ಬೆಂಗಳೂರು: ‘ಜ್ಞಾನವನ್ನು ಉದ್ದೀಪಿಸುವ ಶೈಕ್ಷಣಿಕ ಕೇಂದ್ರಗಳಲ್ಲಿ ಅಶಾಂತಿ ವಾತಾವರಣಕ್ಕೆ ಕಾರಣರಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಶಾಲಾ ಕಾಲೇಜುಗಳು ರಾಷ್ಟ್ರದ ಭಾವೈಕ್ಯತೆಯ ಕೇಂದ್ರ ಬಿಂದುಗಳು. ರಾಷ್ಟ್ರದ ಆಸ್ತಿಯಾಗಬೇಕಾದ ವಿದ್ಯಾರ್ಥಿಗಳು ಮತೀಯ ಶಕ್ತಿಗಳ ಕೈಯಲ್ಲಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಅಸ್ತ್ರ ಆಗದಂತೆ ಪೋಷಕರು ಎಚ್ಚರ ವಹಿಸಬೇಕು’ ಎಂದೂ ಮನವಿ ಮಾಡಿದರು.
‘ಶೈಕ್ಷಣಿಕ ಕೇಂದ್ರಗಳು, ವಿದ್ಯೆ ಕಲಿಯುವ ಹಾಗೂ ಬೋಧನೆಯ ದೇಗುಲಗಳಾಗಿಯೇ ಉಳಿಯಬೇಕು’ ಎಂದೂ ಹೇಳಿದರು.
ಇದನ್ನೂ ಓದಿ–ಮಂಡ್ಯದ ಪಿಇಎಸ್ ಪದವಿ ಕಾಲೇಜು ಆವರಣದಲ್ಲಿ ಕೇಸರಿ ಶಾಲು–ಹಿಜಾಬ್ ತಿಕ್ಕಾಟ
Read more from source
[wpas_products keywords=”deal of the day sale today kitchen”]