Karnataka news paper

ಬ್ಯಾಟ್ ಆ್ಯಂಡ್ ಬಾಲ್ ಮೂಲಕ ಟೇಬಲ್ ಟೆನಿಸ್ ಆಡಿದ ರಾಜ್ಯದ ಇಂಜಿನಿಯರಿಂಗ್ ವಿದ್ಯಾರ್ಥಿ: ಹೊಸ ದಾಖಲೆ ಸೃಷ್ಟಿ!


The New Indian Express

ತುಮಕೂರು: ಬ್ಯಾಂಡ್ ಆ್ಯಂಡ್ ಬಾಲ್ ಮೂಲಕ ಟೇಬಲ್ ಟೆನಿಸ್ ನ್ನು ಅತೀ ವೇಗವಾಗಿ ಆಡಿದ ತುಮಕೂರಿನ ಸಿದ್ದಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಸ್‌ಐಟಿ) ಇಂಜಿನಿಯರಿಂಗ್ ವಿದ್ಯಾರ್ಥಿ ಈಶ್ವರ್ ಎನ್ ಅವರು ಹೊಸ ಗಿನ್ನಿಸ್ ದಾಖಲೆಯನ್ನು ನಿರ್ಮಿಸಿದ್ದಾರೆ. 

ಈಶ್ವರ್ ಅವರು ಸ್ಪೇನ್‌ನ ಯುಂಕೋಸ್‌ನ ಕ್ರಿಶ್ಚಿಯನ್ ರಾಬರ್ಟೊ ಲೋಪೆಜ್ ರೊಡ್ರಿಗಸ್ ಅವರ ಹಿಂದಿನ 6 ನಿಮಿಷ 24.69 ಸೆಕೆಂಡುಗಳ ದಾಖಲೆ ಮುರಿದು 6 ನಿಮಿಷ 16.53 ಸೆಕೆಂಡುಗಳಲ್ಲಿ ಅತ್ಯಂತ ವೇಗದ ಆಟವಾಡಿ  ದಾಖಲೆ ಸೃಷ್ಟಿಸಿದ್ದಾರೆ. 

ಐದನೇ ಸೆಮಿಸ್ಟರ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಈಶ್ವರ್ ಹಲವಾರು ವರ್ಷಗಳಿಂದ ಟೇಬಲ್ ಟೆನ್ನಿಸ್ ಆಡುತ್ತಿದ್ದಾರೆ. 1-2 ವರ್ಷಗಳ ಹಿಂದೆ ಗಿನ್ನೆಸ್ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದ ಬೆಂಗಳೂರಿನ ಎಂ.ಎಸ್.ರಾಮಯ್ಯ ಸಂಸ್ಥೆಯ ಹಳೆಯ ವಿದ್ಯಾರ್ಥಿ ಸುಸ್ಮಿತ್ ರಾಜೇಂದ್ರ ಬಾರಿಗಿಡದ್ ಅವರು ಇವರಿಗೆ ಪ್ರೇರಣೆಯಾಗಿದ್ದಾರೆ. 

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು) ನಡೆಸಿದ ಹಲವು ಪಂದ್ಯಾವಳಿಗಳಲ್ಲಿ ಈಶ್ವರ್ ಮತ್ತು ಸುಸ್ಮಿತ್ ಗೆದ್ದಿದ್ದಾರೆ. ಆದರೆ, ಈಶ್ವರ್ ಅವರಿಗೆ ದೃಷ್ಟಿ ಸಮಸ್ಯೆಯಿದ್ದು ಕನ್ನಡಕವನ್ನು ಧರಿಸಲೇ ಬೇಕಾಗಿದ್ದರಿಂದ ಗಿನ್ನೆಸ್ ದಾಖಲೆಗೆ ನಿರ್ಮಾಣಕ್ಕಾಗಿ ಪ್ರತ್ಯೇಕವಾಗಿ ಸ್ಪರ್ಧೆಗಿಳಿಯಬೇಕಾಯಿತು.

ಈ ದಾಖಲೆ ನಿರ್ಮಿಸಲು ಈಶ್ವರ್ ಅವರು ಸುಮಾರು 1 ವರ್ಷಗಳ ಕಾಲ ತುಮಕೂರು ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಕಠಿಣ ಅಭ್ಯಾಸ ನಡೆಸಿದ್ದರು. 

ವಿಶೇಷವಾಗಿ ಏನ್ನಾದರೂ ದಾಖಲೆ ಸಾಧನೆ ಮಾಡಬೇಕೆಂಬುದು ನನ್ನ ಆಸೆಯಾಗಿತ್ತು. ಬಾಲ್ಯದಿಂದಲೂ ಟೇಬಲ್ ಟೆನ್ನಿಸ್ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದೆ. ಇದೀಗ ರಾಷ್ಟ್ರ ಮಟ್ಟದ ಟೇಬಲ್ ಟೆನಿಸ್ ನಲ್ಲಿ ಭಾಗವಹಿಸಿ ಗೆಲ್ಲುವ ಆಸೆಯಿದೆ ಎಂದು ಈಶ್ವರ್ ಹೇಳಿದ್ದಾರೆ. 



Read more

[wpas_products keywords=”deal of the day”]