ಹೊಸಕೋಟೆ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸ್ವಾಭಿಮಾನಿ ಬಣದಿಂದ ಕಾಂಗ್ರೆಸ್ ಸೇರ್ಪಡೆಗೊಂಡಿರುವ ಶರತ್ ಬಚ್ಚೇಗೌಡ ಹಾಗೂ ಅವರ ಕಾರ್ಯಕರ್ತರೊಂದಿಗೆ ರಾಜ್ಯ ನಾಯಕರ ಸೂಚನೆ ಮೇರೆಗೆ ಹೊಂದಿಕೊಂಡು ಹೋಗುತ್ತಿದ್ದೇವೆ. ಆದರೆ ಕೆಲವರು ಪಕ್ಷಕ್ಕೆ ಸಮಸ್ಯೆ ಉಂಟುಮಾಡುವುದಕ್ಕೆ ಇಲ್ಲ ಸಲ್ಲದ ಆರೋಪ ಮಾಡಿ ನಾಯಕರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಇದರ ಸತ್ಯಾಂಶದ ಬಗ್ಗೆ ನಾಯಕರಿಗೆ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.
ನಾವು ಮೂಲ ಕಾಂಗ್ರೆಸ್ಸಿಗರು ಬೇರೆ ಪಕ್ಷದವರ ಮಾತು ಕೇಳಿ ಷಢ್ಯಂತ್ರ ಮಾಡುತ್ತಿದ್ದಾರೆ. ಹೊಸಕೋಟೆ ಕ್ಷೇತ್ರದಲ್ಲಿ 30 ಗ್ರಾಮ ಪಂಚಾಯಿತಿಯಲ್ಲಿ 25 ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕಾರದಲ್ಲಿದ್ದಾರೆ. ಯಾವುದೇ ಒಳ ಜಗಳ ಇಲ್ಲ, ಪಕ್ಷದಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಹೊಸಕೋಟೆ ಬಂಡಾಯ: ಶರತ್ ಬಚ್ಚೇಗೌಡ ವಿರುದ್ಧ ಕೈ ಕಾರ್ಯಕರ್ತರಿಂದ ಸಿದ್ದರಾಮಯ್ಯಗೆ ದೂರು!
ಜಿಪಂ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಸಂಘಟನೆಯಲ್ಲಿ ಕಾಣಿಸಿಕೊಳ್ಳದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರ ಇದ್ದಾಗ ಎಲ್ಲೆಡೆ ಓಡಾಡುತ್ತಿದ್ದ ನಾಯಕರು ಇದೀಗ ಸ್ವಲ್ಪ ದೂರ ಉಳಿದಿದ್ದಾರೆ. ಅವರನ್ನೆಲ್ಲಾ ಒಟ್ಟಿಗೂಡಿಸಿಕೊಂಡು ಸಂಘಟನೆಯತ್ತ ಗಮನ ನೀಡುತ್ತೇವೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷರ ಮೇಲೆ ದೂರುಗಳಿದ್ದರೆ ಬ್ಲಾಕ್ ಅಧ್ಯಕ್ಷರ ಬಳಿ ದೂರು ನೀಡಬಹುದಿತ್ತು. ಆದರೆ ಗೊಂದಲ ಸೃಷ್ಟಿಸುವ ಉದ್ದೇಶದಿಂದಲೇ ನಾಯಕರ ಬಳಿ ಹೋಗಿದ್ದಾರೆ. ಮೂಲ ಕಾಂಗ್ರೆಸಿಗರು ಯಾರೂ ಪಕ್ಷ ಬಿಟ್ಟು ಹೋಗಲ್ಲ, ಪಕ್ಷದ ಹುದ್ದೆಗಳನ್ನು ಮಾರಿಕೊಂಡಿದ್ದರೆ ಸಾಕ್ಷಿ ಸಮೇತ ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.
ಎನ್.ನಾಗರಾಜು ಅವರನ್ನು ಕರೆತರುವ ಉದ್ದೇಶ ಇರಬಹುದೇನೊ ಗೊತ್ತಿಲ್ಲ, ಪಕ್ಷಕ್ಕೆ ಡ್ಯಾಮೆಜ್ ಆದರೆ ಹಿರಿಯ ನಾಯಕರ ಗಮನಕ್ಕೆ ತಂದು ಕ್ರಮಕೈಗೊಳ್ಳುತ್ತೇವೆ ಎಂದ ಅವರು, ಸಿದ್ದರಾಮಯ್ಯ ಅವರು ಗೋವಾ ಚುನಾವಣಾ ಪ್ರಚಾರಕ್ಕೆ ಹೋಗಿದ್ದಾರೆ. ಬಂದ ಕೂಡಲೇ ಕ್ಷೇತ್ರದ ಬಗ್ಗೆ ವರದಿ ನೀಡುತ್ತೇನೆ, ಅಲ್ಲದೆ, ಕೆಪಿಸಿಸಿ ಕಾರಾರಯಧ್ಯಕ್ಷ ರಾಮಲಿಂಗಾರೆಡ್ಡಿ, ಬೈರತಿ ಸುರೇಶ್, ಹಾಗೂ ವೀರಪ್ಪ ಮೋಯ್ಲಿಅವರನ್ನೂ ಭೇಟಿಯಾಗಿ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.
ಬ್ಲಾಕ್ ಅಧ್ಯಕ್ಷ ಹೇಮಂತ್ ಮಾತನಾಡಿ, ಜಿಲ್ಲಾಧ್ಯಕ್ಷ ಮುನಿಶಾಮಣ್ಣ ಅವರನ್ನು ಗುರಿಯಾಗಿಸಿ ಟೀಕೆ ಮಾಡುತ್ತಿದ್ದಾರೆ. ರಾಜ್ಯ ನಾಯಕರು ಸೂಚಿಸಿರುವ ನಾಯಕರೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇವೆ. ಪದ್ಮಾವತಿ ಸುರೇಶ್ 45 ಸಾವಿರ ಮತ ತೆಗೆದಕೊಂಡಿದ್ದಾರೆ. ಹೊಸಕೋಟೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತರು ಗಮನಹರಿಸಬೇಕು ಎಂದು ಹೇಳಿದರು.
Read more
[wpas_products keywords=”deal of the day sale today offer all”]