ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಸೇನೆ, ಫೆ.6 ರಂದು ಅರುಣಾಚಲ ಪ್ರದೇಶದ ಕಮೆಂಗ್ ಸೆಕ್ಟರ್‌ನ ಎತ್ತರದ ಪ್ರದೇಶದಲ್ಲಿ ಸಂಭವಿಸಿದ ಹಿಮಪಾತದಲ್ಲಿ ನಮ್ಮ ಏಳು ಯೋಧರು ಹುತಾತ್ಮರಾಗಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಸದ್ಯ ಹುತಾತ್ಮರಾದ ಏಳೂ ಸೈನಿಕರ ಶವಗಳನ್ನು ಪತ್ತೆ ಹಚ್ಚಲಾಗಿದ್ದು, ಶೀಘ್ರದಲ್ಲೇ ಅವರ ಕುಟುಂಬ ವರ್ಗಕ್ಕೆ ಹಸ್ತಾಂತರಿಸಲಾಗುವುದು ಎಂದು ಸೇನೆ ತಿಳಿಸಿದೆ.
ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಹಿಮಪಾತ ಸಂಭವಿಸಿದೆ. ಸುದ್ದಿ ತಿಳಿದ ಕೂಡಲೇ ಮತ್ತೊಂದು ಯೋಧರ ತಂಡವನ್ನು ರಕ್ಷಣೆಗಾಗಿ ಕಳುಹಿಸಿಕೊಡಲಾಗಿತ್ತು. ಆದರೆ ಪ್ರತಿಕೂಲ ಹವಾಮಾನದ ಕಾರಣ ರಕ್ಷಣಾ ಕಾರ್ಯಾಚರಣೆಗೆ ತೊಡಕಾಯಿತು. ಹಿಮಪಾತದಲ್ಲಿ ನಮ್ಮ ಏಳು ಯೋಧರು ಹುತಾತ್ಮರಾಗಿರುವುದು ನೋವಿನ ಸಂಗತಿ ಎಂದು ಸೇನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
14,500 ಅಡಿ ಎತ್ತರದಲ್ಲಿರುವ ಈ ಪ್ರದೇಶವು ಕಳೆದ ಕೆಲವು ದಿನಗಳಿಂದ ಭಾರೀ ಹಿಮಪಾತದೊಂದಿಗೆ ಪ್ರತಿಕೂಲ ಹವಾಮಾನಕ್ಕೆ ಸಾಕ್ಷಿಯಾಗಿದೆ. ಸದ್ಯ ಸೈನಿಕರ ಮೃತದೇಹಗಳನ್ನು ಸೇನಾ ವೈದ್ಯಕೀಯ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಮಿಲಿಟರಿ ಗೌರವದ ಬಳಿಕ ಅವರ ಕುಟುಂಬ ವರ್ಗಕ್ಕೆ ಹಸ್ತಾಂತರಿಸಲಾಗುವುದು ಎಂದು ಸೇನಾ ಮೂಲಗಳು ಖಚಿತಪಡಿಸಿವೆ.
ಅರುಣಾಚಲ ಪ್ರದೇಶದ ಎತ್ತರದ ಪ್ರದೇಶಗಳಲ್ಲಿ ಸೈನಿಕರು ವಾಡಿಕೆಯಂತೆ ಗಸ್ತು ತಿರುಗುತ್ತಾರೆ. ಯೋಧರು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳನ್ನು ಎದುರಿಸುವುದು ಸಾಮಾನ್ಯ.
Read more
[wpas_products keywords=”deal of the day sale today offer all”]