ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮ ಪಂಚಾಯತ್‌ನಲ್ಲಿ ನರೇಗಾ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಹಲವರು ಆರೋಪಿಸುತ್ತಿದ್ದಾರೆ. ಕಳೆದ ವರ್ಷದ ನರೇಗಾ ಯೋಜನೆಯಲ್ಲಿ ಸುಮಾರು 60 ಸಾವಿರ ರೂಪಾಯಿ ಖರ್ಚು ಮಾಡಿ ಕೃಷಿ ಹೊಂಡವನ್ನು ಮಂಗಳೂರಿನ ಮಂಜುನಾಥ ಕಂಬಾರ ಎಂಬುವವರು ನಿರ್ಮಿಸಿಕೊಂಡಿದ್ದಾರೆ. ಕೃಷಿ ಹೊಂಡ ನಿರ್ಮಾಣಕ್ಕಾಗಿ ಅವರು ತಮ್ಮ ಪತ್ನಿಯ ಆಭರಣಗಳನ್ನು ಸಹ ಒತ್ತೆ ಇಟ್ಟಿದ್ದಾರೆ. ಈಗ ಕೃಷಿ ಹೊಂಡದ ಹಣ ಗ್ರಾಮ ಪಂಚಾಯತ್ ನೀಡಿದರೆ ಮಾತ್ರ ಒತ್ತೆ ಇಟ್ಟಿರುವ ಆಭರಣ ಬಿಡಿಸಿಕೊಳ್ಳಬಹುದು. ಆದ್ರೆ, ಹಣ ನೀಡಲು ಸತಾಯಿಸುತ್ತಿದ್ಧಾರೆ ಎನ್ನಲಾಗಿದೆ. ಹೀಗಾಗಿ, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಹಣ ನೀಡಿ ಮನವಿ ಸಲ್ಲಿಸಿದ್ದಾರೆ.
ಹಲವು ಬಾರಿ ಮನವಿ ಸಲ್ಲಿಸಿದ ಮಂಜುನಾಥ ಕಂಬಾರ, ಈಗ ಬೇಸತ್ತು ನೀವು ಕೂಲಿಕಾರರ ಹಣ ನೀಡದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅದಕ್ಕೆ ನೀವೇ ಕಾರಣರಾಗುತ್ತಿರಿ ಎಂದು ಮನವಿ ಪತ್ರವನ್ನು ಫೆಬ್ರುವರಿ 2 ರಂದು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗೆ ನೀಡಿದ್ದಾರೆ. ಈ ಮನವಿ ಪತ್ರವನ್ನು ಪಿಡಿಒ ಸ್ವೀಕಾರ ಮಾಡಿದ್ದಾರೆ. ಮನವಿ ಪತ್ರದಲ್ಲಿ ಸ್ವಿಕೃತಿ ಕುರಿತು ಪಿಡಿಒ ಮೊಹರು ಹಾಕಿ ಸಹಿ ಮಾಡಿದ್ದಾರೆ. ಪಿಡಿಒ ಕ್ರಮಕ್ಕೆ ಜನತೆ ಆಕ್ರೋಶ ವ್ಯಕ್ತಪಡಿಸಿದ್ದು, ಕೂಲಿಕಾರ ಆತ್ಮಹತ್ಯೆ ಮಾಡಿಕೊಳ್ಳಬೇಕಾ ಎಂದು ಕೇಳುತ್ತಿದ್ದಾರೆ.
ಒಂದೆಡೆ ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ಹಣ ಪಾವತಿಸುತ್ತಿಲ್ಲ. ಇನ್ನೊಂದೆಡೆ ಹಣ ಪಾವತಿಸಿ ಎಂದು ಕೇಳಿದರೆ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಜನತೆ ಆಗ್ರಹಿಸಿದ್ದಾರೆ.
Read more
[wpas_products keywords=”deal of the day sale today offer all”]