ಶ್ರೀನಿ ನಿರ್ದೇಶನದ ‘ಓಲ್ಡ್ ಮಾಂಕ್’ ಸಿನಿಮಾ ಫೆಬ್ರವರಿ 25 ರಂದು ಬಿಡುಗಡೆಯಾಗಲಿದ್ದು, ಇದರ ವಿಶೇಷ ಹಾಡೊಂದರ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ.
ಪ್ರತಿ ಸಿನಿಮಾಗೂ ಪ್ರಚಾರ ಬೇಕೇ ಬೇಕು. ಚಿತ್ರತಂಡಗಳು ಬೇರೆ ಬೇರೆ ರೀತಿಯಲ್ಲಿ ಸಿನಿಮಾ ಪ್ರಚಾರ ಮಾಡುತ್ತವೆ. ಈಗ ಎಂ ಜಿ ಶ್ರೀನಿವಾಸ್ ಅಲಿಯಾಸ್ ಶ್ರೀನಿ ನಿರ್ದೇಶನ ಮಾಡಿ, ನಾಯಕರಾಗಿ ನಟಿಸಿರುವ ‘ಓಲ್ಡ್ ಮಾಂಕ್’ ಸಿನಿಮಾ ಕೂಡ ಆರಂಭದಿಂದಲೇ ತನ್ನ ವಿಶಿಷ್ಟ ರೀತಿಯ ಪ್ರಚಾರದ ಮೂಲಕ ಗಮನ ಸೆಳೆಯುತ್ತಿದೆ. ಈ ಮೊದಲು ಈ ಸಿನಿಮಾದ 3ಡಿ ಪೋಸ್ಟರ್ಗಳನ್ನು ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳಲ್ಲಿ ಇಟ್ಟು ಪ್ರಚಾರ ಮಾಡಲಾಗಿತ್ತು. ಈಗ ‘ಓಲ್ಡ್ ಮಾಂಕ್’ ಚಿತ್ರದ ಹಾಡೊಂದನ್ನು ವಿಭಿನ್ನವಾಗಿ ಮಾಡಲಾಗಿದೆ.
ಹೇಳಿದ ಮಾತಿನಂತೆ ರಿಲೀಸ್ ಡೇಟ್ ಫೈನಲ್ ಮಾಡಿದ ‘ಓಲ್ಡ್ ಮಾಂಕ್’ ಶ್ರೀನಿ
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ‘ಓಲ್ಡ್ ಈಸ್ ಗೋಲ್ಡ್’ ಎಂಬ ಹಾಡಿನಲ್ಲಿ ನಾಯಕ ಶ್ರೀನಿ, ನಾಯಕಿ ಅದಿತಿ ಪ್ರಭುದೇವ ಮತ್ತು ಇತರ ನಟರ ಮುಖಗಳನ್ನು ಹಳೆಯ ಸೂಪರ್ ಹಿಟ್ ಸಿನಿಮಾಗಳ ಪೋಸ್ಟರ್ಗಳಿಗೆ ಅಳವಡಿಸಲಾಗಿದೆ. ‘ನಮಗೆ ಮತ್ತು ನಮ್ಮ ವಯಸ್ಸಿನವರಿಗೆ ಹಳೆ ಸಿನಿಮಾದ ಜತೆಗೆ ತುಂಬಾ ಉತ್ತಮ ಕನೆಕ್ಷನ್ ಇದೆ. ‘ಓಂ’, ‘ರಣಧೀರ’, ‘ಕಸ್ತೂರಿ ನಿವಾಸ’, ‘ಆ್ಯವೆಂಜರ್ಸ್’ ಸೇರಿದಂತೆ ಹಲವು ಸಿನಿಮಾಗಳು ನಮಗೆ ಫೇವರಿಟ್ ಆಗಿದ್ದು, ಇದರ ಪೋಸ್ಟರ್ಗಳನ್ನು ಈ ಹಾಡಿನಲ್ಲಿ ಬಳಸಿಕೊಂಡಿದ್ದೇವೆ. ಇದನ್ನು ನೋಡಿದವರೆಲ್ಲರೂ ಮೆಚ್ಚಿಕೊಂಡಿದ್ದಾರೆ’ ಎಂದು ಶ್ರೀನಿ ಹೇಳಿದ್ದಾರೆ.
ರೇಡಿಯೋ ಜಾಕಿ ಪಾತ್ರ ಒಪ್ಪಿಕೊಂಡ ನಟ ಶ್ರೀನಿ, ಯಾವ ಸಿನಿಮಾ? ಯಾರು ಡೈರೆಕ್ಟರ್?
‘ಈ ಸಿನಿಮಾದಲ್ಲಿ ಇದು ಸಿಚುಯೇಶನಲ್ ಹಾಡು. ಅಲ್ಲಿನ ದೃಶ್ಯಗಳನ್ನು ಆನ್ಲೈನ್ನಲ್ಲಿ ಹಾಕಲು ಸಾಧ್ಯವಾಗದ ಕಾರಣ ವಿಭಿನ್ನವಾಗಿ ಈ ಹಾಡನ್ನು ಬಿಡುಗಡೆ ಮಾಡಬೇಕು ಎಂದು ಈ ರೀತಿ ಮಾಡಿದ್ದೇವೆ. ರಾಪ್ ಮಾದರಿಯ ಈ ಹಾಡನ್ನು ಗುಬ್ಬಿ ಎಂಬುವರು ಬರೆದಿದ್ದು, ಚಂದ್ರಶೇಖರ್ ಗ್ರಾಫಿಕ್ಸ್ ಮಾಡಿದ್ದಾರೆ. ಸೌರಭ್ ವೈಭವ್ ಸಿನಿಮಾಗೆ ಸಂಗೀತ ನೀಡಿದ್ದಾರೆ’ ಎಂದಿದ್ದಾರೆ ಅವರು. ‘ಓಲ್ಡ್ ಈಸ್ ಗೋಲ್ಡ್’ ಹಾಡು ಮಾತ್ರವಲ್ಲದೆ, ಈ ಸಿನಿಮಾದ ‘ರೆವೆಂಜರ್ಸ್’ ಎಂಬ ಹಾಡು ಕೂಡ ಇದೇ ರೀತಿ ವಿಭಿನ್ನವಾಗಿದೆ. ಸುಜಯ್ ಶಾಸ್ತ್ರಿ, ಎಸ್ ನಾರಾಯಣ್, ಸಿಹಿ ಕಹಿ ಚಂದ್ರು ಸೇರಿದಂತೆ ಹಲವು ಪ್ರಮುಖ ನಟರು ಈ ಸಿನಿಮಾದಲ್ಲಿದ್ದಾರೆ.
ಶ್ರೀನಿ-ಅದಿತಿ ಜೋಡಿಯ ‘ಓಲ್ಡ್ ಮಾಂಕ್’ ಟ್ರೇಲರ್ ರಿಲೀಸ್ ಮಾಡಿದ ಪುನೀತ್ ರಾಜ್ಕುಮಾರ್
‘ವಿಭಿನ್ನವಾಗಿ ಸಿನಿಮಾ ಪ್ರಚಾರ ಮಾಡಿದರೆ ಜನರು ಬರುತ್ತಾರೆ ಎಂಬುದು ನನ್ನ ನಂಬಿಕೆ. ‘ಓಲ್ಡ್ ಮಾಂಕ್’ ಸಿನಿಮಾ ಕಂಪ್ಲೀಟ್ ಎಂಟರ್ಟೇನಿಂಗ್. ಇದರ ಕಥೆ, ಹಾಡುಗಳನ್ನು ಸಹ ಅದೇ ರೀತಿಯಲ್ಲಿ ಬಿಡುಗಡೆ ಮಾಡಬೇಕು ಎಂದುಕೊಂಡು ಇಂಥ ವಿಭಿನ್ನ ಐಡಿಯಾಗಳನ್ನು ಮಾಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ ನಟ, ನಿರ್ದೇಶಕ ಶ್ರೀನಿ.
Read more
[wpas_products keywords=”deal of the day party wear dress for women stylish indian”]