Karnataka news paper

ಎಗರ್‌ ಕಮ್‌ಬ್ಯಾಕ್‌; ಪಾಕಿಸ್ತಾನ ಟೆಸ್ಟ್‌ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ!


ಹೊಸದಿಲ್ಲಿ: ಪಾಕಿಸ್ತಾನ ವಿರುದ್ಧ ಮುಂದಿನ ತಿಂಗಳು ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್‌ ಸರಣಿಗೆ ಆಸ್ಟ್ರೇಲಿಯಾ ಟೆಸ್ಟ್‌ ತಂಡವನ್ನು ಪ್ರಕಟಿಸಲಾಗಿದ್ದು, ಗಾಯದಿಂದ ಸಂಪೂರ್ಣ ಗುಣಮುಖರಾಗಿರುವ ಜಾಶ್‌ ಹೇಝಲ್‌ವುಡ್‌ ದೀರ್ಘಾವಧಿ ತಂಡಕ್ಕೆ ಮರಳಿದ್ದಾರೆ.

ಸತತ 25 ವರ್ಷಗಳ ಬಳಿಕ ಇದೇ ಮೊದಲ ಬಾರಿ ಪಾಕಿಸ್ತಾನಕ್ಕೆ ಪ್ರವಾಸ ಮಾಡುತ್ತಿರುವ ಪ್ಯಾಟ್‌ ಕಮಿನ್ಸ್‌ ನಾಯಕತ್ವದ ಆಸ್ಟ್ರೇಲಿಯಾ ತಂಡ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕಾದಾಟ ನಡೆಸಲಿದೆ. ಇಂಗ್ಲೆಂಡ್‌ ವಿರುದ್ಧ 2019ರ ಆಷಸ್‌ ಟೆಸ್ಟ್‌ ಸರಣಿಯ ಬಳಿಕ ಇದು ಆಸ್ಟ್ರೇಲಿಯಾ ಟೆಸ್ಟ್‌ ತಂಡದ ಮೊದಲ ವಿದೇಶಿ ಪ್ರವಾಸವಾಗಿದೆ.

ಗಾಯದಿಂದ ಸಂಪೂರ್ಣ ಗುಣಮುಖರಾಗಿರುವ ಜಾಶ್‌ ಹೇಝಲ್‌ವುಡ್‌ ತಂಡಕ್ಕೆ ಮರಳಿದ್ದರೆ, ಇಂಗ್ಲೆಂಡ್‌ ವಿರುದ್ಧ ಕಳೆದ ಆಷಸ್ ಟೆಸ್ಟ್‌ ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ್ದ ಸ್ಕಾಟ್‌ ಬೊಲೆಂಡ್‌ ಟೆಸ್ಟ್‌ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಜಸ್ಟಿನ್‌ ಲ್ಯಾಂಗರ್‌ ಹೆಡ್‌ ಕೋಚ್‌ ಹುದ್ದೆ ತೊರೆದ ಬಳಿಕ ಕ್ರಿಕೆಟ್‌ ಆಸ್ಟ್ರೇಲಿಯಾ ಪ್ರಕಟಿಸಿದ ಮೊದಲ ತಂಡ ಇದಾಗಿದೆ.

‘ತಂಡದಲ್ಲಿರುವ ಕಸವಿದು’ : ಆಸೀಸ್‌ ಆಟಗಾರರ ವಿರುದ್ಧ ಹೇಡನ್‌ ಕಿಡಿ!

ಭದ್ರತಾ ಸಮಸ್ಯೆಯ ಕಾರಣಗಳಿಂದಾಗಿ 2021ರಲ್ಲಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ಪ್ರವಾಸದಿಂದ ಅರ್ಧಕ್ಕೆ ಬಿಟ್ಟು ವಾಪಸ್‌ ಆಗಿತ್ತು. ಆದರೆ ಇದೀಗ ನ್ಯೂಜಿಲೆಂಡ್‌ ತಂಡ ಕೂಡ ಮತ್ತೆ ಪಾಕಿಸ್ತಾನ ಪ್ರವಾಸ ಮಾಡಲು ಒಪ್ಪಿಕೊಂಡಿದೆ. ಅಂದಹಾಗೆ 1998ರಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು.

ಕಳೆದ ಆಷಸ್‌ ಟೆಸ್ಟ್‌ ಸರಣಿಯಲ್ಲಿ ಆಡದೆ ಇದ್ದ ಆಷ್ಟನ್ ಎಗರ್‌ ಕೂಡ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನುಳಿದಂತೆ ಕಳೆದ ಟೆಸ್ಟ್‌ ಸರಣಿಯಲ್ಲಿ ಕಾಣಿಸಿಕೊಂಡಿದ್ದ ಎಲ್ಲಾ ಆಟಗಾರರು ಪಾಕಿಸ್ತಾನ ಪ್ರವಾಸ ಮಾಡುವ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಹಂಗಾಮಿ ತರಬೇತುದಾರರಾಗಿ ಆಂಡ್ರೆ ಮೆಕ್‌ಡೊನಾಲ್ಡ್‌ ಪಾಕಿಸ್ತಾನ ಪ್ರವಾಸದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಆಸ್ಟ್ರೇಲಿಯಾ ಮುಖ್ಯ ಕೋಚ್‌ ಹುದ್ದೆಗೆ ಹಠಾತ್‌ ರಾಜೀನಾಮೆ ಕೊಟ್ಟ ಲ್ಯಾಂಗರ್‌!

ಮಾರ್ಚ್‌ 4 ರಿಂದ ರಾವಲ್ಪಿಂಡಿಯಲ್ಲಿ ಮೊದಲನೇ ಟೆಸ್ಟ್ ಆರಂಭವಾಗಲಿದ್ದು, ಮಾರ್ಚ್‌ 12 ರಿಂದ ಕರಾಚಿಯಲ್ಲಿ ಎರಡನೇ ಹಾಗೂ ಮಾರ್ಚ್‌ 21 ರಿಂದ ಲಾಹೋರ್‌ನಲ್ಲಿ ಮೂರನೇ ಹಾಗೂ ಪಾಕಿಸ್ತಾನ ಪ್ರವಾಸದ ಅಂತಿಮ ಪಂದ್ಯ ಆರಂಭವಾಗಲಿದೆ.

ಇದರ ಜೊತೆಗೆ ಈ ಎರಡೂ ತಂಡಗಳು ಮೂರು ಪಂದ್ಯಗಳ ಓಡಿಐ ಸರಣಿ ಹಾಗೂ ಏಕೈಕ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಸೀಮಿತ ಓವರ್‌ಗಳ ಆಸ್ಟ್ರೇಲಿಯಾ ತಂಡವನ್ನು ಶೀಘ್ರದಲ್ಲಿಯೇ ಕ್ರಿಕೆಟ್‌ ಆಸ್ಟ್ರೇಲಿಯಾ ಪ್ರಕಟಿಸಲಿದೆ.

ಪ್ರಸಾದ್ ಆಯ್ಕೆಯ ಶ್ರೇಷ್ಠ ಟೀಮ್ ಇಂಡಿಯಾದಲ್ಲಿ ರೋಹಿತ್‌ಗೆ ಇಲ್ಲ ಸ್ಥಾನ!

ಆಸ್ಟ್ರೇಲಿಯಾ ಟೆಸ್ಟ್‌ ತಂಡ: ಪ್ಯಾಟ್ ಕಮಿನ್ಸ್‌(ನಾಯಕ), ಆಷ್ಟನ್ ಎಗರ್, ಸ್ಕಾಟ್ ಬೊಲೆಂಡ್, ಅಲೆಕ್ಸ್ ಕೇರಿ, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜಾಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜಾಶ್ ಇಂಗ್ಲಿಸ್, ಉಸ್ಮಾನ್ ಖವಾಜ, ಮಾರ್ನಸ್ ಲಾಬುಶೇನ್‌, ನೇಥನ್ ಲಯಾನ್, ಮಿಚೆಲ್ ಮಾರ್ಷ್, ಮೈಕೆಲ್ ನೇಸರ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್‌, ಮಿಚೆಲ್ ಸ್ವೆಪ್ಸನ್‌ , ಡೇವಿಡ್ ವಾರ್ನರ್



Read more

[wpas_products keywords=”deal of the day gym”]