Karnataka news paper

ಬಡವರಿಗೆ ಯಾರೂ ಸಹಾಯ ಮಾಡಬಾರದು ಎನ್ನುವುದು ಪ್ರಧಾನಿ ಮೋದಿ ಬಯಕೆಯೇ?: ಪ್ರಿಯಾಂಕಾ ಪ್ರಶ್ನೆ


ಪಣಜಿ: ಮಹಾರಾಷ್ಟ್ರದಲ್ಲಿನ ವಲಸೆ ಕಾರ್ಮಿಕರಿಗೆ ಕಾಂಗ್ರೆಸ್ ಉಚಿತ ಟ್ರೈನ್ ಟಿಕೆಟ್‌ಗಳನ್ನು ನೀಡಿ ಅವರನ್ನು ರಾಜ್ಯದಿಂದ ಹೊರಗೆ ಕಳುಹಿಸುವ ಮೂಲಕ ಪಂಜಾಬ್, ಉತ್ತರಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಕೋವಿಡ್ ಪ್ರಕರಣಗಳನ್ನು ಹರಡಲು ಕಾರಣವಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ವಿರುದ್ಧ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ. ಬರಿಗಾಲಲ್ಲಿ ತಮ್ಮ ಮನೆಗಳಿಗೆ ಮರಳುತ್ತಿದ್ದ ಬಡವರನ್ನು ಅಸಹಾಯಕರನ್ನಾಗಿ ಬಿಡಲು ಪ್ರಧಾನಿ ಬಯಸಿದ್ದರು ಎನಿಸುತ್ತದೆ ಎಂದು ಅವರು ಹೇಳಿದ್ದಾರೆ.

ಗೋವಾ ವಿಧಾನಸಭೆ ಚುನಾವಣೆಗೆ ಪ್ರಚಾರ ನಡೆಸುತ್ತಿರುವ ಅವರು ಸುದ್ದಿಗಾರರೊಂದಿಗೆ ಮಂಗಳವಾರ ಪಣಜಿಯಲ್ಲಿ ಮಾತನಾಡಿದರು. “ಅವರು ತ್ಯಜಿಸಿದ್ದ ಜನರು, ತಮ್ಮ ಮನೆಗಳಿಗೆ ಮರಳಲು ಯಾವ ಮಾರ್ಗವೂ ಇಲ್ಲದವರು, ಬರಿಗಾಲಲ್ಲಿ ವಾಪಸ್ ಬರುತ್ತಿದ್ದವರು- ಯಾರೊಬ್ಬರೂ ಅವರಿಗೆ ಸಹಾಯ ಮಾಡಬಾರದು ಎಂದು ಅವರು ಬಯಸಿದ್ದಾರೆಯೇ? ಮೋದಿ ಅವರು ಏನನ್ನು ಬಯಸಿದ್ದರು? ಅವರು ಏನನ್ನು ಬಯಸಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.
ಸೋಂಕು ಹರಡಲು ದಿಲ್ಲಿ, ಮಹಾರಾಷ್ಟ್ರ ಕಾರಣ ಎಂದ ಪ್ರಧಾನಿ: ಟ್ವಿಟ್ಟರ್‌ನಲ್ಲಿ ಕೇಜ್ರಿವಾಲ್ Vs ಯೋಗಿ ಕಿತ್ತಾಟ

“ಹಾಗಾದರೆ ಅವರು ನಡೆಸಿದ ಬೃಹತ್ ಸಮಾವೇಶಗಳ ಬಗ್ಗೆ ಏನು?” ಕೋವಿಡ್ ಸಂದರ್ಭದಲ್ಲಿ ಸಮಾವೇಶಗಳನ್ನು ನಡೆಸುವ ಮೂಲಕ ಸೋಂಕು ಹರಡಲು ಕಾರಣರಾಗಿದ್ದರು ಎಂದು ಪ್ರಧಾನಿ ಮೋದಿ ವಿರುದ್ಧ ಆರೋಪ ಮಾಡಿದ್ದಾರೆ.

“ಕೋವಿಡ್ 19 ಮೊದಲ ಅಲೆ ವೇಳೆ ಕಾಂಗ್ರೆಸ್ ಎಲ್ಲ ಮಿತಿಗಳನ್ನೂ ಮಿರಿತ್ತು. ಮೊದಲ ಅಲೆ ಸಂದರ್ಭದಲ್ಲಿ ದೇಶವು ಲಾಕ್‌ಡೌನ್‌ನಲ್ಲಿ ಇದ್ದಾಗ ಮತ್ತು ಎಲ್ಲರೂ ಎಲ್ಲಿ ಇದ್ದಾರೋ ಅಲ್ಲಿಯೇ ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡುತ್ತಿದ್ದಾಗ, ಕಾಂಗ್ರೆಸ್ ಮುಂಬಯಿ ರೈಲ್ವೆ ನಿಲ್ದಾಣಕ್ಕೆ ತೆರಳಿ ಅಮಾಯಕ ಜನರನ್ನು ಹೆದರಿಸುವ ಕೆಲಸ ಮಾಡಿತ್ತು. ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ವಾಪಸ್ ಹೋಗುವಂತೆ ನೂಕಿದ್ದರು. ಅದರ ಪರಿಣಾಮವಾಗಿ ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಕೋವಿಡ್ ವೇಗವಾಗಿ ಹರಡಿತ್ತು. ಇದು ಅವರು ಮಾಡಿದ ದೊಡ್ಡ ಪಾಪ” ಎಂದು ಮೋದಿ ಸಂಸತ್‌ನಲ್ಲಿ ಆರೋಪಿಸಿದ್ದರು.

“ನೀವು ಕಾರ್ಮಿಕರನ್ನು ಬಿಕ್ಕಟ್ಟಿಗೆ ನೂಗಿದ್ದಿರಿ. ದಿಲ್ಲಿಯಲ್ಲಿ, ಸರ್ಕಾರವು ಕೊಳೆಗೇರಿಗಳ ಸುತ್ತಲೂ ಜೀಪ್‌ಗಳಲ್ಲಿ ತೆರಳಿ, ಮನೆಗೆ ಹೋಗಲು ಬಯಸಿದವರಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮೈಕ್‌ಗಳಲ್ಲಿ ಕೂಗುತ್ತಿದ್ದರು. ಇದರ ಬಳಿಕ ಕೊರೊನಾ ವೈರಸ್ ಹೆಚ್ಚು ವ್ಯಾಪಿಸದೆ ಇದ್ದ ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಸೋಂಕು ಹೆಚ್ಚಾಯಿತು. ಇದು ಯಾವ ರೀತಿಯ ರಾಜಕಾರಣ? ಇಂತಹ ರಾಜಕಾರಣ ಎಷ್ಟು ಸಮಯ ಮುಂದುವರಿಯುತ್ತದೆ? ಕಾಂಗ್ರೆಸ್‌ನ ವರ್ತನೆಯಿಂದ ಇಡೀ ದೇಶಕ್ಕೆ ಆಘಾತವಾಗಿದೆ” ಎಂದು ಹೇಳಿದ್ದರು.

“ಈಗ ಕಾಂಗ್ರೆಸ್ ತಾನು ಮುಂದಿನ ನೂರು ವರ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಿದೆ. ಪಕ್ಷವು ತನ್ನ ‘ಒಡೆದು ಆಳುವ ನೀತಿ’ಯನ್ನು ಅವಲಂಬಿಸಿತ್ತು ಮತ್ತು ‘ತುಕ್ಡೆ ತುಕ್ಡೆ ಗ್ಯಾಂಗ್’ನ ನಾಯಕನಾಗಿತ್ತು” ಎಂದು ಟೀಕಿಸಿದ್ದರು.



Read more

[wpas_products keywords=”deal of the day sale today offer all”]