Karnataka news paper

ಬ್ಯಾಂಕ್‌ಗಳ ಕೆಟ್ಟ ಸಾಲದ ಪ್ರಮಾಣದಲ್ಲಿ ಗಣನೀಯ ಇಳಿಕೆ: ಸಂಸತ್ತಿಗೆ ಮಾಹಿತಿ ನೀಡಿದ ಕೇಂದ್ರ!


ಹೊಸದಿಲ್ಲಿ: ಮಾರ್ಚ್ 2019 ರ ಅಂತ್ಯದ ವೇಳೆಗೆ 9.33 ಲಕ್ಷ ಕೋಟಿ ರೂ.ಗಳಿಷ್ಟಿದ್ದ ಒಟ್ಟು ಕೆಟ್ಟ ಸಾಲ, 2021 ರ ಸೆಪ್ಟೆಂಬರ್ ತ್ರೈಮಾಸಿಕದ ಅಂತ್ಯದ ವೇಳೆಗೆ 8 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಸ್ಪಷ್ಟಪಡಿಸಿದೆ. ಈ ಪೈಕಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ (ಪಿಎಸ್‌ಬಿ) ಕೆಟ್ಟ ಸಾಲದ ಅನುಪಾತವು ಸುಮಾರು ಶೇ.80 ರಿಂದ ಶೇ.72 ರಷ್ಟು ಕಡಿಮೆಯಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್‌ಗಳ ಜಾಗತಿಕ ಕಾರ್ಯಾಚರಣೆಗಳ ಡೇಟಾವನ್ನು ಉಲ್ಲೇಖಿಸಿ, ಲೋಕಸಭೆಗೆ ಉತ್ತರಿಸಿದ ಹಣಕಾಸು ರಾಜ್ಯ ಸಚಿವ ಭಾಗವತ್ ಕರಾಡ್, ಬ್ಯಾಂಕ್‌ಗಳ ಒಟ್ಟು ಅನುತ್ಪಾದಕ ಆಸ್ತಿ (ಜಿಎನ್‌ಪಿಎ) 9.33 ಲಕ್ಷ ಕೋಟಿ ರೂ.ನಿಂದ 8 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದರು. ಒಟ್ಟು ಶೇ. 6.93 ರಷ್ಟು ಇಳಿಕೆಯಾಗಿದೆ ಎಂದು ಕರಾಡ್ ಸ್ಪಷ್ಟಪಡಿಸಿದರು.

ಇನ್ನು ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ಗಳ (SCBs) ಅನುಪಾತದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ GNPA ಗಳು ಶೇ.79.2 ರಿಂದ ಶೇ. 72.3ಕ್ಕೆ ಇಳಿದಿದೆ ಎಂದೂ ಕರಾಡ್ ಸದನಕ್ಕೆ ಮಾಹಿತಿ ನೀಡಿದರು. ಆದಾಗ್ಯೂ, ಈ ಅವಧಿಯಲ್ಲಿ ಎಸ್‌ಸಿಬಿಗಳ ಅನುಪಾತದಲ್ಲಿ ಖಾಸಗಿ ವಲಯದ ಬ್ಯಾಂಕ್‌ಗಳ ಒಟ್ಟು ಎನ್‌ಪಿಎಗಳು ಶೇ 19.4 ರಿಂದ ಶೇ 24.9 ಕ್ಕೆ ಏರಿಕೆಯಾಗಿದೆ ಎಂದು ಕರಾಡ್ ಹೇಳಿದರು.

ಸಾಲ ವಸೂಲಾತಿಯಲ್ಲಿ ಬ್ಯಾಂಕ್‌ಗಳ ಮುನ್ನಡೆ! ಇದು ಸಾಧ್ಯವಾಗಿದ್ದು ಹೇಗೆ?
ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ 44.51 ಕೋಟಿ ಖಾತೆಗಳನ್ನು ತೆರೆಯಲಾಗಿದ್ದು, 10,000 ರೂ. ವರೆಗಿನ ಮಿತಿಯ ಓವರ್‌ಡ್ರಾಫ್ಟ್ ಸೌಲಭ್ಯದಂತಹ ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅರ್ಹ ಖಾತೆದಾರರಿಗೆ ಮತ್ತು ಕೋವಿಡ್ ಸಾಂಕ್ರಾಮಿಕ ರೋಗದಿಂದ ಪ್ರಭಾವಿತವಾಗಿರುವ ಬಡ ಬೀದಿ ವ್ಯಾಪಾರಿಗಳಿಗೆ ಸಹಾಯ ಮಾಡಲು, ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ(PM SVANIdhi) ಯೋಜನೆ ಜಾರಿ ಮಾಡಲಾಗಿದೆ ಎಂದು ಕರಾಡ್ ತಿಳಿಸಿದರು.

PM SVANIdhi ಯೋಜನೆ ಅಡಿಯಲ್ಲಿ 32.69 ಲಕ್ಷ ಬೀದಿ ವ್ಯಾಪಾರಿಗಳಿಗೆ ಜನವರಿ 31, 2022 ರವರೆಗೆ 3,364 ಕೋಟಿ ರೂಪಾಯಿಗಳ ಸಾಲವನ್ನು ನೀಡಲಾಗಿದೆ ಎಂದು ಕರಾಡ್‌ ಸಂಸತ್ತಿಗೆ ಮಾಹಿತಿ ನೀಡಿದರು. ಅಲ್ಲದೇ ದೇಶಾದ್ಯಂತ ನವೆಂಬರ್ 26, 2021 ರವರೆಗೆ ಒಟ್ಟು 94,063 ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಲಾಗಿದೆ ಎಂದು ಕರಾಡ್ ಸ್ಪಷ್ಟಪಡಿಸಿದರು.

ಲೋಕಸಭೆಯಲ್ಲಿ ಮೋದಿ ಸರ್ಕಾರದ ವಿರುದ್ಧ ‘ಸಾಲ’ದ ಅಸ್ತ್ರ ಪ್ರಯೋಗಿಸಿದ ರಾಹುಲ್..!

ವಾಣಿಜ್ಯ ಕ್ಷೇತ್ರದ 20 ಕ್ಕೂ ಹೆಚ್ಚು ವಲಯಗಳಿಗೆ ಸಂಬಂಧಿಸಿದ ಅತ್ಯುತ್ತಮ ಲೇಖನಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಆಳವಾದ ಮಾಹಿತಿಗಾಗಿ ನೀವು ಎಕನಾಮಿಕ್ ಟೈಮ್ಸ್‌ ಓದಬಹುದು. ಮಾಹಿತಿಯುಕ್ತ ಲೇಖನಗಳನ್ನು ಓದಲು ಎಕನಾಮಿಕ್ ಟೈಮ್ಸ್ ಇಲ್ಲಿ ಕ್ಲಿಕ್ ಮಾಡಿ.



Read more…

[wpas_products keywords=”deal of the day”]