖರೀದಿಸುವ ಆಟಗಾರರನ್ನು ಹೆಸರಿಸಿದ ಚೋಪ್ರಾ!


ಬೆಂಗಳೂರು: ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತನ್ನ ಅತ್ಯಂತ ಹೀನಾಯ ಪ್ರದರ್ಶನ ನೀಡಿ 2020ರ ಆವೃತ್ತಿಯಲ್ಲಿ ಅಂಕಪಟ್ಟಿಯ ಕೊನೆಯ ಸ್ಥಾನ ಪಡೆದಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಫೀನಿಕ್ಸ್‌ ಪಕ್ಷಿಯಂತೆ ಪುಟಿದೆದ್ದು, 2021ರ ಆವೃತ್ತಿಯಲ್ಲಿ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿತ್ತು.

ಕೋಲ್ಕತಾ ನೈಟ್‌ ರೈಡರ್ಸ್‌ ಎದುರು ಭರ್ಜರಿ ಜಯ ದಾಖಲಿಸುವ ಮೂಲಕ ಲೀಗ್‌ ಇತಿಹಾಸದಲ್ಲಿ ತನ್ನ 4ನೇ ಟ್ರೋಫಿ ಗೆದ್ದು ಬೀಗಿದ ಎಂಎಸ್‌ ಧೋನಿ ಬಳಗ, ಇದೀಗ ಐಪಿಎಲ್‌ 2022 ಟೂರ್ನಿಯಲ್ಲಿ ಟ್ರೋಫಿ ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ.

ಅಂದಹಾಗೆ ಸಿಎಸ್‌ಕೆ ತಂಡದ ಈ ಹಾದಿ ಅಷ್ಟು ಸುಲಭದ್ದಲ್ಲ. ಏಕೆಂದರೆ ತಂಡಕ್ಕೆ ಕಳೆದ ಬಾರಿ ಜಯ ತಂದ ಆಟಗಾರರನ್ನು ಮೆಗಾ ಆಕ್ಷನ್‌ ಸಲುವಾಗಿ ಬಿಟ್ಟುಕೊಡುವಂತ್ತಾಗಿದ್ದು, ಹರಾಜಿನಲ್ಲಿ ಅದೇ ಆಟಗಾರರನ್ನು ಮರಳಿ ಪಡೆಯುವುದು ಬಹುತೇಕ ಅಸಾಧ್ಯ.

ಮೆಗಾ ಆಕ್ಷನ್‌: ಮಾರಾಟವಾಗದೇ ಉಳಿಯಬಲ್ಲ ಟಾಪ್ 4 ಭಾರತೀಯರು!

ರವೀಂದ್ರ ಜಡೇಜಾ, ಎಂಎಸ್‌ ಧೋನಿ, ಮೊಯೀನ್‌ ಅಲಿ ಮತ್ತು ಋತುರಾಜ್‌ ಗಾಯಕ್ವಾಡ್‌ ಅವರನ್ನು ಉಳಿಸಿಕೊಂಡಿರುವ ಸಿಎಸ್‌ಕೆ, ಹರಾಜಿನಲ್ಲಿ ಉಳಿದ 20 ಆಟಗಾರರ ಖರೀದಿಗೆ 9 ಫ್ರಾಂಚೈಸಿಗಳ ಎದುರು ಪೈಪೋಟಿ ನಡೆಸಲಿದೆ. ಈ ಕುರಿತಾಗಿ ಮಾತನಾಡಿರುವ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಐಪಿಎಲ್‌ ಆಟಗಾರರ ಹರಾಜಿನಲ್ಲಿ ಸಿಎಸ್‌ಕೆ ಗುರಿಯಾಗಿಸಲಿರುವ ಪ್ರಮುಖ ಆಟಗಾರರನ್ನು ಹೆಸರಿಸಿದ್ದಾರೆ. ಚೆನ್ನೈ ಈ ಬಾರಿಯೂ ಅನುಭವಿಗಳಿಗೆ ಮಣೆ ಹಾಕಲಿದೆ ಎಂದಿದ್ದಾರೆ.

“ಖಂಡಿತಾ ಈ ಬಾರಿಯೂ ಅನುಭವಿಗಳ ಮೇಲೆ ಕಣ್ಣಿಡಲಾಗಿದೆ. ಚೆನ್ನೈ ತಂಡದ ರಣತಂತ್ರ ಮತ್ತು ಆಲೋಚನೆ ಇದೇ ಆಗಿದೆ. ಧೋನಿಗೆ ಅನುಭವಿ ಆಟಗಾರರೇ ಇಷ್ಟ. ಹೀಗಾಗಿ ಯುವ ಆಟಗಾರರ ಹಿಂದೆ ಬಿದ್ದು ಹಣದ ಹೊಳೆ ಹರಿಸುವ ಗೋಜಿಗೆ ಬೀಳುವುದಿಲ್ಲ. ಗೊತ್ತಿಲ್ಲದ ಆಟಗಾರರಿಗಿಂತ, ಗೊತ್ತಿರುವ ಆಟಗಾರರನ್ನು ನಿಭಾಯಿಸುವುದು ಉತ್ತಮ ಎಂಬುದನ್ನು ಬಲವಾಗಿ ನಂಬಿರುವ ತಂಡ,” ಎಂದು ಚೋಪ್ರಾ ಹೇಳಿದ್ದಾರೆ.

ಆಲ್‌ರೌಂಡರ್‌ ಖರೀದಿಗೆ ಹಣದ ಹೊಳೆ ಹರಿಸಲು ಸಜ್ಜಾದ ಆರ್‌ಸಿಬಿ!

ನಾಲ್ಕು ಆಟಗಾರರನ್ನು ಉಳಿಸಿಕೊಂಡ ಸಿಎಸ್‌ಕೆ ದೀಪಕ್‌ ಚಹರ್‌, ಶಾರ್ದುಲ್‌ ಠಾಕೂರ್‌, ಜಾಶ್‌ ಹೇಝಲ್‌ವುಡ್‌, ಸ್ಯಾಮ್‌ ಕರ್ರನ್‌, ಡ್ವೇನ್‌ ಬ್ರಾವೋ, ಫಾಫ್‌ ಡು’ಪ್ಲೆಸಿಸ್‌, ಮತ್ತು ಲುಂಗಿ ಎನ್ಗಿಡಿ ಅವರಂತಹ ತಾರೆಗಳನ್ನು ಹರಾಜಿಗೆ ಬಿಟ್ಟುಕೊಟ್ಟಿದೆ. ಇವರನ್ನು ಕಂಡಿತಾ ಮರಳಿ ಖರೀದಿಸುವ ಪ್ರಯತ್ನ ಮಾಡಲಿರುವ ಸಿಎಸ್‌ಕೆ, ಸುರೇಶ್‌ ರೈನಾ ಅವರನ್ನು ಖರೀದಿಸಲು ಹಿಂದೇಟಾಕಲಿದೆ ಎಂದು ಆಕಾಶ್‌ ಅಭಿಪ್ರಾಯ ಪಟ್ಟಿದ್ದಾರೆ.

“ಸಿಎಸ್‌ಕೆ ಈ ಬಾರಿ ಸ್ಟೀವ್‌ ಸ್ಮಿತ್‌ ಖರೀದಿಗೆ ಆಸಕ್ತಿ ತೋರಿದರೆ ಅಚ್ಚರಿಯಿಲ್ಲ. ಇನ್ನು ಡೇವಿಡ್‌ ವಾರ್ನರ್‌ ತಂಡಕ್ಕೆ ಹೊಂದಿಕೊಳ್ಳುವುದಿಲ್ಲ. ಫಾಫ್‌ ಡು’ಪ್ಲೆಸಿಸ್‌ ಅವರನ್ನು ಸಿಎಸ್‌ಕೆ ಮರಳಿ ಖರೀದಿಸಬಹುದು. ಇವರ ಹೊರತಾಗಿ ಆರ್‌ ಅಶ್ವಿನ್‌ ಮತ್ತು ಶಕಿಬ್‌ ಅಲ್‌ ಹಸನ್‌ ಅವರನ್ನು ಖರೀದಿಸುವ ಸಾಧ್ಯತೆ ಇದೆ. ದಿನೇಶ್‌ ಕಾರ್ತಿಕ್‌ ಕಡೆಗೂ ಕಣ್ಣಿಟ್ಟಿದೆ ಎನ್ನಬಹುದು,” ಎಂದಿದ್ದಾರೆ.



Read more

[wpas_products keywords=”deal of the day gym”]