Karnataka news paper

ಹಿರಿಯೂರಿನಲ್ಲಿ ಮರಕ್ಕೆ ಕಾರು ಡಿಕ್ಕಿ: ಒಂದೇ ಕುಟುಂಬದ ಮೂವರ ದುರ್ಮರಣ..


ಹಿರಿಯೂರು (ಚಿತ್ರದುರ್ಗ): ಮದುವೆ ಮುಗಿಸಿಕೊಂಡು ವಾಪಸ್‌ ತನ್ನೂರಿಗೆ ಹೋಗುತ್ತಿದ್ದಾಗ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತ ಪಟ್ಟಿದ್ದು, ಓರ್ವ ಬಾಲಕಿ ಗಾಯಗೊಂಡ ದುರಂತ ಘಟನೆ ಮಂಗಳವಾರ ಹಿರಿಯೂರು ತಾಲೂಕಿನ ಬೀರೆನಹಳ್ಳಿ ಗ್ರಾಮದ ಸಮೀಪ ನಡೆದಿದೆ.

ಬೆಂಗಳೂರಿನ ಆರ್‌. ಆರ್‌. ನಗರ ನಿವಾಸಿಗಳಾದ ವಿಶಾಲಾಕ್ಷಿ (70), ರೇಣುಕಾ ದೇವಿ (39) ಹಾಗೂ ಸುಧಿಕ್ಷಾ (17) ಮೃತರು. ಬಾಲಕಿ ಪ್ರತಿಕ್ಷಾ (13) ಗೆ ಗಂಭೀರ ಗಾಯವಾಗಿದ್ದು, ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಕಂಟಕವಾಗುತ್ತಿದೆ ಹುರುಳಿ ಒಕ್ಕಣೆ..! ಅಪಘಾತವಾದ್ರೆ ಯಾರು ಹೊಣೆ..?
ಇವರು ತಮ್ಮ ಸಂಬಂಧಿಕರ ಮದುವೆಗಾಗಿ ಕಳೆದ ವಾರವೇ ಭದ್ರಾವತಿಗೆ ಹೋಗಿದ್ದರು. ಭಾನುವಾರ ಮದುವೆ ಮುಗಿಸಿಕೊಂಡು, ಮಂಗಳವಾರ ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯೆ ಈ ದುರಂತ ಘಟನೆ ಸಂಭವಿಸಿದೆ.

ಮೃತ ರೇಣುಕಾ ದೇವಿ ಕಾರು ಚಾಲನೆ ಮಾಡುತ್ತಿದ್ದು, ತಾಲೂಕಿನ ಬೀರೆನ ಹಳ್ಳಿ ಗ್ರಾಮದ ಸಮೀಪ ಬಂದಾಗ ಯಾವುದೋ ಪ್ರಾಣಿ ಅಡ್ಡ ಬಂದಿದ್ದನ್ನು ತಪ್ಪಿಸಲು ಹೋಗಿ ರಸ್ತೆಯ ಪಕ್ಕದಲ್ಲಿದ್ದ ಮರಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ಅಲ್ಲಿದ್ದ ಬೈಕ್‌ ಸವಾರರು ಹೋಗಿ ನೋಡಿದಾಗ ಮೂವರು ಮೃತಪಟ್ಟಿರುವುದು ತಿಳಿದಿದೆ.

ಬಾಲಕಿ ಪ್ರತಿಕ್ಷಾ ಮಾತ್ರ ಪ್ರಜ್ಞೆ ತಪ್ಪಿರುವುದು ಕಂಡು ಬಂದಿದೆ. ತಕ್ಷಣವೇ ಪೊಲೀಸ್‌ ಹಾಗೂ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆ್ಯಂಬುಲೆನ್ಸ್‌ ಮೂಲಕ ಬಾಲಕಿಯನ್ನು ಸರಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಷಯ ತಿಳಿದ ಕೂಡಲೇ ಆಸ್ಪತ್ರೆಗೆ ಬಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

Viral Video: ಕೂದಲೆಳೆ ಅಂತರದಲ್ಲಿ ವಿದ್ಯಾರ್ಥಿಯ ಜೀವ ಉಳಿಸಿದ ಪೊಲೀಸ್: ಹೃದಯ ಬಡಿತ ಹೆಚ್ಚಿಸುತ್ತದೆ ಈ ಅಪಘಾತ!
ಮೊಮ್ಮಗಳಿಗೆ ಏನೆಂದು ಹೇಳಲಿ

ಸರ್‌ ನಾವೆಲ್ರೂ ಸಂಬಂಧಿಕರ ಮದುವೆಗೆ ಭದ್ರಾವತಿಗೆ ಹೋಗಿದ್ದೆವು. ಭಾನುವಾರ ಮದುವೆ ಮಗಿಸಿಕೊಂಡು ನಾನು, ನನ್ನ ಪತ್ನಿ, ಮಗ ಬೆಂಗಳೂರಿಗೆ ವಾಪಸ್‌ ಬಂದೆವು. ಆದರೆ ನಮ್ಮ ಸೊಸೆ ಹಾಗೂ ಮೊಮ್ಮಕ್ಕಳು ತವರು ಮನೆಯಲ್ಲಿ ಒಂದು ದಿನವಿದ್ದು ಬರುತ್ತೇವೆಂದು ಹೇಳಿದ್ದರು. ಆದರೆ ಬೆಳಗ್ಗೆ ಬರುತ್ತೇವೆಂದು ಹೇಳಿದವರು ಇಂದು ಮೃತರಾಗಿದ್ದಾರೆ. ನಮ್ಮ ಮೊಮ್ಮಗಳಿಗೆ ಅಮ್ಮ ಎಲ್ಲಿ ಎಂದರೆ ಏನು ಹೇಳಲಿ? ಎಂದು ಮೃತ ರೇಣುಕಾ ಮಾವ ಜೈರಾಜ್‌ ಅಳಲು ತೊಡಿಕೊಂಡರು.

ಜೋರಾದ ಶಬ್ದ ಕೇಳಿಸಿತಷ್ಟೆ

ಮುಂಜಾನೆ 4.30ಕ್ಕೆ ಭದ್ರಾವತಿಯಿಂದ ಬೆಂಗಳೂರಿಗೆ ಕಾರಿನಲ್ಲಿ ನನ್ನ ತಾಯಿ (ರೇಣುಕಾದೇವಿ) ಅಕ್ಕ (ಸುಧಿಕ್ಷಾ) ಮತ್ತು ಅಜ್ಜಿ (ವಿಶಾಲಾಕ್ಷಿ) ಹೊರಟಿದ್ದೆವು. ನಾನು ನಿದ್ದೆ ಮಾಡುತ್ತಿದ್ದೆ. ಇದ್ದಕ್ಕಿದ್ದಂತೆ ಜೋರಾದ ಶಬ್ದ ಕೇಳಿಸಿತು ಅಷ್ಟೇ, ಮತ್ತೇನಾಯಿತು ನನಗೆ ಗೊತ್ತಿಲ್ಲ. ನಾನು ಎದ್ದು ನೋಡಿದಾಗ ಆಸ್ಪತ್ರೆಯಲ್ಲಿದ್ದೆ ಎನ್ನುತ್ತಾರೆ ಗಾಯಾಳು ಪ್ರತಿಕ್ಷಾ (ರೇಣುಕಾ ದೇವಿ ಮಗಳು).

Viral Video: ಅಯ್ಯೋ…! ವೇಗವಾಗಿ ಬಂದು ಟ್ರ್ಯಾಕ್ಟರ್‌ಗೆ ಡಿಕ್ಕಿಯಾಗುವ ಟ್ರಕ್: ಬೆಚ್ಚಿಬೀಳಿಸುವಂತಿದೆ ಈ ದೃಶ್ಯ



Read more

[wpas_products keywords=”deal of the day sale today offer all”]