ಕೋವಿಡ್‌ನ ಪರಿಣಾಮದಿಂದ ಮುಖಾಮುಖಿಯಾಗಿ ತರಗತಿಗಳನ್ನು ನಡೆಸಲಾಗುವುದಿಲ್ಲ ಎಂಬ ಕಾರಣವನ್ನು ಮೆಟ್ಟಿ ನಿಂತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಕಳೆದ ವರ್ಷ ರೂಪುಗೊಂಡ ‘ಮನೆಯಲ್ಲೇ ಕಲಿ – ಕನ್ನಡ ಕಲಿ’ ಯಶಸ್ವಿ ಅಭಿಯಾನವು ಸಿಂಗಪುರದಲ್ಲಿ ಎರಡನೇ ವರ್ಷಕ್ಕೆ ಯಶಸ್ವಿಯಾಗಿ ಕಾಲಿಟ್ಟಿದೆ. ಇದರ ಪ್ರಯುಕ್ತ ಭಾನುವಾರ 6 ಪೆಬ್ರವರಿ 2022ರಂದು ರಸಪ್ರಶ್ನೆ ಕಾರ್ಯಕ್ರಮ, ಪೋಷಕರೊಂದಿಗಿನ ಮಾತು, ಕನ್ನಡ ಕಲಿ ತರಗತಿಗಳ ವಿವರ ಹಾಗೂ ಪ್ರಶ್ನೋತ್ತರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಮಕ್ಕಳಿಗೆ ಕನ್ನಡವನ್ನು ಕಲಿಸಲು ನವನವೀನ ರೀತಿಯ ಪಠ್ಯಕ್ರಮಗಳೊಂದಿಗೆ ಶ್ರೀ ರಾಮನಾಥ್ ನೇತೃತ್ವದ ಶಿಕ್ಷಕವೃಂದ ಸಿದ್ಧಗೊಂಡಿದೆ. ಕನ್ನಡ ಶಿಕ್ಷಕರಾಗಿ ಶ್ರೀಮತಿ ಶಾಮಲ, ಶ್ರೀವಿದ್ಯಾ ವೆಂಕಟೇಶ್, ಮಾಲಾ ನಾಗರಾಜ್, ನಿಧಿ ಅಶೋಕ ರಾವ್, ಸರಸ್ವತಿ ಸಾಮಗ ಹಾಗು ಮುತ್ತಣ್ಣ ಬಡಿಗೇರ ಅವರು ತಮ್ಮ ಸೇವೆಯನ್ನು ಮುಂದುವರೆಸಿಕೊಂಡು ಹೋಗಲಿದ್ದಾರೆ. ಮಕ್ಕಳು ಮನೆಯಲ್ಲೇ ಕುಳಿತು ಕನ್ನಡವನ್ನು ಕಲಿಯುವಂತೆ ಮಾಡುವ ಕನ್ನಡ ಸಂಘ (ಸಿಂಗಪುರ)ದ ಆಶಯಕ್ಕೆ ಈ ಬಾರಿಯೂ ಕೂಡ 50ಕ್ಕೂ ಮೇಲ್ಪಟ್ಟು ಮಕ್ಕಳು ನೋಂದಾಯಿಸಿದ್ದಾರೆ, ಭಾಗವಹಿಸಿದ ಮಕ್ಕಳ ಉತ್ಸಾಹ, ಪೋಷಕರ ಬೆಂಬಲ ಹಾಗು ಮಕ್ಕಳು ಕನ್ನಡತನವನ್ನು ಕಾಪಾಡಿಕೊಳ್ಳಲಿ ಎನ್ನುವ ಹಂಬಲ ಕನ್ನಡ ಕಲಿಸುವ ಸಂಘದ ನಿರಂತರ ಪ್ರಯತ್ನಕ್ಕೆ ಹಿಡಿದ ಕನ್ನಡಿ ಎಂದೆನ್ನಬಹುದು. ಸಿಂಗಪುರದ ಕನ್ನಡ ಮಕ್ಕಳಿಗೆಂದೇ ಪ್ರತ್ಯೇಕವಾಗಿ ಸಂಘದಿಂದ ಮುದ್ರಿತಗೊಂಡಿರುವ ಪುಸ್ತಕಗಳನ್ನು ಎಲ್ಲಾ ಮಕ್ಕಳಿಗೆ ನೀಡಲಾಗುವುದು, ಅಕ್ಷರಭ್ಯಾಸ, ಚಟುವಟಿಕೆಗಳ ಮೂಲಕ ಕನ್ನಡ ಕಲಿಕೆಯ ಸುಂದರ ಪಯಣದಲ್ಲಿ ಮಕ್ಕಳು ಪಾಲ್ಗೊಳ್ಳಲಿದ್ದಾರೆಂಬುದು ಸಂತಸದ ವಿಷಯ.

‘ಮನೆಯಲ್ಲೇ ಕಲಿ-ಕನ್ನಡ ಕಲಿ’ಯ 2022ರ ಸಾಲಿನ ತರಗತಿಗಳು ಶುಭಾರಂಭ
ಕಳೆದ ವರ್ಷ ಮೇ 2, 2021ರಂದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಭರಣ ಹಾಗು ಕನ್ನಡ ನಾಡಿನ ಮೆಚ್ಚಿನ ಕವಿಗಳಾದ ಬಿ.ಆರ್.ಲಕ್ಷ್ಮಣರಾವ್ ಮತ್ತು ಡುಂಡಿರಾಜ ಅವರ ಪ್ರಸ್ತುತಿ ” ಮನೆಯಲ್ಲೇ ಕಲಿ – ಕನ್ನಡ ಕಲಿ” ಅಭಿಯಾನಕ್ಕೆ ನಾಂದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು
ಕನ್ನಡ ಸಂಘ (ಸಿಂಗಪುರ)
Read more
[wpas_products keywords=”deal of the day sale today offer all”]